ಮಂಡ್ಯ : ಬಿಜೆಪಿ ನಮ್ಮ ಪಾದಯಾತ್ರೆ ನಿಲ್ಲಿಸಲು ನಾನಾ ಪ್ರಯತ್ನ ಮಾಡುತ್ತಿದೆ. ಇಂದು ಮಾಧ್ಯಮದವರ ಮೇಲೂ ಪೊಲೀಸರು ಹಲ್ಲೆ ಮಾಡಿದ್ದಾರೆ. ಮಾಧ್ಯಮದವರು ನಮ್ಮ ವಿರುದ್ಧ ತಿರುಗಿಬೀಳುವಂತೆ ಪ್ರಚೋದಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಆರೋಪ ಮಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅವರಿಗೆ ಕಿರುಕುಳ ಕೊಡುತ್ತಿದ್ದಾರೆ. ಇದರಿಂದ ನಾವು ಭಯಪಟ್ಟು ಪಾದಯಾತ್ರೆ ನಿಲ್ಲಿಸುತ್ತೇವೆ ಅನ್ನೋದಾದರೆ ಅದು ಸುಳ್ಳು. ಬಿಜೆಪಿ ಈ ನಡೆಯಿಂದ ಅವರ ಯೋಗ್ಯತೆ ಏನು ಅನ್ನೋದು ಈಗ ಜನರ ಗಮನಕ್ಕೆ ಬರುತ್ತಿದೆ ಎಂದರು.
ಇನ್ನು, ಜಸ್ಟಿಸ್ ನಾಗಮೋಹನ್ ದಾಸ್ ಕಮಿಷನ್ ಬಗ್ಗೆ ಇಷ್ಟು ದಿನ ತಲೆ ಕೆಡಿಸಿಕೊಳ್ಳದ ಬಿಜೆಪಿ, ಈಗ ಚುನಾವಣೆ ಮುಂದಿರುವ ಕಾರಣ, ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿದೆ. 15 ದಿನದ ಒಳಗಾಗಿ 3ರಿಂದ 7% ಮೀಸಲಾತಿಯನ್ನು ಮೋದಿ ಸರ್ಕಾರ ಘೋಷಿಸಬೇಕು. ಹತ್ತು ಕಿಲೋ ಮೀಟರ್ಗಿಂತಲೂ ಹೆಚ್ಚು ಇವತ್ತು ನಡಿಗೆ ಆಗಿದೆ. ಸ್ವತಃ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು, ಕಾರ್ಯಕರ್ತರಿಗೆ ಉತ್ಸಾಹ ಬಂದಿದೆ ಎಂದು ಹೇಳಿದರು.