Monday, December 23, 2024

ಇದರ ಹಿಂದೆ ಯಾರೇ ಇದ್ದರೂ ಕ್ರಮ ಕೈಗೊಳ್ಳಿ : ಹೆಚ್​ಡಿಕೆ

 ಕೋಲಾರ : ಮಂಗಳೂರು ಆಟೋ ಸ್ಫೋಟ ಪ್ರಕರಣದ ಬಗ್ಗೆ ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ಧಾರೆ.

ಕೋಲಾರದ ಕೋರಗೊಂಡನಹಳ್ಳಿಯಲ್ಲಿ ಮಾತನಾಡಿದ ಅವರು, ಮೊದಲೇ ಕರಾವಳಿ ಪ್ರದೇಶ ಕೋಮುಗಲಭೆಗೆ ಪ್ರಸಿದ್ದವಾಗಿದೆ. ಆ ವಾತಾವರಣ ನಿರ್ಮಾಣ ಮಾಡಿರೋದು ಕಾಂಗ್ರೆಸ್, ಬಿಜೆಪಿ. ಈ ರೀತಿಯ ಚಟುವಟಿಕೆಗಳಿಂದ ಆ ಭಾಗದ ವಾಣಿಜ್ಯ, ವ್ಯವಹಾರ, ಅಭಿವೃದ್ಧಿಗೆ ತೊಂದರೆ ಆಗ್ತಿದೆ. ಇಂತಹ ಘಟನೆಗಳು ರಾಜ್ಯದಲ್ಲಿ ಆಗಬಾರದು ಎಂದರು.

ಶಾಂತಿಯುತವಾದ ರಾಜ್ಯದಲ್ಲಿ ಪದೇ ಪದೇ ಜವಾಬ್ದಾರಿಯುತ ಸ್ಥಾನದಲ್ಲಿರೋರೆ ಕೋಮು ದಳ್ಳುರಿಗೆ ಪ್ರಚೋದನೆ ನೀಡುತ್ತಿದ್ದಾರೆ. ಅಲ್ಲಿನ ಧಾರ್ಮಿಕ ಗುರುಗಳು ಇಂತಹ ಘಟನೆಗಳಿಗೆ ಪ್ರಚೋಧನೆ ನೀಡಬಾರದು. ಈ ರೀತಿಯ ಪ್ರಕರಣಕ್ಕೆ ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ. ಇದರ ಹಿಂದೆ ಯಾರೆ ಇದ್ದರೂ ಕೂಡ ಕಠಿಣ ಕ್ರಮ ಆಗಲೇ ಬೇಕು. ಕೃತ್ಯಕ್ಕೆ ಗಾಯಾಳು ಯುವಕ ಒಬ್ಬನೆ ಇರಲ್ಲ, ಅವರ ಹಿಂದೆ ಯಾರಿದ್ದಾರೆ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು.

RELATED ARTICLES

Related Articles

TRENDING ARTICLES