ಬೆಂಗಳೂರು: ಸೆ.4 (ಇಂದು) ರಂದು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯಕ್ಕೆ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.
ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯನ್ನ ಭಾರತ ತನ್ನ ಕೈವಶ ಪಡೆದ ಹಿನ್ನಲೆಯಲ್ಲಿ ವಿರಾಟ್ಗೆ ವಿಶ್ರಾಂತಿ ನೀಡಲಾಗಿದೆ. ಭಾನುವಾರ ಗುವಾಹಟಿಯಲ್ಲಿ ನಡೆದ ಸರಣಿ ಗೆಲುವಿನ ನಂತರ ಕೊಹ್ಲಿ ಸೋಮವಾರ ಬೆಳಗ್ಗೆ ಮುಂಬೈಗೆ ಹೋಗಿದ್ದಾರೆ. ಅಂತಿಮ ಟಿ20 ಪಂದ್ಯದಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ-20 ಪಂದ್ಯದಲ್ಲಿ ವಿರಾಟ್ 28 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿದರು, ಭಾರತವು ಎರಡನೇ T-20 ಪಂದ್ಯವನ್ನ 16 ರನ್ಗಳಿಂದ ಗೆದ್ದು ಮೂರು ಪಂದ್ಯಗಳ ಸರಣಿಯಲ್ಲಿ 2-0 ದಿಂದ ಮುನ್ನಡೆ ಸಾಧಿಸಿದೆ.