ಕಾರವಾರ : ಸ್ಮಶಾನದಲ್ಲಿ ಪೂಜೆ, ಮದುವೆ, ಊಟ ಮಾಡುವ ನಾಸ್ತಿಕತೆ ಇರುವವರಿಗೆ ಹಿಂದೂ ಶಬ್ದದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಶಿರಸಿಯಲ್ಲಿ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕ,ಹಿಂದೂ ವಿರೋಧಿ, ಅವರು ತಮ್ಮ ಹೇಳಿಕೆಯನ್ನ ವಾಪಾಸ್ ಪಡೆಯಬೇಕು, ಸತೀಶ್ ಜಾರಕಿಹೊಳಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಕಾಂಗ್ರೆಸ್ನವರಿಗೆ ಇನ್ನೂ ಕೂಡ ಬುದ್ದಿ ಬಂದಿಲ್ಲ, ಹಿಂದುತ್ವ,ಹಿಂದುಗಳನ್ನ, ಹಿಂದು ಧರ್ಮ, ಹಿಂದು ಸಂಘಟನೆಗಳನ್ನ ಅವಹೇಳನ ಮಾಡುವುದು ಸರಿಯಲ್ಲ ಎಂದರು.
ಇನ್ನು, ಕುವೆಂಪು ಅವರು, ಹಿಂದು, ಜೈನ,ಸಿಖ್,ಕ್ರಿಶ್ವಿಯನ್ ಎಂಬ ಶಬ್ದವನ್ನ ನಾಡಗೀತೆಯಲ್ಲಿ ಬಳಸಿದ್ದಾರೆ. ಆಜಾದ್ ಹಿಂದ್ ಪೌಜ್ ಎಂದು ಸುಭಾಷ್ ಚಂದ್ರಬೋಸ್ರವರು ಬಳಸಿದ್ದಾರೆ. ಅನೇಕ ಸಂದರ್ಭದಲ್ಲಿ ಭಗತ್ ಸಿಂಗ್ ,ಸಾವರ್ಕರ್ ಕೂಡ ಈ ಶಬ್ಧವನ್ನು ಬಳಸಿದ್ದಾರೆ. ಸುಪ್ರೀಂ ಕೋರ್ಟ ಕೂಡ 25 ವರ್ಷದ ಹಿಂದೆ ಹಿಂದೂ ಧರ್ಮ “ವೇ ಆಫ್ ಲೈಫ್ ” ಅತ್ಯಂತ ಒಳ್ಳೆಯ ಜೀವನದ ಪದ್ದತಿ ಎಂದು ಹೇಳಿದೆ. ಹಾಗಾದ್ರೆ ಸುಪ್ರೀಂ ಕೋರ್ಟನವರು ಮೂರ್ಖರಾ.? ಎಂದು ಹೇಳಿದರು.