Tuesday, November 5, 2024

ಭಾರತದ ಜಿ20 ಅಧ್ಯಕ್ಷ ಸ್ಥಾನದ ಲಾಂಛನ, ಥೀಮ್ ಲಾಂಚ್‌

ಭಾರತದ ಆಧುನಿಕತೆ, ತಂತ್ರಜ್ಞಾನ, ಅಭಿವೃದ್ಧಿಯ ಪಥ, ಉದ್ಯೋಗ, ಶಿಕ್ಷಣವನ್ನು ಪ್ರತಿಬಿಂಬಿಸುವ ವಿಡಿಯೋ. ದೃಶ್ಯ ಮುಗಿಯುತ್ತಿದ್ದಂತೆ ಅರಳಿಕೊಳ್ಳುವ ಕಮಲ. ಇದು, ಪ್ರಧಾನಿ ನರೇಂದ್ರ ಮೋದಿ ಲಾಂಚ್‌ ಮಾಡಿದ ಭಾರತದ ಜಿ20 ಅಧ್ಯಕ್ಷ ಸ್ಥಾನದ ಲಾಂಛನ.

ಹೌದು, ಪ್ರಧಾನಿ ನರೇಂದ್ರ ಮೋದಿ ಇಂದು ಭಾರತದ ಜಿ 20 ಅಧ್ಯಕ್ಷ ಸ್ಥಾನದ ಲಾಂಛನ, ಥೀಮ್ ಮತ್ತು ವೆಬ್‌ಸೈಟ್‌ ಅನ್ನು ಅನಾವರಣಗೊಳಿಸಿದ್ದಾರೆ. ಜಿ20 ಅಧ್ಯಕ್ಷ ಸ್ಥಾನವು ಅಂತಾರಾಷ್ಟ್ರೀಯ ಪ್ರಾಮುಖ್ಯತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಜಗತ್ತಿಗೊಂದು ಸಂದೇಶ ಸಾರುವಂತಿದೆ ಈ ಲಾಂಛನ ಮತ್ತು ಥೀಮ್‌.

ಪ್ರಸ್ತುತ ಅಧ್ಯಕ್ಷ ಸ್ಥಾನದಲ್ಲಿರುವ ಇಂಡೋನೇಷ್ಯಾದಿಂದ ಡಿಸೆಂಬರ್ 1 ರಂದು ಭಾರತವು ಪ್ರಬಲ ಗುಂಪಿನ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. G20 ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ವೇದಿಕೆಯಾಗಲಿದೆ. ಇದು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್ ನ್ನು ಹೊಂದಿದೆ.

G20 ಶೃಂಗಸಭೆಯು ಬಾಲಿಯಲ್ಲಿ ನವೆಂಬರ್ 15-16 ರಂದು ನಡೆಯಲಿದ್ದು ಅದರಲ್ಲಿ ಭಾಗವಹಿಸುವ ಪ್ರಮುಖ ನಾಯಕರಲ್ಲಿ ಮೋದಿ ಕೂಡ ಇರಲಿದ್ದಾರೆ. ಪ್ರಧಾನಿಯವರ ದೂರದೃಷ್ಟಿಯಿಂದ ಮಾರ್ಗದರ್ಶಿಸಲ್ಪಟ್ಟಿರುವ ಭಾರತದ ವಿದೇಶಾಂಗ ನೀತಿಯು ಜಾಗತಿಕ ವೇದಿಕೆಯಲ್ಲಿ ನಾಯಕತ್ವದ ಪಾತ್ರಗಳನ್ನು ಕೈಗೊಳ್ಳಲು ವಿಕಸನಗೊಳ್ಳುತ್ತಿದೆ ಎಂದು ಎಂಇಎ ಹೇಳಿದೆ. ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಲ್ಲಿ, ಭಾರತವು ಡಿಸೆಂಬರ್ 1 ರಿಂದ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಜಿ 20 ಅಧ್ಯಕ್ಷ ಸ್ಥಾನವು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಮೇಲೆ ಜಾಗತಿಕ ಕಾರ್ಯಸೂಚಿಗೆ ಕೊಡುಗೆ ನೀಡಲು ಭಾರತಕ್ಕೆ ಒಂದು ಅನನ್ಯ ಅವಕಾಶ ಇದಾಗಲಿದೆ. G20 ಅಂತರರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಾಗಿದೆ.

RELATED ARTICLES

Related Articles

TRENDING ARTICLES