ಬೆಳಗಾವಿ; ಸಮಾವೇಶದಲ್ಲಿ ಇತ್ತೀಚಿಗೆ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಕುರಿತು ಮಾರ್ಮಿಕವಾಗಿ ಮಾತಮಾಡಿದ್ದ ಕಾಂಗ್ರೆಸ್ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಹುಕ್ಕೇರಿ ಸಮಾವೇಶದಲ್ಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.
ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಿ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿ ಸುಮ್ಮನೆ ಇದ್ದಾರೆ. ಈ ರೀತಿ ಮಾಡಿ ಮೂಗಿಗೆ ತುಪ್ಪ ಹಚ್ಚಿದ್ರೆ ನಡೆಯಲ್ಲ ಅಣ್ಣಾ. ಅದು ರಾಜ್ಯಪಾಲರ ಬಳಿ ಕಳುಹಿಸಿ ಅಂಗಿಕಾರ ಮಾಡಿಸಿ ಜಾರಿಗೆ ತರಬೇಕು. ಬರಿ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಿ ಅದನ್ನ ದೆಹಲಿಗೆ ಹೊತ್ತಾಕುತ್ತೇವೆ ಅಂದ್ರೆ ಆಗಲ್ಲ. ಕೇಂದ್ರದಲ್ಲೂ ನಿಮ್ಮ ಸರ್ಕಾರ ಅಣ್ಣಾ, ರಾಜ್ಯದಲ್ಲೂ ನಿಮ್ಮ ಸರ್ಕಾರ ಅಣ್ಣಾ ದಯವಿಟ್ಟು ವಿನಂತಿ ಮಾಡುತ್ತೇವೆ ಶಾಸನ ಬದ್ದವಾಗಿ 2A ಜಾರಿಗೆ ತನ್ನಿ ಎಂದು ಹೆಬ್ಬಾಲ್ಕರ್ ಹೇಳಿದ್ದರು.
ಇದಕ್ಕೆ ಇಂದು ಅದೇ ವೇದಿಕೆ ಮೇಲಿದ್ದ ಹೆಬ್ಬಾಳ್ಕರ ಮಾತಿಗೆ ಯತ್ನಾಳ ತಿರುಗೇಟು ನೀಡಿ, ಲಕ್ಷ್ಮಿ ಅಕ್ಕಾರ ನಾವು ಅರ್ಧ ಮರ್ಧ ಕೆಲಸ ಮಾಡುವ ರಾಜಕಾರಣಿಗಳಲ್ಲ. ಸುಗ್ರಿವಾಜ್ಞೆ ಅಷ್ಟೇ ಅಲ್ಲ ನೊಟಿಫಿಕೇಶನ್ ಮಾಡಿಸುವವರೆಗೆ ಬಿಡುವ ಮಕ್ಕಳಲ್ಲ ನಾವಲ್ಲ ಎಂದರು.
ಅಂತೆಯೇ, ಎಸ್ಸಿ, ಎಸ್ಟಿ ಮೀಸಲಾತಿ ಇಲ್ಲಿ ಅಷ್ಟೇ ಅಲ್ಲ. ದೆಹಲಿಯಲ್ಲೂ ಮೀಸಲಾತಿ ಮಾಡಿಕೊಂಡು ಬರುತ್ತೇವೆ. ಮುಂದೆ 2024 ರಲ್ಲಿ ಮೋದಿಯವರೆ ದೇಶದಲ್ಲಿ ಆಡಳಿತ ಮಾಡುತ್ತಾರೆ ಎಂದು ಯತ್ನಾಳ ರವರು ಹೆಬ್ಬಾಳ್ಕರಗೆ ತಿರುಗೇಟು ನೀಡಿದ್ದಾರೆ.