ಡಾಲಿ ಅಂದ್ರೆ ಮಾಸ್.. ಮಾಸ್ ಅಂದ್ರೆ ಡಾಲಿ. ಅಂಥದ್ರಲ್ಲಿ ಔಟ್ ಅಂಡ್ ಔಟ್ ರೌಡಿಸಂ ಬೇಸ್ಡ್ ಸಿನಿಮಾಗೆ ಡಾಲಿ ಧನಂಜಯ ಅವ್ರೇ ನಾಯಕನಾದ್ರೆ ಅದ್ರ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯೆಸ್. ಹೆಡ್ಬುಷ್ ಡಾನ್ ಡಾಲಿ ಖದರ್ ನೋಡಿ ಪ್ರೇಕ್ಷಕ ಫಿದಾ ಆಗಿರೋದಲ್ಲದೆ, ಎಕ್ಸ್ಟ್ರಾ ಶೋಸ್ಗೆ ಡಿಮ್ಯಾಂಡ್ ಮಾಡ್ತಿದ್ದಾರೆ.
- ಮಾಸ್ಪ್ರಿಯರ ನಾಡಿಮಿಡಿತ ಹೆಚ್ಚಿಸಿದ ಡಾಲಿ ಧನಂಜಯ
ಅಗ್ನಿ ಶ್ರೀಧರ್ ಅವ್ರ ಆತ್ಮಕಥೆ ದಾದಾಗಿರಿಯ ದಿನಗಳು ಪುಸ್ತಕದ ಒಂದು ಭಾಗ ಈ ಹೆಡ್ಬುಷ್ ಸಿನಿಮಾ. ನೈಜ ಘಟನೆ ಆಧಾರಿತ ಸಿನಿಮಾಗಳು ಅಂದಾಗ ಎಲ್ರಿಗೂ ಒಂದು ಕ್ಯೂರಿಯಾಸಿಟಿ ಇದ್ದೇ ಇರುತ್ತೆ. ನಾವು ಕಂಡಿದ್ದು, ಕೇಳಿದ್ದನ್ನ ತೆರೆಯ ಮೇಲೆ ಹೇಗೆ ಕಟ್ಟಿಕೊಟ್ಟಿರ್ತಾರೋ ಅನ್ನೋ ಸಂದೇಹವಿರುತ್ತೆ. ಅದಕ್ಕೆ ಉತ್ತರ ರಿಲೀಸ್ ಆದ ಬಳಿಕವಷ್ಟೇ ಸಿಗಲಿದೆ. ಸದ್ಯ ಹೆಡ್ಬುಷ್ಗೆ ನಿರೀಕ್ಷೆಗೂ ಮೀರಿದ ಪ್ರಶಂಸೆ, ಪ್ರತಿಕ್ರಿಯೆಗಳು ಸಿಗ್ತಿವೆ.
ಕಾರಣ, ಒಂದ್ಕಡೆ ಡಾಲಿ ಧನಂಜಯ ಹಂಡ್ರೆಡ್ ಪರ್ಸೆಂಟ್ ರೌಡಿಸಂ ಕಥಾನಕಕ್ಕೆ ನಾಯಕನಟನಾಗಿರೋದು. ಮತ್ತೊಂದ್ಕಡೆ ಡಾಲಿ ಜೊತೆ ಅವ್ರ ಗೆಳೆಯರ ಬಳಗವೆಲ್ಲಾ ಕೂಡಿ ಬಣ್ಣ ಹಚ್ಚಿ, ಆ ಪಾತ್ರಗಳಿಗೆ ಜೀವ ತುಂಬಿರೋದು. ಯೆಸ್. ಡಾಲಿ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಔಟ್ ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ನಟರಾಕ್ಷಸನಾಗಿ ಧೂಳೆಬ್ಬಿಸಿದ್ದಾರೆ.
ಶೂನ್ಯ ನಿರ್ದೇಶನದ ಈ ಸಿನಿಮಾದಲ್ಲಿ ರೆಟ್ರೋ ಅಂಡರ್ವರ್ಲ್ಡ್ ಕಥಾನಕವನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ಲೂಸ್ಮಾದ ಯೋಗಿ, ರಘು ಮುಖರ್ಜಿ, ವಸಿಷ್ಠ ಸಿಂಹ, ಶ್ರುತಿ ಹರಿಹರನ್, ಹಬೀಬಿ ಬೇಬಿ ಪಾಯಲ್ ಹೀಗೆ ಎಲ್ಲರೂ ಮ್ಯಾಜಿಕ್ ಮಾಡಿದ್ದಾರೆ. ಮೊದಲ ದಿನವೇ 4.23 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿರೋ ಹೆಡ್ಬುಷ್, ಬಾಕ್ಸ್ ಆಫೀಸ್ನಲ್ಲಿ ಸೌಂಡ್ ಮಾಡ್ತಿದೆ.
ಆ ಸೌಂಡ್ಗೆ ಪ್ರೇಕ್ಷಕರಿಂದ ಡಿಮ್ಯಾಂಡ್ ಕೂಡ ಹೆಚ್ಚಾಗಿದ್ದು, ಇಂದಿನಿಂದ ರಾಜ್ಯಾದ್ಯಂತ ಸುಮಾರು 20ಕ್ಕೂ ಅಧಿಕ ಹೆಚ್ಚುವರಿ ಪ್ರದರ್ಶನಗಳನ್ನ ಆಯೋಜಿಸಲಾಗಿದೆ. ಇದು ಡಾಲಿಯ ಸಿನಿಮೋತ್ಸಾಹದ ಜೊತೆ ಅವ್ರ ನಿರ್ಮಾಣದ ಕನಸನ್ನ ದುಪ್ಪಟ್ಟು ಮಾಡಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ