ಬೆಂಗಳೂರು: ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಹೂಡಿಕೆ ಸಮಾವೇಶ ಹೊಸದೊಂದು ಇತಿಹಾಸ ನಿರ್ಮಿಸಲು ಮುಂದಾಗಿದೆ.
ಇನ್ನು ಈ ಸಮಾವೇಶದಲ್ಲಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ಕಾಂತಾರ ಸಿನಿಮಾದ ಕುರಿತು ಹೇಳಿಕೆ ನಿಡಿದ್ದಾರೆ. ಈ ಸಂದರ್ಭದಲ್ಲಿ, ಹೂಡಿಕೆಯನ್ನ ಕಾಂತಾರ ಮೂವಿಗೆ ಹೋಲಿಸಿದ್ದಾರೆ ಗೋಯಲ್.
ಈ ಕುರಿತು ಸಚಿವರು ಕಾಂತಾರ ಸಿನಿಮಾ ನೋಡಿದೆ. ಅದು ಸಣ್ಣ ಬಜೆಟ್ನ ಸಿನಿಮಾ. ಇದರಲ್ಲಿ ಕರ್ನಾಟಕದ ಸಂಸ್ಕೃತಿ ತೋರಿಸುತ್ತದೆ. ನಾನು ಈ ಚಿತ್ರದ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿದ್ದೇನೆ. ಎರಡಂಕಿ ಬಜೆಟ್ ಇಂದು 300ಕೋಟಿಗೂ ಹೆಚ್ಚು ಆದಾಯ ಗಳಿಸಿದೆ. ಹೂಡಿಕೆ ಕೂಡ ಸಣ್ಣದಾಗಿ ಮಾಡಿದ್ರೂ, ದೊಡ್ಡಮಟ್ಟದಲ್ಲಿ ಯಶಸ್ವಿ ಮಾಡಬೇಕಿದೆ ಎಂದು ಹೂಡಿಕೆ ಸಮಾವೇಶದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.