ನವದೆಹಲಿ: ಇಲ್ಲಿನ ವಿಜಯ ಚೌಕ್ನಿಂದ ಇಂಡಿಯಾ ಗೇಟ್ ವರೆಗೆ ಅಭಿವೃದ್ಧಿಪಡಿಸಲಾದ ದಿ ಸೆಂಟ್ರಲ್ ವಿಸ್ತಾ ಅವೆನ್ಯೂ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದರು.
ಈ ಹೊಸ ರೂಪದ ಅವೆನ್ಯೂನ ಎರಡೂ ಬದಿಗಳಲ್ಲಿ ಹುಲ್ಲುಹಾಸು ಇದ್ದು, ಸುಮಾರು 101 ಎಕರೆಗಳನ್ನು ಒಳಗೊಂಡಿದೆ. ರಾಜಪಥ ಇಂದಿನಿಂದ ಇದು ಸಾರ್ವಜನಿಕರಿಗೆ ತೆರೆದಿರುತ್ತದೆ. ಈ ರಾಜಪಥ ವಾರಾಂತ್ಯದ ವೇಳೆಗೆ ಸಂಪೂರ್ಣ ಅವೆನ್ಯೂ ಕಾರ್ಯನಿರ್ವಹಿಸಲಿದೆ. ಈ ವೇಳೆ ಇಂಡಿಯಾ ಗೇಟ್ನಲ್ಲಿ 28 ಅಡಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಈಗಾಗಲೇ ಪ್ರಧಾನಿರಾಷ್ಟ್ರ ರಾಜಧಾನಿಯಲ್ಲಿರುವ ಐತಿಹಾಸಿಕ ರಾಜ್ಪಥ್ ಹಾಗೂ ಸೆಂಟ್ರಲ್ ವಿಸ್ಟಾ ಪ್ರದೇಶವನ್ನು ಇಂದಿನಿಂದ ‘ಕರ್ತವ್ಯ ಪಥ’ ಎಂದು ಮರುನಾಮಕರಣ ಮಾಡಲಾಗುತ್ತದೆ.