ಬೆಂಗಳೂರು: ರಾಜ್ಯ ಕಾಂಗ್ರೆಸ್ ಹಾಗೂ ಭಾರತ ಐಕ್ಯತಾ ಯಾತ್ರೆಯಲ್ಲಿ ಕೆಜಿಎಫ್-2 ಹಾಡು ಬಳಕೆ ಮಾಡಲಾಗಿದ್ದು, ಕಾಂಗ್ರೆಸ್ ಖಾತೆ ಬ್ಲಾಕ್ ಮಾಡಬೇಕೆಂದು ಬೆಂಗಳೂರಿನ ಕೆಳ ನ್ಯಾಯಾಲಯ ಆದೇಶ ಬೆನ್ನಲೆಯಲ್ಲಿ ಇಂದು ರಾಜ್ಯ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿ ರೀಟ್ ಅರ್ಜಿ ಸಲ್ಲಿಕೆ ಮಾಡಿದೆ.
ಕಾಂಗ್ರೆಸ್ ಹಾಗೂ ಭಾರತ ಐಕ್ಯತಾ ಯಾತ್ರೆಯಲ್ಲಿ ನಟ ಯಶ್ ನಟನೆಯ ಹಿಂದಿ ಭಾಷೆಯ ಕೆಜಿಎಫ್-2 ಹಾಡುಗಳನ್ನ ಬಳಸುವ ಮೂಲಕ ಕೃತಿಸ್ವಾಮ್ಯ ಉಲ್ಲಂಘನೆಯನ್ನ ಮಾಡಿದೆ ಎಂದು ಕೆಜಿಎಫ್ ಹಾಡು ಖರೀದಿ ಮಾಡಿದ ಎಂಆರ್ಟಿ ಮ್ಯೂಸಿಕ್ ನ್ಯಾಯಾಲಯ ಮೊರೆ ಹೋಗಿತ್ತು.
ಇದಕ್ಕೆ ನಿನ್ನೆ ಬೆಂಗಳೂರಿನ ಕೆಳ ನ್ಯಾಯಾಲಯ ಕೇಸ್ ನಡೆಸಿ ಕೃತಿಸ್ವಾಮ್ಯ ಉಲ್ಲಂಘನೆಯಾಗಿದೆ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಯಾತ್ರೆಯ ಸಾಮಾಜಿಕ ಜಾಲತಾಣಗಳನ್ನ ತಾತ್ಕಾಲಿಕವಾಗಿ ಅಮಾನತುಗೊಳಿಸುವಂತೆ ಟ್ವಿಟರ್‌ಗೆ ತಾಖೀತು ಮಾಡಿತ್ತು.
ಇದೆಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಇಂದು ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೆರಿದೆ. ಕೆಜಿಎಫ್ 2 ಚಿತ್ರದ ಧ್ವನಿಮುದ್ರಿಕೆಗಳನ್ನು ಬಳಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.
ಕೆಜಿಎಫ್ ಅಧ್ಯಾಯ-2 ಚಿತ್ರದ ಧ್ವನಿಮುದ್ರಿಕೆಗಳನ್ನು ಬಳಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಕರ್ನಾಟಕ ಕಾಂಗ್ರೆಸ್ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.