Sunday, December 22, 2024

ಪೇಶಾವರ-ದುಬೈ ವಿಮಾನದಲ್ಲಿ ಪಾಕಿಸ್ಥಾನ ಪ್ರಯಾಣಿಕನ ರಂಪಾಟ.!

ಪಾಕಿಸ್ತಾನ: ಪೇಶಾವರ-ದುಬೈ ವಿಮಾನದಲ್ಲಿ ಪಾಕಿಸ್ಥಾನ ಪ್ರಯಾಣಿಕರು ಹಾಗೂ ವಿಮಾನಯಾನ ಸಿಬ್ಬಂದಿಯೊಂದಿಗೆ ವಾಗ್ದಾದ ನಡೆಸಿ ಗಲಾಟೆ ನಡೆಸಿದ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಪಾಕಿಸ್ತಾನದ ಪ್ರಯಾಣಿಕನೊಬ್ಬ ಕಾಲಿನ ಮೂಲಕ ಕಟಕಿಗೆ ಕಿಕ್​(ಒದೆದಿದ್ದಾರೆ) ಮಾಡಿದ್ದಾರೆ. ಈ ವೇಳೆ ಪ್ರಯಾಣಿಕನಿಗೆ ವಿಮಾನಯಾನ ಸಿಬ್ಬಂದಿಗಳು ತಿಳಿ ಹೇಳಲು ಮುಂದಾದರು ಕೇಳದೆ ಪ್ರಯಾಣಿಕ ದುರ್ವರ್ತನೆ ಮೆರೆದಿದ್ದಾನೆ. ಉಳಿದ ಪ್ರಯಾಣಿಕ ಇವರಿಗೆ ಪರವಾಗಿ ವಿಮಾನಯಾನ ಸಿಬ್ಬಂದಿಗಳ ಜತೆಗೆ ವಾಗ್ದಾದ ನಡೆಸಿ ವಿಮಾನದಲ್ಲಿ ಗಲಾಟೆ ಮಾಡಿದ್ದಾರೆ.

ಈ ಪ್ರಯಾಣಿಕ ರಂಪಾಟಕ್ಕೆ ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನ (ಪಿಐಎ) ಪೇಶಾವರ-ದುಬೈ ವಿಮಾನದಲ್ಲಿದ್ದ ಪ್ರಯಾಣಿಕರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

ಒಂದು ವಿಡಿಯೋದಲ್ಲಿ ವ್ಯಕ್ತಿ ಬನಿನ್​ ಮೇಲೆ ವಿಮಾನದ ಕಿಟಕಿಗೆ ಒದೆಯುವುದು ಮತ್ತು ಸೀಟುಗಳಿಗೆ ಗುದ್ದುವುದು ಕಂಡುಬರುತ್ತದೆ. ಇನ್ನೊಂದು ವೀಡಿಯೋದಲ್ಲಿ ಆತ ವಿಮಾನದ ನೆಲದ ಮೇಲೆ ಮಲಗಿರುವುದನ್ನ ಕಾಣಬಹುದು. ಈ ಪ್ರಯಾಣಿಕನನ್ನು ಈಗ ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ವರದಿ ತಿಳಿಸಿವೆ.

RELATED ARTICLES

Related Articles

TRENDING ARTICLES