ತಲೈವಾ ರಜನಿಕಾಂತ್ ಮಗಳ ಫ್ಯಾಮಿಲಿಯಲ್ಲಿ ಮೂಡಿದ್ದ ಬಿರುಕು ಎಲ್ರಿಗೂ ಗೊತ್ತಿದೆ. ಕಾಲಿವುಡ್ನಿಂದ ಹಾಲಿವುಡ್ವರೆಗೂ ಮಿಂಚ್ತಿರೋ ಧನುಷ್ ಬಾಳಲ್ಲಿ ಎದ್ದಿರೋ ಬಿರುಗಾಳಿ ತಣ್ಣಗಾಗಲಿಲ್ಲ ಅಂತ ಫ್ಯಾನ್ಸ್ ಕೂಡ ಬೇಸರವಾಗಿದ್ರು. ಇದೀಗ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ ಸೂಪರ್ ಸ್ಟಾರ್ ಅಳಿಯ. ಅದೇನು ಅಂತೀರಾ..? ನೀವೇ ಓದಿ.
- ಮಾವನ ಮಾತಿಗೆ ಮಣಿದುಬಿಟ್ರಾ ಸೂಪರ್ ಸ್ಟಾರ್ ಧನುಷ್..?
ದಿ ಗ್ರೇಟ್ ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್ ಮುದ್ದಿನ ಮಗಳು ಐಶ್ವರ್ಯಾ. ಪ್ರೀತಿಸಿದ ನಂತ್ರ ಮದ್ವೆ ಪ್ರಸ್ತಾಪ ಇಟ್ಟಾಗ್ಲೂ ರಜನಿ ವಿಚಲಿತರಾಗದೆ ಮಗಳ ಮಾತಿಗೆ ಯೆಸ್ ಅಂದಿದ್ರು. 2004 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಧನುಷ್- ಐಶ್ವರ್ಯಾ ಜೋಡಿ 18 ವರ್ಷಗಳ ಕಾಲ ಸುಖ ಸಂಸಾರ ನಡೆಸಿ ಧಿಡೀರ್ ಡಿವೋರ್ಸ್ ನಿರ್ಧಾರ ತೆಗೆದುಕೊಂಡ್ರು. ಇ ಸುದ್ದಿ ಧನುಷ್, ರಜನಿಕಾಂತ್ ಫ್ಯಾನ್ಸ್ಗೆ ಆಘಾತ ತಂದಿತ್ತು.
ಯೆಸ್.. ಒಂದು ಕಪ್ಪು ಚುಕ್ಕೆಯಿಲ್ಲದೆ ಬಾಳಿ ಬದುಕಿದ ರಜನಿ ಫ್ಯಾಮಿಲಿಯಲ್ಲಿ ಮೂಡಿದ ಈ ಬಿರುಕಿನಿಂದ ತಲೈವಾ ಅಕ್ಷರಶಃ ಕುಗ್ಗಿ ಹೋಗಿದ್ರು. ಎಲ್ಲೂ ಒಬ್ಬರಿಗೊಬ್ರು ಮೀಡಿಯಾ ಎದ್ರು ಕಾಲೆಳೆದುಕೊಳ್ಳದೆ ಸೈಲೆಂಟ್ ಆಗಿ ಡಿವೋರ್ಸ್ ನಿರ್ಧಾರಕ್ಕೆ ಬಂದಿದ್ದು ಅಚ್ಚರಿಗೆ ಕಾರಣವಾಗಿತ್ತು. ಏನೇ ಮನಸ್ತಾಪ ಇದ್ರೂ ಪ್ಲೀಜ್ ಮಾತನಾಡಿ ಬಗೆಹರಿಸಿಕೊಳ್ಳಿ ಅಂತಾ ಫ್ಯಾನ್ಸ್ ಕಮೆಂಟ್ ಮಾಡ್ತಿದ್ರು.
ಅನೇಕ ಖಾಸಗಿ ಕಾರ್ಯಕ್ರಮಗಳಲ್ಲಿ ಈ ಜೋಡಿ ಕೈ ಕೈ ಹಿಡಿದೇ ಬರ್ತಿತ್ತು. ಕ್ಯೂಟ್ ಕಪಲ್ ಮೇಲೆ ಯಾರ ದೃಷ್ಟಿ ಬೀಳದೆ ಇರಲಿ ಅಂತಾ ಫ್ಯಾನ್ಸ್ ಕೂಡ ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ರು. ಆದ್ರೆ, ಈ ಜೋಡಿ ಮಾತ್ರ ಒಟ್ಟಾಗಿ ಬಾಳೋಕೆ ಇಷ್ಟವಿಲ್ಲದೆ ಡಿವೋರ್ಸ್ ನಿರ್ಧಾರ ತೆಗೆದುಕೊಂಡ್ರು. ಕೊನೆಗೆ ಖುದ್ದಾಗಿ ರಜನಿಕಾಂತ್ ಕೂಡ ಇಬ್ಬರಿಗೂ ಸಲಹೆ ಕೊಟ್ಟಿದ್ರು ಎನ್ನಲಾಗಿತ್ತು. ಕೊನೆಗೂ ರಜನಿಕಾಂತ್ ಮಾತಿಗೆ ಮಣಿದು ಜೋಡಿ ಮತ್ತೆ ಒಂದಾಗ್ತಿದ್ದಾರಂತೆ.
ಯೆಸ್.. ಕೊನೆಗೂ ಅಭಿಮಾನಿಗಳ ಹಾರೈಕೆ ಫಲಶೃತಿಯಾಗಿದೆ. ರಜನಿಕಾಂತ್ ಫ್ಯಾಮಿಲಿ, ಧನುಷ್ ಫ್ಯಾಮಿಲಿ ಒಟ್ಟಿಗೆ ಕೂತು ಚರ್ಚೆ ಮಾಡಿದ್ದಾರಂತೆ. ಎಲ್ರಿಗೂ ರೋಲ್ ಮಾಡೆಲ್ ಆಗಿರಬೇಕಾದವ್ರು ನೀವು. ವಿವಾದಗಳಿಗೆ ಈಡಾಗಬೇಡಿ ಎಂಬ ಕಿವಿಮಾತು ಹೇಳಿದ್ದಾರಂತೆ. ಒಟ್ಟಾಗಿರಿ ಎಂಬ ಮಾವನ ಮಾತಿಗೆ ಬೆಲೆಕೊಟ್ಟು ಮತ್ತೆ ಈ ಜೋಡಿ ಒಂದಾಗ್ತಿದೆಯಂತೆ. ಸದ್ಯ ಈ ಕುರಿತು ಇಬ್ರೂ ಅಫಿಶಿಯಲ್ ಆಗಿ ಮೌನ ಮುರಿಯಬೇಕಿದೆ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ