ಬೆಂಗಳೂರು : ನವರಾತ್ರಿ ಹಬ್ಬಕ್ಕೆ ಕರೆಂಟ್ ಶಾಕ್ ಗಿಫ್ಟ್ ನೀಡಿದ ಸರ್ಕಾರ ಇಂದಿನಿಂದ ಹೊಸ ವಿದ್ಯುತ್ ದರ ಪರಿಷ್ಕರಣೆ ಜಾರಿಯಾಗಲಿದೆ.
ರಾಜ್ಯದಲ್ಲಿ ಇಂದಿನಿಂದ ಹೊಸ ವಿದ್ಯುತ್ ದರ ಪರಿಷ್ಕರಣೆ ಜಾರಿಯಾಗಲಿದ್ದು, ವರ್ಷಕ್ಕೆ ಮೂರು ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಪರಿಷ್ಕರಣೆ ಮಾಡ್ತಿರೋ ಇಂಧನ ಇಲಾಖೆ ಇಂದಿನಿಂದ ಅನ್ವಯವಾಗುವಂತೆ ಹೊಸ ವಿದ್ಯುತ್ ದರ ಪರಿಷ್ಕರಣೆ ಮಾಡುತ್ತಿದೆ.
ಕಲ್ಲಿದ್ದಲು ದರ ಏರಿಕೆ ನೆಪವೊಡ್ಡಿ ವಿದ್ಯುತ್ ದರ ಪರಿಷ್ಕರಣೆ ಮಾಡಿರೋ KERC ದುಬಾರಿ ದುನಿಯಾದ ನಡುವೆ ಜನರ ಜೇಬಿಗೆ ಇಂದನ ಇಲಾಖೆ ಮತ್ತೆ ಕತ್ತರಿ ಹಾಕಿದೆ. ಏಪ್ರಿಲ್, ಜುಲೈ ಆಯ್ತು ಇದೀಗ ಅಕ್ಟೋಬರ್ 1 ನಿಂದಲೂ ಹೆಚ್ಚುವರಿ ವಿದ್ಯುತ್ ದರ ಶಾಕ್ ನೀಡಿದ್ದು, ಪ್ರತಿ ಯೂನಿಟ್ ಮೇಲೆ 23 ಪೈಸೆಯಿಂದ 43 ಪೈಸೆಯವರಿಗೆ ಹೆಚ್ಚಿಸಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಮೇಲೆ 43 ಪೈಸೆ ಹೆಚ್ಚುವರಿ ಶುಲ್ಕ ಕಟ್ಟಬೇಕು, ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿಯೂನಿಟ್ಗೆ ಹಾಲಿ ಶುಲ್ಕ ದ ಮೇಲೆ 24 ಪೈಸೆ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕು, ಸೆಸ್ಕಾಂ ಅಡಿಯಲ್ಲಿ ಬರುವ ವಿದ್ಯುತ್ ಗ್ರಾಹಕರಿಗೆ ಹೆಚ್ಚುವರಿ 35 ಪೈಸೆ ಏರಿಕೆ, ಹೆಸ್ಕಾಂ ಹಾಗೂ ಜೆಸ್ಕಾಂ ಅಡಿಯ ವಿದ್ಯುತ್ ಗ್ರಾಹಕರು ಪ್ರತಿ ಯೂನಿಟ್ ಗೆ 35 ಪೈಸೆಸುಮಾರು ಹೆಚ್ಚುವರಿ ವಿದ್ಯುತ್ ಶುಲ್ಕ ಕಟ್ಟಬೇಕು.