Tuesday, November 5, 2024

ಬೆಳಕಿನ ಹಬ್ಬಕ್ಕೆ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಬಂಪರ್ ಗಿಫ್ಟ್..!

ಲವ್​ ಯೂ ರಚ್ಚು, ಶೋಕಿವಾಲ ಚಿತ್ರಗಳ ನಂತ್ರ ಬಿಗ್​ ಬ್ರೇಕಿಂಗ್​ ಸಿನಿಮಾಗಾಗಿ ನಟ ಅಜಯ್​ ರಾವ್​​ ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ಬ್ಯಾಂಕ್​ ದರೋಡೆ ಸುತ್ತಾ ಮಸ್ತ್​​ ಮಜಾ ನೀಡೋ ರಾಬರಿ ಕಥೆ ತಯಾರಾಗಿದೆ. ಈ ದೀಪಾವಳಿಗೆ ಬಂಪರ್​ ಗಿಫ್ಟ್​ ಕೊಟ್ಟ ಚಿತ್ರತಂಡ, ಇಂಟ್ರೆಸ್ಟಿಂಗ್​ ಟೈಟಲ್​ ಫಿಕ್ಸ್​ ಮಾಡಿದೆ. ಯೆಸ್​​​.. ಅಜಯ್​​ ರಾವ್​​ ಹೊಸ ಚಿತ್ರದ ಕುರಿತಾದ ಇಂಟ್ರೆಸ್ಟಿಂಗ್​​ ಕಹಾನಿ ಇಲ್ಲಿದೆ.

  • ಕಿಕ್ಕು ಕೊಟ್ಟ ಕ್ರಿಯೇಟಿವ್​ ಪೋಸ್ಟರ್​​.. ಕನ್ನಡದ ಮನಿ ಹೈಸ್ಟ್​​​​​..?

ಬ್ಯಾಂಕಿಗೆ ಕನ್ನ ಹಾಕಿ, ದರೋಡೆ ಮಾಡುವ ಆ್ಯಕ್ಷನ್​ ಥ್ರಿಲ್ಲರ್​​ ಸಿನಿಮಾಗಳು ಹಾಲಿವುಡ್​​​​​​ನಲ್ಲಿ ಸಿಕ್ಕಾಪಟ್ಟೆ ಹಿಟ್​ ದಾಖಲಿಸಿವೆ. ಇತ್ತೀಚೆಗೆ ಬಂದ ಮನಿ ಹೈಸ್ಟ್​ ವೆಬ್​ ಸೀರೀಸ್​ ಕೂಡ ಬ್ಯಾಂಕ್​ ದರೋಡೆಯ ಮೇಲಿನ ಕಥೆಯಾಗಿದ್ದು ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್​ ಪಡೆಯಿತು. ಇದೀಗ ಕನ್ನಡದಲ್ಲೊಂದು ಇದೇ ರೀತಿಯ ಅದ್ಧೂರಿ ಸಿನಿಮಾ ತಯಾರಾಗ್ತಿದೆ.

ಯೆಸ್​​.. ಬ್ಯಾಂಕ್​ ರಾಬರಿ ಚಿತ್ರಕಥೆಗೆ ನಟ ಅಜಯ್​ ರಾವ್​​​ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ದೀಪಾವಳಿ ಹಬ್ಬಕ್ಕೆ ಕಿಕ್ಕು ಕೊಡೋ ಪೋಸ್ಟರ್​ ಕೂಡ ರಿಲೀಸ್​ ಆಗಿದೆ. ಈ ಮೂಲಕ ದೀಪಾವಳಿ ಹಬ್ಬಕ್ಕೆ ಬಂಪರ್​ ಉಡುಗೊರೆ ಸಿಕ್ಕಿದೆ. ಈ ಇಂಟ್ರೆಸ್ಟಿಂಗ್​ ಚಿತ್ರಕ್ಕೆ ಟೈಟಲ್​ ಕೂಡ ಫಿಕ್ಸ್ ಆಗಿದ್ದು, ಬ್ಯಾಂಕ್​ ಆಫ್​ ಭಾಗ್ಯಲಕ್ಷ್ಮಿ ಎಂಬ ಶೀರ್ಷಿಕೆ ಇಡಲಾಗಿದೆ.

  • ರೋಚಕ ಕಥಾಹಂದರದ ಜೊತೆ ಕಾಮಿಡಿ ಪುಳಕ        
  • ಫಸ್ಟ್​​ ಟೈಮ್​​ ಡೈರೆಕ್ಟರ್​ ಕ್ಯಾಪ್​ ತೊಟ್ಟ ಅಭಿಷೇಕ್​​​

ರಂಗಿ ತರಂಗ, ಅವನೇ ಶ್ರೀಮನ್ನಾರಾಯಣ ಚಿತ್ರಗಳಿಗೆ ಬಂಡವಾಳ ಹೂಡಿದ್ದ ಹೆಚ್​.ಕೆ ಪ್ರಕಾಶ್​​ ಬ್ಯಾಂಕ್​ ಆಫ್​ ಭಾಗ್ಯಲಕ್ಷ್ಮಿ ಚಿತ್ರದ ಹೊಣೆ ಹೊತ್ತಿದ್ದಾರೆ.  ಈ ಬಾರಿಯೂ ಹೊಸ ಮುಖಗಳಿಗೆ ಮಣೆ ಹಾಕಿರುವ ನಿರ್ಮಾಪಕರು, ಹೊಸ ಪ್ರತಿಭೆ ಅಭಿಷೇಕ್​ ಎಂ ಜೊತೆಗೆ ಕೈ ಜೋಡಿಸಿದ್ದಾರೆ. ಅಬಿಷೇಕ್​ಗೆ ಚೊಚ್ಚಲ ಸಿನಿಮಾ ಇದಾಗಿದ್ದು, ನಿರ್ದೇಶನದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ತಮ್ಮ ಸಾಮರ್ಥ್ಯ ಸಾಭೀತು ಮಾಡಲಿದ್ದಾರೆ.

ಬ್ಯಾಂಕ್​​​ನ್ನು ದರೋಡೆ ಮಾಡೋಕೆ ಹೊರಟವರ ಕಥೆ ಇದಾಗಿದ್ದು, ಪ್ರತಿ ಕ್ಷಣವೂ ರೋಮಾಂಚನಕಾರಿ ಅನುಭವ ನೀಡಲಿದೆ. ಪಕ್ಕಾ ಸಸ್ಪೇನ್ಸ್​ ಥ್ರಿಲ್ಲರ್​ ಜಾನರ್ ಸಿನಿಮಾ ಇದಾಗಿದ್ದು, ಸ್ಟಾರ್​ ಕಾಸ್ಟಿಂಗ್​​ ಬಗ್ಗೆ ಸದ್ಯದಲ್ಲೇ ಅಪ್ಡೇಟ್ಸ್​ ಸಿಗಲಿದೆ. ಸಿಂಪಲ್​ ಆಗ್​ ಒಂದ್​ ಲವ್​​ ಸ್ಟೋರಿ, ಆಪರೇಷನ್​ ಅಲಮೇಲಮ್ಮ, ಬಹುಪರಾಕ್​ ಸಿನಿಮಾಗಳಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡಿರೋ ಅಭಿಷೇಕ್​​ ಮೇಲೆ ಸಿಕ್ಕಾಪಟ್ಟೆ ಭರವಸೆ ಇಡಲಾಗಿದೆ.

ಬ್ಯಾಂಕ್​ ಆಫ್​ ಬಾಗ್ಯಲಕ್ಷ್ಮಿ ಚಿತ್ರದ ಪೋಸ್ಟರ್​​ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಹೆಚ್​​​ಕೆ ಪ್ರಕಾಶ್​ ಅವರ ಶ್ರೀದೇವಿ ಎಂಟರ್​​ಟೈನರ್ಸ್​  ಬ್ಯಾನರ್ ಅಡಿಯ ಐದನೇ ಸಿನಿಮಾ ಇದಾಗಿದ್ದು, ಜ್ಯೂಡಾ ಸ್ಯಾಂಡಿ ಮ್ಯೂಸಿಕ್​ ಕಂಪೋಸ್​​, ಅಭಿಷೇಕ್​ ಜಿ ಕಾಸರಗೋಡು ಕ್ಯಾಮೆರಾ ಕಣ್ಣು ಚಿತ್ರಕ್ಕಿದೆ. ಏನೆ ಇರಲಿ, ಬ್ಯಾಂಕ್​ ರಾಬರಿ ಕಥೆಗೆ ಪ್ರೇಕ್ಷಕನ ರೆಸ್ಪಾನ್ಸ್​​ ಗೊತ್ತಾಗಬೇಕಾದ್ರೆ ಇನ್ನು ಸ್ವಲ್ಪ ದಿನ ಕಾಯಲೇಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES