ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಹಬ್ಬ ದೀಪಾವಳಿ ಮನವ ಬೆಳಕುವ ಸಂಭ್ರಮದ ದಿನ ಈ ದೀಪಾವಳಿ ಇಂತಹ ಹಬ್ಬವನ್ನು ಇಂದಿನಿಂದ ನಾಡಿನೆಲ್ಲೆಡೆ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ.ಅದೇರೀತಿ, ಜನರ ಅಭಿರುಚಿಗೆ ತಕ್ಕಂತೆ ದೀಪಾವಳಿ ಹಬ್ಬದ ಪಟಾಕಿಗಳು ಕೂಡ ಬದಲಾಗುತ್ತಿವೆ. ಹಳೆಯ ದೀಪಾವಳಿಗೂ, ಈಗಿನ ದೀಪಾವಳಿಗೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ. ಮೊದಲ್ಲೆಲ್ಲಾ ಮಾರುಕಟ್ಟೆಯಲ್ಲಿ ಕಾಣಸಿಗುತ್ತಿದ್ದ ಚೈನಾ ಪಟಾಕಿಗಳು ಇದೀಗ ಮಾಯವಾಗಿ ಮೇಕ್ ಇನ್ ಇಂಡಿಯಾ ಪಟಾಕಿಗಳು ಲಗ್ಗೆ ಇಟ್ಟಿವೆ. ಅದರಂತೆ, ಶಿವಮೊಗ್ಗದಲ್ಲಿ ಕೊರೋನಾ ಬಳಿಕ, ಈ ಬಾರಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ದೀಪಗಳ ಹಬ್ಬ ದೀಪವಾಳಿ ಹಬ್ಬದ ಅಂಗವಾಗಿ, ಮಾರುಕಟ್ಟೆಯಲ್ಲಿ, ಖರೀದಿ ಬಲು ಜೋರಾಗಿಯೇ ನಡೆಯುತ್ತಿದೆ.
ಹಬ್ಬದ ಅಂಗವಾಗಿ ನಗರದ ಪ್ರಮುಖ ರಸ್ತೆಗಳು, ದೀಪಾವಳಿಯ ಮಾರುಕಟ್ಟೆಯಾಗಿ ಪರಿವರ್ತನೆಗೊಂಡಿದೆ. ಇಂದು ಬೆಳಗ್ಗೆಯಿಂದಲೇ ಭರ್ಜರಿ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಆದರೆ, ಪಟಾಕಿ ಸ್ಟಾಲ್ ಗಳಲ್ಲಿನ ಪಟಾಕಿಗಳನ್ನು ಗಮನಿಸಿದರೆ, ಮಾತ್ರ ದೀಪಾವಳಿ ಬದಲಾಗಿದೆ ಎನಿಸುತ್ತಿದೆ. ಇನ್ನು ಆಗಿನ ಕಾಲದ ಮತಾಪು, ಬೆಳ್ಳುಳ್ಳಿ ಪಟಾಕಿ, ಚಿನಕುರಳಿ ಪಟಾಕಿಗಳು, ಈಗ ಕೇವಲ ಹೆಸರುಗಳಷ್ಟೇ ಕಾಣಸಿಗುತ್ತದೆ. ಪಟಾಕಿ ಮಾರುಕಟ್ಟೆಯಲ್ಲಿ ಇವುಗಳನ್ನು ಹುಡುಕುವುದೇ ಕಷ್ಟವಾಗಿದ್ದು, ಈಗೇನಿದ್ದರೂ ಡಬಲ್ ಟ್ರ್ಯಾಕರ್, ತ್ರಿಬಲ್ ಟ್ರ್ಯಾಕ್ಟರ್, ಡಬಲ್ ಸೌಂಡ್, 7 ಸೌಂಡ್ ನಂತಹ ಇಂಗ್ಲಿಷ್ ನಾಮಧೇಯದ ಪಟಾಕಿಗಳದ್ದೇ ಕಾರುಬಾರಾಗಿದೆ. ಈ ಹಿಂದೆ ದೀಪಾವಳಿಗಳಲ್ಲಿ ಪಟಾಕಿಗಳ ಸದ್ದು ಕಡಿಮೆ, ದುಡ್ಡು ಕಡಿಮೆಯಿದ್ದು, ಆದರೆ, ಸಂಭ್ರಮ ಜಾಸ್ತಿ ಇರುತ್ತಿತ್ತು. ಆದರೆ, ಈಗ ದುಡ್ಡು ಜಾಸ್ತಿ, ಸದ್ದು ಜಾಸ್ತಿ, ಆದರೆ, ಸಂಭ್ರಮ ಮಾತ್ರ ಕಡಿಮೆ ಎನ್ನುವಂತಾಗಿದೆ.ಮೊದಲೆಲ್ಲಾ ಪಟಾಕಿ ಮಾರುಕಟ್ಟೆಯಲ್ಲಿ ಚೈನಾ ಪಟಾಕಿ ಕಾಣಸಿಗುತ್ತಿದ್ದು, ಈಗ ಚೈನಾ ಪಟಾಕಿ ಮಾಯವಾಗಿದೆ.
ಚೈನಾದ ಆಟದ ಸಾಮಾನುಗಳಿಂದ ಹಿಡಿದು ಪ್ರತಿಯೊಂದು ಚೈನಾ ಐಟಂಗಳ ಹಾವಳಿಯನ್ನು ಈ ಬಾರಿ ಕಡಿಮೆ ಮಾಡಲಾಗಿದೆ. ಮೇಕ್ ಇನ್ ಇಂಡಿಯಾ ಪಟಾಕಿಗಳು ಕಾಣಸಿಗುತ್ತಿದ್ದು, ಸೌಂಡ್ ನಂತಹ ಪಟಾಕಿಗಳು ಮಾಯವಾಗತೊಡಗಿವೆ. ಕಳೆದೆರೆಡು ವರ್ಷಗಳಿಂದ ಕೊರೋನಾ ಆರ್ಭಟದಿಂದಾಗಿ ದೀಪಾವಳಿ ಆಚರಣೆಗೆ ತೊಡಕಾಗಿದ್ದು, ಪಟಾಕಿ ರೇಟ್ ಕೂಡ ಶೇ. 10 ರಷ್ಟು ಹೆಚ್ಚಾಗಿದೆ. ಬೆಲೆ ಹೆಚ್ಚಾದರೂ, ಸಂಪ್ರದಾಯದಂತೆ, ಪಟಾಕಿ ಹಚ್ಚಲು ಜನರು ರೆಡಿಯಾಗಿದ್ದಾರೆ.