Tuesday, November 5, 2024

ಅಬ್ಬಬ್ಬಾ..! ಕರುನಾಡಲ್ಲೇ ಕೋಟಿ ಕಾಂತಾರ ಟಿಕೆಟ್ಸ್ ಸೋಲ್ಡ್

ಕಾಂತಾರ ಸಿನಿಮಾ ಯಾರೂ ಸರಿಗಟ್ಟಲಾಗದ ದಾಖಲೆ ಬರೆದಿದೆ. ಈ ಚಿತ್ರಕ್ಕೆ ಸರಿಸಾಟಿಯಾಗುವ ಕಥೆಯೂ ಇಲ್ಲವೆಂಬಂತೆ ಎಲ್ಲರ ಮನಸೂರೆಗೊಂಡಿದೆ. ಕಂಡು ಕೇಳರಿಯದ ಕಥೆ, ಬಾಕ್ಸ್​ ಆಫೀಸ್​ ಕಲೆಕ್ಷನ್​ ಧೂಳಿಪಟ ಮಾಡಿದೆ. ಇದೀಗ ಕಾಂತಾರ ದಾಖಲೆಗಳ ಸರಮಾಲೆಗೆ ಮತ್ತೊಂದು ಕೊಂಡಿ ಸೇರಿಕೊಂಡಿದೆ. ಯೆಸ್​.. ಏನಿದು ಹೊಸ ವಿಷ್ಯ ಅಂತೀರಾ..? ನೀವೇ ಓದಿ.

  • ದೇಶ ವಿದೇಶಗಳಲ್ಲೂ ಕಲೆಕ್ಷನ್​​ನಲ್ಲಿ ಕಾಂತಾರ ಮಿಂಚಿನ ವೇಗ..!

ಕರಾವಳಿಯ ಪ್ರಾದೇಶಿಕತೆಯ ಚಿತ್ರಕ್ಕೆ ಯಾರೂ ಕಂಡು ಕೇಳರಿಯದ ರೆಸ್ಪಾನ್ಸ್​ ಸಿಕ್ಕಿದ್ದು ಸ್ಯಾಂಡಲ್​ವುಡ್​ ಇತಿಹಾಸದಲ್ಲಿ ದಾಖಲೆಯೇ ಸರಿ. ರಿಲೀಸ್​ ಆದ ದಿನದಿಂದ್ಲೂ ಯಾರೂ ಊಹೆ ಕೂಡ ಮಾಡದ ಮಟ್ಟಕ್ಕೆ ಬಾಕ್ಸ್​ ಆಫೀಸ್​ ಉಡೀಸ್​ ಮಾಡ್ತಿದೆ ಕಾಂತಾರ. ಒಟ್ಟಾರೆ 400 ಕೋಟಿಗೂ ಅಧಿಕ ಮೊತ್ತ ಕಲೆಕ್ಷನ್​ ಮಾಡಿ, ಸಿನಿಪಂಡಿತರ ಲೆಕ್ಕಾಚಾರಗಳನ್ನು ಉಲ್ಟಾ ಪಲ್ಟಾ ಮಾಡಿದ ಮೋಸ್ಟ್​​​ ಇಂಟ್ರೆಸ್ಟಿಂಗ್​​ ಕಹಾನಿ ಇದು.

ಕೇವಲ ಕರ್ನಾಟಕಕ್ಕೆ ಸೀಮಿತವಾಗಿದ್ದ ಚಿತ್ರ, ಪರಭಾಷೆಗಳಿಗೂ ಡಬ್​ ಆಗಿ ಕಮಾಲ್​ ಮಾಡ್ತಿದೆ. ಜೊತೆಗೆ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸ್ಯಾಂಡಲ್​ವುಡ್​​​ ಅಂದ್ರೆ ನಿಬ್ಬೆರಗಾಗುವಂತೆ ಮಾಡಿದೆ. ರಿಷಬ್​​ ಶೆಟ್ಟಿ ಆ್ಯಕ್ಟಿಂಗ್​​​ ಬೆಚ್ಚಿ ಬೀಳಿಸುವಂತೆ ಮಾಡಿದೆ. ಈ ಹಿಂದೆ ಒಂದೇ ಥಿಯೇಟರ್​​ನಲ್ಲಿ ಒಂದು ಲಕ್ಷದ 30 ಸಾವಿರ ಟಿಕೆಟ್​ ಮಾರಾಟವಾಗಿ ಮ್ಯಾಜಿಕ್​ ಮಾಡಿದ್ದ ಕಾಂತಾರ ಮತ್ತೊಂದು ಹೊಸ ದಾಖಲೆ ಬರೆದಿದೆ. ಕರುನಾಡಿನಲ್ಲೇ ಒಂದು ಕೋಟಿ ಕಾಂತಾರ ಟಿಕೆಟ್​ ಸೋಲ್ಡ್​ ಔಟ್ ಆಗಿದೆ.

ಅಲ್ಲಿಗೆ ನಮ್ಮ ಕರ್ನಾಟಕ ಒಂದರಲ್ಲೇ ಕೋಟಿ ಟಿಕೆಟ್ಸ್ ಅಂದ್ರೆ, ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್​​ಗಳಿಂದ ಆವರೇಜ್ 180- 200 ರೂಪಾಯಿ ಅಂದುಕೊಂಡರೂ 180ರಿಂದ 200 ಕೋಟಿ ಕರುನಾಡಲ್ಲೇ ಗಳಿಸಿದೆ ಕಾಂತಾರ. ಉಳಿದಂತೆ ಪಕ್ಕದ ಆಂಧ್ರದಲ್ಲಿ 50 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿದೆ. ತಮಿಳು, ಮಲಯಾಳಂನಲ್ಲಿ ಅಲ್ಲಿನ ಪ್ರಾದೇಶಿಕ ಚಿತ್ರಗಳು ಕೂಡ ದಂಗಾಗೋ ರೇಂಜ್​ಗೆ ಪೈಸಾ ವಸೂಲ್ ಮಾಡ್ತಿದೆ.

  • ಪ್ಯಾನ್​ ಇಂಡಿಯಾ ಸೂಪರ್ ಸ್ಟಾರ್ ರಿಷಬ್ ಮಿಂಚು
  • 500 ಕೋಟಿ ಕ್ಲಬ್​ನತ್ತ ಕಾಂತಾರ ಬಾಕ್ಸ್ ಆಫೀಸ್ ಕಿಚ್ಚು

ಅಬ್ಬಬ್ಬಾ..! ಕರ್ನಾಟಕದಲ್ಲೇ ಒಂದು ಕೋಟಿಗೂ ಅಧಿಕ ಟಿಕೆಟ್​ ಮಾರಾಟ ಮಾಡಿದ ದಾಖಲೆ ಕಾಂತಾರ ಚಿತ್ರದ ಪಾಲಾಗಿದೆ. ಹೊಂಬಾಳೆ ಬ್ಯಾನರ್ ಸದ್ಯ​​​ ಯಶಸ್ಸಿನ ಉತ್ತುಂಗದಲ್ಲಿದೆ. ಕಾಂತಾರ ರಿಲೀಸ್​ ದಿನದಿಂದ್ಲೂ ಇಂದಿಗೂ ಅದೇ ಕ್ರೇಜ್​​ ಕ್ರಿಯೇಟ್​ ಮಾಡಿದೆ. ಮೌತ್​ ಟು ಮೌತ್​​ ಪ್ರಚಾರ ಗಿಟ್ಟಿಸಿದ ಕಾಂತಾರ ಗಲ್ಲಿಯಿಂದ ದಿಲ್ಲಿವರೆಗೂ ವ್ಯಾಪಿಸಿದೆ. ವಿದೇಶಗಳಲ್ಲೂ ಹೌಸ್​ಫುಲ್​ ಪ್ರದರ್ಶನ ಕಾಣ್ತಿದೆ.

ಶರವೇಗದಲ್ಲಿ ಮುನ್ನುಗ್ತಿರೋ ಕಾಂತಾರ ಹಲವು ವಿವಾದಗಳಿಗೆ ತತ್ತಾದ್ರೂ ಇಂದಿಗೂ ಪ್ರೇಕ್ಷಕರ ಮೋಸ್ಟ್​ ಫೇವರಿಟ್​. ರಿಪೀಟ್​ ಮೋಡ್​​ನಲ್ಲಿ ಸಿನಿಮಾ ಎಂಜಾಯ್​ ಮಾಡ್ತಿರೋದ್ರಿಂದ ಕಾಂತಾರ ಟಾಪ್​ ಗೇರ್​ನಲ್ಲಿದೆ. ಇನ್ನು ಒಂದೇ ಚಿತ್ರದ ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ರಿಷಬ್​ ಹೊರಹೊಮ್ಮಿದ್ದಾರೆ.  ರಜನಿಕಾಂತ್​​, ಅಮಿತಾಭ್​​​​, ಧನುಷ್​​​​​, ಎಬಿಡಿ ಹೀಗೆ ಎಲ್ಲರ ಉಸಿರಲ್ಲೂ ಪಂಜುರ್ಲಿ ಕೋಲ ಹಸಿರಾಗಿದೆ.

ಕಾಂತಾರ ಚಿತ್ರದ ಮೂಲಕ ಸೌತ್​​ ಸಿನಿಮಾಗಳ ಸುವರ್ಣ ಯುಗ ಶುರುವಾಗಿದೆ. ಅಬ್ಬರ, ಆಡಂಭರವಿಲ್ಲದೇ ಜಸ್ಟ್ 15 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ, 400 ಕೋಟಿ ಗಳಿಸಿ, 500 ಕೋಟಿ ಕ್ಲಬ್​ನತ್ತ ಮುನ್ನುಗ್ತಿರೋದು ಅಚ್ಚರಿಯ ಸಂಗತಿ. ಅಜನೀಶ್​ ಮ್ಯೂಸಿಕ್​​​, ರಿಷಬ್​ ಸೇರಿದಂತೆ ಸ್ಥಳಿಯ ಕಲಾವಿದ್ರ ಸ್ವಾಭಾವಿಕ ನಟನೆ, ಧೈವದ ಮಹಿಮೆ ಎಲ್ಲವೂ ಕಾಂತಾರವನ್ನು ಗಡಿ ಮೀರಿ ಸದ್ದು ಮಾಡುವಂತೆ ಮಾಡಿದೆ. ಎನಿವೇ, ಇನ್ನಷ್ಟು ದಾಖಲೆಗಳು ಕಾಂತಾರ ಚಿತ್ರದ ಪಾಲಾಗಲಿ ಎಂದು ಆಶೀಸೋಣ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್​ ಟಿವಿ 

RELATED ARTICLES

Related Articles

TRENDING ARTICLES