Sunday, November 24, 2024

ಕೆಪಿಟಿಸಿಎಲ್‌ ಪರೀಕ್ಷೆ ಅಕ್ರಮ; 4 ಆರೋಪಿಗಳ ಬಂಧನ

ಬೆಳಗಾವಿ: ಕೆಪಿಟಿಸಿಎಲ್‌ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೆ 4 ಆರೋಪಿಗಳನ್ನು ಗೋಕಾಕ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮೂಡಲಗಿ ತಾಲೂಕು ಅರಬಾವಿಯ ಮಂಜುನಾಥ ರಾಮಪ್ಪ ಮಾಳೆ (23), ಪುಂಡಲೀಕ ಫಕೀರಪ್ಪ ಬನಾಜ (26), ಮಾರುತಿ ರಾಮಣ್ಣ ಹೊಲದವರ (27) ಹಾಗೂ ಮೂಡಲಗಿ ತಾಲೂಕು ಕಲ್ಲೋಳಿಯ ಮಹಾದೇವ ಹಣಮಂತ ದಾಸನಾಳ (26) ಬಂಧಿತರಾಗಿದ್ದಾರೆ.

ನಾಲ್ವರ ಪೈಕಿ ಆರೋಪಿ ಮಂಜುನಾಥ ಮಾಳಿ ಎಲೆಕ್ಟ್ರಾನಿಕ್‌ ಡಿವೈಸ್‌ಗಳನ್ನು ಮೊಡಿಫೈ ಮಾಡಿದ್ದಲ್ಲದೇ ಪರೀಕ್ಷೆಗೆ ಕುಳಿತ ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್‌ ಡಿವೈಸ್‌ ಮತ್ತು ಮೈಕ್ರೋಚಿಪ್‌ ಕೊಟ್ಟು ಕಳಿಸಿದ್ದಾನೆ. ಈತನಿಂದ ಮೊಬೈಲ್‌ ಮತ್ತು ಒಂದು ಕಾರ್‌ ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳು ಆ.7ರಂದು ಎಲೆಕ್ಟ್ರಾನಿಕ್‌ ಡಿವೈಸ್‌ ಮತ್ತು ಮೈಕ್ರೋ ಚಿಪ್‌ ಒಯ್ದು ಕೆಪಿಟಿಸಿಎಲ್‌ ಜ್ಯೂನಿಯರ್‌ ಅಸಿಸ್ಟೆಂಟ್‌ ಪರೀಕ್ಷೆ ಬರೆದವರು. ಇವರೆಲ್ಲರಿಂದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿದೆ.

ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 2ನೇ ವಾರದಲ್ಲಿ ಸಿದ್ದಪ್ಪ ಮದಿಹಳ್ಳಿ (20) ಎಂಬ ಯುವಕನನ್ನು ಬಂಧಿಸಲಾಗಿತ್ತು.

RELATED ARTICLES

Related Articles

TRENDING ARTICLES