ಬೆಂಗಳೂರು: ಇಂದು ಐಟಿ ಕಂಪನಿಗಳ ಮುಖ್ಯಸ್ಥರ ಜೊತೆಗಿನ ಸಚಿವರ ಸಭೆ ಮುಕ್ತಾಯದ ಬಳಿಕ ಐಟಿ ಬಿಟಿ ಸಚಿವ ಅಶ್ವಥ್ ನಾರಾಯಣ್ ಸುದ್ದಿಗೋಷ್ಢಿ ನಡೆಸಿ ಮಾತನಾಡಿದ್ದಾರೆ.
ಕಾವೇರಿ 5ನೇ ಹಂತದ ನೀರು, ಮೆಟ್ರೋ, ಎಲಿವೇಟೆಡ್ ರಸ್ತೆ ಸೇರಿದಂತೆ ಅನೇಕ ಸೌಲಭ್ಯ ಐಟಿ ಸಂಸ್ಥೆಗಳು ಕೇಳಿದ್ದಾರೆ, ಅದನ್ನು ಒದಗಿಸುವ ಭರವಸೆ ಕೊಟ್ಟಿದ್ದೇವೆ. ಪರಸ್ಪರ ವಿಶ್ವಾಸದಿಂದ ಏನೇ ಸಮಸ್ಯೆ ಇದ್ರು ಬಗೆಹರಿಸಿಕೊಳ್ಳುವ ನಿರ್ಧಾರ ಮಾಡಿದ್ದೇವೆ. ವಾಟರ್ ಮ್ಯಾನೇಜ್ಮೆಂಟ್ ಸಮಸ್ಯೆ ಬಗ್ಗೆ ಅವರು ಪ್ರಮುಖವಾಗಿ ಕೇಳಿದ್ದಾರೆ, ಮುಂದಿನ ಮಾನ್ಸೂನ್ ವೇಳೆ ಅಲ್ಲಿ ಆ ರೀತಿಯ ಮಳೆ ಆಗಬಾರದು. ಆ ನಿಟ್ಟಿನಲ್ಲಿ ಮಹದೇವಪುರದಲ್ಲಿ ಅಲ್ಲಿ ಸೂಕ್ತ ಕ್ರಮ ವಹಿಸುತ್ತೇವೆ. ಈ ಬಗ್ಗೆ ಅವ್ರು ಡೆಡ್ ಲೈನ್ ನೀಡಿದ್ದಾರೆ. ಅವ್ರು ಕೊಟ್ಟ ಮಾತಿನಂತೆ ಅಲ್ಲಿ ಸಮಸ್ಯೆ ಸರಿಪಡಿಸುತ್ತೇವೆ.
ಬೆಂಗಳೂರು ಸರ್ವಾಂಗೀಣ ಅಭಿವೃದ್ಧಿಗೆ ಯಾವ ರೀತಿ ಕೆಲಸ ಮಾಡಬೇಕು ಎಂದು ಸಲಹೆಗಳನ್ನು ನಮಗೆ ಕೊಟ್ಟಿದ್ದಾರೆ. ಸಭೆಗೂ ಸರ್ಕಾರ ಸಂಪೂರ್ಣ ವಿಶ್ವಾಸ ಕೊಟ್ಟಿದೆ. ಮಹದೇವಪುರದಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಸಿಎಂ ಒತ್ತು ಕೊಟ್ಟಿದ್ದಾರೆ. ಐಟಿ ಕಂಪನಿಗಳ ಸಹಾಯದಿಂದ ಅಭಿವೃದ್ಧಿ ಆಗಲಿದೆ ಎಂದರು.
ಆ ಭಾಗದಲ್ಲಿ ಇನ್ಮುಂದೆ ಮಳೆ ಆದರೂ ಅವಾಂತರ ಆಗದ ರೀತಿಯಲ್ಲಿ ಎಲ್ಲ ಕ್ರಮಗಳನ್ನು ವಹಿಸುತ್ತೇವೆ. ಅಭಿವೃದ್ಧಿ ಮಾಡುವ ಬಗ್ಗೆ ಐಟಿ ಕಂಪನಿಗಳ ಮುಖ್ಯಸ್ಥರಿಗೆ ಭರವಸೆ ನೀಡಿದ್ದೇವೆ. ಅವರು ಕೂಡ ಇದನ್ನು ಒಪ್ಪಿ ಸಮಧಾನದಿಂದ ಹೋಗಿದ್ದಾರೆ. ಇನ್ಮುಂದೆ ಕನಿಷ್ಠ ಒಂದು ಬಾರಿ ಆದರು ಸಭೆ ಮಾಡುತ್ತೇವೆ ಎಂದರು.
ಇನ್ನು ಐಟಿ ಕಂಪನಿಗಳ ಪ್ರಾಜೆಕ್ಟ್ ಗಳ ಟೈಮ್ ಲೈನ್ ಬಗ್ಗೆ ಕೇಳಿದ್ದಾರೆ. ಮೂಲಭೂತ ಸೌಕರ್ಯಗಳ ಬಗ್ಗೆ ಕೇಳಿದ್ದಾರೆ, ನಾವು ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸುವ ಸಂಬಂಧ ಅವರಿಗೆ ತಿಳಿಸಿದ್ದೇವೆ ಎಂದು ಐಟಿ ಬಿಟಿ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.