ಬೆಂಗಳೂರು: ಇಂದು ಸಚಿವ ಸುನೀಲ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡುತ್ತ, ದೇಶದ ಮತ್ತು ಆರ್ಥಿಕ ಬೆಳವಣಿಗೆಯಾಗಲು ದೊಡ್ಡ ದೊಡ್ಡ ಉದ್ಯಮಗಳು ಬರಬೇಕು.
ಇವೆಲ್ಲವಕ್ಕೂ ಇಂಧನ ಅತ್ಯವಶ್ಯಕ, ಹಸಿರು ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ಮುಂದಿದೆ. ಮುಂದಿನ 10 ವರ್ಷಗಳಲ್ಲಿ ಇಂಧನ ಇಲಾಖೆಯಲ್ಲಿ ಆಗಬೇಕಾದ ಅಭಿವೃದ್ಧಿ ಬಗ್ಗೆ ಸಿಎಂ ಸಾಕಷ್ಟು ಸಲಹೆ ನೀಡಿದ್ದಾರೆ. ಹೈಬ್ರಿಡ್ ಪಾರ್ಕ್ ನಿರ್ಮಾಣದ ಉತ್ತಮ ದಾರಿಯನ್ನ ಬಜೆಟ್ ನಲ್ಲೇ ಸೇರಿಸಿದ್ದಾರೆ.
2 ಲಕ್ಷ ಕೋಟಿ ರೂ. ಹಸಿರು ಇಂಧನ ಕ್ಷೇತ್ರವೊಂದಕ್ಕೆ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಗುಣಮಟ್ಟದ ವಿದ್ಯುತ್ ಸರಬರಾಜಿಗೆ 36 ಸಬ್ ಸ್ಟೇಷನ್ ನಿರ್ಮಿಸಲಾಗಿದೆ. ಹೈಬ್ರಿಡ್ ಪಾರ್ಕ್‌ನಿರ್ಮಾಣಕ್ಕೆ ಡಿಪಿಆರ್ ಸಿದ್ಧವಾಗಿದೆ. ಮುಂದಿನ ನಮ್ಮ ಒಟ್ಟುಬಳಕೆಯ ವಿದ್ಯುತ್ ಪೂರೈಕೆಯಲ್ಲಿ50% ಗ್ರೀನ್ ಎನರ್ಜಿ ಮೂಲಕವೇ ಉತ್ಪಾದಿಸುವ ಗುರಿ ಇದೆ ಎಮದು ಸಚಿವರು ತಿಳಿಸಿದರು.