ಬೆಂಗಳೂರು: ಮಳೆಗಾಲ ಅಧಿವೇಶನ ಎರಡು ವಾರ ಮಾತ್ರ ನಡೆಸಲಾಗಿದೆ. ರಾಜ್ಯದಲ್ಲಿ ಪ್ರವಾಹ, ಅತಿವೃಷ್ಠಿ ಬಗ್ಗೆ ನಿಲುವಳಿ 60 ರಡಿ ಕೊಟ್ಟಿದ್ದೆ, ಬಹಳ ಸುದೀರ್ಘವಾಗಿ ಚರ್ಚೆ ಆಯ್ತು. ಈ ಬಗ್ಗೆ ರಾಜ್ಯ ಸರ್ಕಾರ ಸಮಂಜಸವಾದ ಉತ್ತರ ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನಾವು ಕೇಳಿದ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಸರಿಯಾದ ಅಂಕಿವಂಶ ನೀಡಿಲ್ಲ. ಆದ್ಧರಿಂದ ನಾವು ಸದನದ ಬಾವಿಗಿಳದು ಪ್ರತಿಭಟನೆ ಮಾಡಿದ್ದೇವೆ. ಪಿಎಸ್ ಐ ಹಗರದ ಬಗ್ಗೆಯೂ ಚರ್ಚೆ ಆಗಿದೆ. ಎಡಿಜಿಪಿ ಲೆವೆಲ್ ಅಧಿಕಾರಿಯನ್ನ ಸಸ್ಪೆಂಡ್ ಮಾಡಿದ್ದಾರೆ. ಅಕ್ರಮ ನಡೆದೇ ಇಲ್ಲ ಅಂತಾ ಹೇಳುತ್ತಿದ್ದಾರೆ. ಆದರೆ ವಿರೋಧ ಪಕ್ಷಗಳಿಂದ ಒತ್ತಡ ಬಂದಮೇಲೆ ಎಸ್ಐಟಿ ತನಿಖೆ ಮಾಡಿದರು ಎಂದರು.
ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮವಾಗಿದೆ. ಆಗ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರು ಆಗಿದ್ದರು. ಅಮೃತ್ ಪಾಲ್ ನೇಮಕದಲ್ಲೂ ಅಕ್ರಮ ನಡೆದಿತ್ತು. 90 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿ, ಬೇಕಾದವರಿಗೆ ಪೋಸ್ಟ್ ಕೊಟ್ಟಿದ್ದಾರೆ. ಎಡಿಜಿಪಿ ಸ್ಟ್ರಾಂಗ್ ರೂಂ ಗಳಿಗೆ ಹಗಿ ಖಾಲಿ ಪತ್ರಿಕೆಗಳಲ್ಲಿ ಉತ್ತರ ಬರೆದಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪಿಎಸ್ಐ ಹಗರಣದಲ್ಲಿ ಅಧಿಕಾರಿಗಳನ್ನ ಮಾತ್ರ ವಿಚಾರಣೆ ನಡೆಸಿ, ಜೈಲಿಗೆ ಕಳಿಸಿದ್ದಾರೆ. ಎಡಿಜಿಪಿಗೆ ಮಂಪರು ಪರೀಕ್ಷೆ ಆಗಬೇಕು. ಆಗ ರಾಜಕಾರಣಿಗಳು ಯಾರಿದ್ದಾರೆಂದು ಗೊತ್ತಾಗುತ್ತದೆ. ಈ ಬಗ್ಗೆ ಬಿಜೆಪಿ ಶಾಸಕ ಬಸವರಾಜ ದಡೇಸಗೂರು ಆಡಿಯೋ ರಿಲೀಸ್ ಆಗಿದೆ. ಅವರು ಕೂಡ ನಂದೇ ಆಡಿಯೋ ಅಂತ ಒಪ್ಪಿಕೊಂಡಿದ್ದಾರೆ. ಪರಸಪ್ಪ ಎಂಬುವರ ಬಳಿ 15 ಲಕ್ಷ ತೆಗೆದುಕೊಂಡಿದ್ದಾರೆ. ನಂತ್ರ ಎದರಿಸಿ ಬಿಟ್ಟಿದ್ದಾರೆ ಎಂದು ದೂರಿದರು.
ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಕೂಡ ಪಿಎಸ್ಐ ಹಾಗೂ ಇನ್ನೀತರ ಹಗರಣದ ಬಗ್ಗೆ ಮಾತಾಡಿದ್ದಾರೆ. ಇದ್ರಲ್ಲಿ ಮಾಜಿ ಸಿಎಂ ಪುತ್ರ ಭಾಗಿಯಾಗಿದ್ದಾನೆ ಅಂತಾ ಹೇಳಿದ್ದಾರೆ. ಯಡಿಯೂರಪ್ಪ ಮಗಾನಾ ಯಾರ್ ಮಗಾನೋ ಗೊತ್ತಿಲ್ಲ. ಒಬ್ಬ ಅಭ್ಯರ್ಥಿ ಮಿನಿಸ್ಟರ್ ಸಂಬಂಧಿಕ ಅವ್ನೂ ಸಿಕ್ಕಾಕಿಕೊಂಡಿದ್ದಾನೆ. ಇದ್ರಲ್ಲಿ ದೊಡ್ಡ ಹಗರನ ನಡೆದಿದೆ. ಈ ಹೊಣೆಯನ್ನ ಸರ್ಕಾರವೇ ಹೊತ್ತುಕೊಳ್ಳಬೇಕು. ಸಿಎಂ ಬೊಮ್ಮಾಯಿ ಜವಾಬ್ದಾರಿಯಿಂದ ತನಿಖೆಗೆ ಕೊಡಿ ಎಂದ್ರೆ ಒಪ್ಪಲೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.