Thursday, October 31, 2024

PFI ಬ್ಯಾನ್ ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆ : ಪ್ರಮೋದ್ ಮುತಾಲಿಕ್

ಧಾರವಾಡ : ದೇಶಾದ್ಯಂತ NIA ಅಧಿಕಾರಿಗಳ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಗಲಭೆ, ಕೊಲೆಗಳಲ್ಲಿ PFI, SDPI ಭಾಗಿಯಾಗಿದೆ. ಸಾಕಷ್ಟು ಗಲಭೆ ಹಾಗೂ ಕೊಲೆಗಳಲ್ಲಿ ಪಿಎಫ್ ಐ ಹಾಗೂ ಎಸ್ ಡಿ ಪಿ ಐ ಎರಡು ಸಂಸ್ಥೆಗಳು ಭಾಗಿ ಎಂದು ಸಾಕ್ಷಿ ಸಿಕ್ಕಿದೆ. ಕಳೆದ ಹಲವಾರು ವರ್ಷದಿಂದ ಪಿಎಫ ಐ ಬ್ಯಾನ್ ಮಾಡಬೇಕು ಎಂದು ಆಗ್ರಹ ಮಾಡುತಿದ್ದೆವೆ ಆದ್ರೆ, ಬ್ಯಾನ್​​ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದರು.

PFI ಬ್ಯಾನ್ ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆ .ಹಿಜಾಬ್​​ ಗಲಾಟೆಯಲ್ಲೂ ಅವರ ಕೈವಾಡವಿದೆ. ಹರ್ಷ, ಪ್ರವೀಣ್​ ನೆಟ್ಟಾರು ಕೊಲೆಯಲ್ಲೂ ಭಾಗಿಯಾಗಿದ್ದಾರೆ. ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾದವರನ್ನ ಜೈಲಿಗೆ ಹಾಕಬೇಕು. ಬಿಹಾರದಲ್ಲಿ ಸಿಕ್ಕಿಕೊಂಡವರು ಮುಸ್ಲಿಂ ರಾಷ್ಟ್ರ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ನಾವು ಮುಂದಿನ ತಿಂಗಳು ಇವರ ಬಗ್ಗೆ ದಾಖಲೆ ಸಹಿತ ಬಹಿರಂಗಗೊಳಿಸಿ ಆಂದೋಲನ ಮಾಡ್ತೇವೆ ಎಂದು ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES