Friday, November 22, 2024

ನ. 1 ರಿಂದ ಪಂಚರತ್ನ ಯಾತ್ರೆಗೆ ಜೆಡಿಎಸ್ ಸಿದ್ದತೆ

ಬೆಂಗಳೂರು; ಬರುವ ನವೆಂಬರ್​ 1 ರಿಂದ ಕೋಲಾರದ ಮುಳುಬಾಗಿಲಿನಿಂದ ಪಂಚರತ್ನ ಯಾತ್ರೆ ಕೈಗೊಳ್ಳಲು ಜೆಡಿಎಸ್ ನಾಯಕರು ಸಿದ್ದತೆ ಮಾಡಿಕೊಂಡಿದ್ದಾರೆ.

ಕೋಲಾರದ ಮುಳುಬಾಗಿಲಿನ ಆಂಜನೇಯ ದೇವಸ್ಥಾನದಿಂದ ಪಂಚರತ್ನ ರಥಯಾತ್ರೆಗೆ ಸಿದ್ದತೆಗೆ ಜೆಡಿಎಸ್​ ಸಿದ್ಧತೆ ನಡೆಸಿದ್ದು, ಈ ಹಿಂದೆ 1994 ರಲ್ಲಿ ಇಲ್ಲಿಂದಲೇ ಪ್ರಚಾರ ಮಾಡಿ ಹೆಚ್​.ಡಿ ದೇವೇಗೌಡ ಅವರು ಯಶಸ್ವಿಯಾಗಿದ್ದರು. ಮತ್ತೆ ಈ ಯಾತ್ರೆ ಮಾಡಲು ಮಾಜಿ‌ ಸಿಎಂ ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ.

ಇನ್ನೇನು ಕೆಲವೇ ತಿಂಗಳು ರಾಜ್ಯ ವಿಧಾನಸಭೆ ಹಿನ್ನಲೆಯಲ್ಲಿ ಸುಮಾರು 128 ಅಭ್ಯರ್ಥಿಗಳ ಪಟ್ಟಿ ಈ ಯಾತ್ರೆಯಲ್ಲಿ ಬಿಡುಗಡೆಗೆ ಪ್ಲಾನ್ ಜೆಡಿಎಸ್​ ಚಿಂತನೆ ನಡೆಸಿದೆ. ಪ್ರತಿದಿನ 6 ಸಭೆ ಹಾಗೂ 3 ಸಾರ್ವಜನಿಕ ಸಭೆಗಳು ಮಾಡಿ ಮುಂದಿನ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಜೆಡಿಎಸ್​ ಭರ್ಜರಿ ತಯಾರಿಗೆ ನಿರ್ಧರಿಸಿದೆ.

ರಾಜ್ಯದಲ್ಲಿ ಪಂಚರತ್ನ ರಥಯಾತ್ರೆ ನಾಲ್ಕು ಹಂತದಲ್ಲಿ 6 ಟ್ಯಾಬ್ಲೋ ವಾಹನಗಳಲ್ಲಿ ಯಾತ್ರೆ ನಡೆಯಲಿದ್ದು, ಮೊದಲ ಹಂತದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ 25 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಯಲಿದೆ.

ಎರಡನೇ ಹಂತದ ರಥಯಾತ್ರೆ ಜನವರಿಯಿಂದ ಪ್ರಾರಂಭವಾಗಲಿದ್ದು, ಮೈಸೂರು ಭಾಗದಿಂದ‌ ಶರುವಾಗುತ್ತದೆ. ಮೂರು ಮತ್ತು ನಾಲ್ಕನೇ ಹಂತದಲ್ಲಿ ಉಳಿದ ಭಾಗಗಳಲ್ಲಿ ರಥಯಾತ್ರೆ ಜೆಡಿಎಸ್ ನಾಯಕರು ನಡೆಸಲಿದ್ದಾರೆ.

RELATED ARTICLES

Related Articles

TRENDING ARTICLES