ಬೆಂಗಳೂರು; ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡುತ್ತಿರುವ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ವಿಧಾನಸೌಧದಲ್ಲಿ ನಡೆಯುತ್ತಿದೆ.
ಈ ಕಾರ್ಯಕ್ರಮಕ್ಕೆ ತಮಿಳು ನಟ ಸೂಪರ್ ಸ್ಟಾರ್ ರಜನಿ ಕಾಂತ್ ಆಗಮಿಸಿ ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿ ಸಮ್ಮುಖದಲ್ಲಿ ನಡೆಯುತ್ತಿದೆ 6 ಕೋಟಿ ಜನ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಎಲ್ಲರೂ ಸಹೋದರರಾಗಿ ಒಂದಾಗಿ ಇರಬೇಕೆಂದು ಆ ತಾಯಿ ರಾಜೇಶ್ವರಿ, ಅಲ್ಲಾ, ಜೀಸಸ್ ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಕನ್ನಡದಲ್ಲಿ ಮಾತನಾಡಿದರು.
ಈ ಕಲಿಯುಗಕ್ಕೆ ಅಪ್ಪು ಅವರು ದೇವರ ಮಗು. ಅಪ್ಪು ಬಂದು ಸ್ವಲ್ಪದಿನ ಇದ್ದು ಆಟ ಹಾಡಿ ದೇವರ ಹತ್ತಿರ ಹೋಗಿದ್ದಾರೆ. ಇದೇ ಜಾಗದಲ್ಲಿ ಅಪ್ಪು ಅವರ ಅಪ್ಪ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನ ಪ್ರಧಾನ ಮಾಡಿದ್ದರು ಎಂದು ರಜನಿ ಹೇಳಿದರು. ಬೆಂಗಳೂರಿನ ವಿಧಾನಸೌಧದಲ್ಲಿ ಮಳೆ ಬಂದಿದ್ದರಿಂದ ರಜನಿ ಭಾಷಣಕ್ಕೆ ಮಳೆ ಅಡ್ಡಿಯಾಯಿತು.