ಹಾಸನ : ಶಕ್ತಿದೇವತೆ, ಹಾಸನದ ಅಧಿದೇವತೆ ಹಾಸನಾಂಬೆ ತಾಯಿ ವರ್ಷದ ಬಳಿಕ ದರ್ಶನ ಕಲ್ಪಿಸಿದ್ದಾಳೆ..ಮಧ್ಯಾಹ್ನ 12.12 ಕ್ಕೆ ಗರ್ಭಗುಡಿಯ ಬಾಗಿಲು ತೆರೆಯುತ್ತಿದ್ದಂತೆ ವರ್ಷದಿಂದ ಆರದ ದೀಪ ಹಾಗೂ ಬಾಡದ ಹೂವನ್ನು ಕಂಡು ಭಕ್ತರು ಪುಳಕಿತರಾದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಕುಟುಂಬ ಸಮೇತರಾಗಿ ದರ್ಶನ ಪಡೆದರು. ಬೆಳಗ್ಗೆಯಿಂದಲೇ ಪುರೋಹಿತರು ವಿಶೇಷ ಪೂಜೆಯನ್ನು ಅರ್ಪಿಸಿದ್ದರು. ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಹಾಸನಾಂಬೆ ಗರ್ಭಗುಡಿ ಬಾಗಿಲು ತೆಗೆಯುವ ವಿಧಿವಿಧಾನಗಳನ್ನು ಆರಂಭಿಸಲಾಯಿತು. ಅರಸು ಮನೆತನದ ನಂಜೇರಾಜೇ ಅರಸ್ ರವರು ದೇವಾಲಯದ ಮುಂಭಾಗ ಬಾಳೆಗಿಡಕ್ಕೆ ವಿಶೇಷ ಪೂಜೆಯನ್ನು ನೆರವೇರಿಸಿದ್ರು. ಬಾಳೆಗಿಡವನ್ನು ಕತ್ತರಿಸುತ್ತಿದ್ದಂತೆ ಗರ್ಭಗುಡಿಯ ಬಾಗಿಲನ್ನು ತೆರೆಯಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಪ್ರೀತಂಗೌಡ,ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಎಸ್ಪಿ ಹರಿರಾಂ ಶಂಕರ್ ಸೇರಿದಂತೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲಯನ್ನು ತೆರೆಯಲಾಯಿತು.
ಗರ್ಭಗುಡಿ ಓಪನ್ ಆಗಿದ್ದರೂ ಗುರುವಾರ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿಲ್ಲ. ಪುರೋಹಿತರ ತಂಡ ದೇವಾಲಯದ ಒಳಭಾಗದಲ್ಲಿ ಸ್ವಚ್ಛತೆ ಮಾಡಿ, ಸುಣ್ಣಬಣ್ಣ ಬಳಿಯುತ್ತಾರೆ. ಬಳಿಕ ದೇವಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ಹಾಗೂ ನೈವೇದ್ಯವನ್ನು ನೆರವೇರಿಸುತ್ತಾರೆ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರಿಗೆ ದರ್ಶನ ಮಾಡೋದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕೊರೋನಾ ಬಳಿಕ ಅದ್ದೂರಿಯಾಗಿ ಜಾತ್ರಾಮಹೋತ್ಸವವನ್ನು ಜಿಲ್ಲಾಡಳಿತ ಆಯೋಜನೆ ಮಾಡಿದೆ. ಶಾಸಕ ಪ್ರೀತಂಗೌಡ ಕೂಡ ದೇವಿಯ ದರ್ಶನ ಮಾಡಿ, ದೇವಿಯ ಪವಾಡವನ್ನು ಕೊಂಡಾಡಿದರು.
ದೇವಿಯ ದರ್ಶನಕ್ಕೆ ಬಂದವರ ಕಣ್ಮನ ಸೆಳೆಯೋದಕ್ಕೆ ಅಂತಾ ಬಹಳ ವಿಶೇಷವಾದ ಅಲಂಕಾರಗಳನ್ನು ಮಾಡಲಾಗಿದೆ. ಗರ್ಭಗುಡಿಯ ಮುಂಭಾಗ ಹಣ್ಣು ಹಾಗೂ ತರಕಾರಿಯಿಂದ ಅದ್ದೂರಿಯಾಗಿ ಅಲಂಕಾರ ಮಾಡಿದ್ದಾರೆ. ಸಿದ್ದೇಶ್ವರ ಹಾಗೂ ಹಾಸನನಾಂಭ ದೇವಾಲಯದ ಮುಂಭಾಗ ವಿವಿಧ ಹೂಗಳಿಂದ ಜನರನ್ನ ಆಕರ್ಷಿಸುವಂತಹ ಅಲಂಕಾರ ಮಾಡಲಾಗಿದೆ. ಇನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೈಸೂರು ಮಾದರಿಯ ಲೈಟಿಂಗ್ ಅಳವಡಿಸಲಾಗಿದ್ದು, ಜಿಲ್ಲಾಡಳಿತದ ವ್ಯವಸ್ಥೆಯ ಬಗ್ಗೆ ಭಕ್ತರಿಂದ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಚಿನ್ ಶೆಟ್ಟಿ ಪವರ್ ಟಿವಿ ಹಾಸ