ಹುಬ್ಬಳ್ಳಿ; ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಪ್ಲಾಪ್ ಆಗಿದೆ. ಇದು ಭಾರತ್ ಜೋಡೋ ಯಾತ್ರೆ ಅಲ್ಲ ಕಾಂಗ್ರೆಸ್ ನಾಯಕರ ಜೋಡೋ ಯಾತ್ರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ವ್ಯಂಗ್ಯವಾಡಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನ ಒಂದುಗೂಡಿಸೋ ಯಾತ್ರೆ ಮಾಡುತ್ತಿದ್ದಾರೆ. ಭಾರತ್ ಜೋಡೋದಿಂದ ರಾಹುಲ್ ಗಾಂಧಿಗೆ ಮುಂಜಾನೆ, ಸಂಜೆ ವಾಕಿಂಗ್ ಆಗ್ತಿದೆ ಎಂದು ಅವರ ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ 150 ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಹಿಡಿಯುತ್ತೇವೆ. ಎಲ್ಲ ನಾಯಕರ ನೆರವಿನೊಂದಿಗೆ ಸಂಪೂರ್ಣ ಬಿಜೆಪಿ ಗೆಲುವು ಸಾಧಿಸುವ ವಾತಾವರಣ ಇದೆ. ಜಗಳದಿಂದ ಕೂಡಿದ ಸರ್ಕಾರ ಬೇಡವಾಗಿದೆ.
ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರಕಾರವನ್ನ ಜನ ಬಯಸುತ್ತಿದ್ದಾರೆ. ದೇಶಶ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಸರಕಾರ ಪದೇ ಪದೇ ಅಧಿಕಾರಕ್ಕೆ ಬರುತ್ತಿದೆ. ಅದರಂತೆ ಕರ್ನಾಟಕದಲ್ಲೂ ಅಧಿಕಾರ ಹಿಡಿಯಲಿದೆ. ಬಡ ರೈತರ ಪರವಾಗಿ ಬೆಜೆಪಿ ಕೆಲಸ ಮಾಡುತ್ತದೆ ಎಂದರು.
ಇನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುರಿತು ಮಾತನಾಡಿದ ಅರುಣ್ ಸಿಂಗ್, ಯತ್ನಾಳ್ ಲೀಡರ್ ಅಲ್ಲ. ಬಸನಗೌಡ ಯತ್ನಾಳ್, ಅರವಿಂದ್ ಬೆಲ್ಲದ್ ಬಿಜೆಪಿ ನಾಯಕರಲ್ಲ. ಕೋರ ಕಮೀಟಿಯಲ್ಲಿ ಯತ್ನಾಳ ಇಲ್ಲ ಅವರಿಗೆ ಶೋಕಾಸ್ ನೋಟೀಸ್ ಕೊಡಲಾಗಿದೆ ಶಿಸ್ತು ಕಮೀಟಿ ಅವರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.