ಕಲಬುರಗಿ: ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಹಿನ್ನಲೆಯಲ್ಲಿ ಸಿಐಡಿ ಅಧಿಕಾರಿಗಳಿಂದ ಮತ್ತೊಬ್ಬ ಪಿಎಸ್ಐ ಅಭ್ಯರ್ಥಿ ಬಂಧನ ಮಾಡಲಾಗಿದೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ರಚನಾ ಬಂಧಿತ ಆರೋಪಿ, ಪಿಎಸ್ಐ ಮಹಿಳಾ ಕೋಟಾದಲ್ಲಿ ಅರ್ಚನಾ ಮೊದಲ ರ್ಯಾಂಕ್ ಪಡೆದಿದ್ದಳು. ಪಿಎಸ್ಐ ಪರೀಕ್ಷಾ ಅಕ್ರಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಳು, ಪಿಎಸ್ಐ ಹಗರಣ ಹೊರ ಬಂದಾಗಿನಿಂದ ನಾಪತ್ತೆಯಾಗಿದ್ದಳು.
ಬೆಂಗಳೂರು ಸಿಐಡಿ ಅಧಿಕಾರಿಗಳು ಎಷ್ಟೇ ಹುಡುಕಾಟ ಮಾಡಿದ್ರು ಕೈಗೆ ಖಿಲಾಡಿ ಅರ್ಚನಾ ಸಿಕ್ಕಿರಲಿಲ್ಲ. ಮಹಾರಾಷ್ಟ್ರ ಗಡಿಯಲ್ಲಿ ತಲೆ ಮರೆಸಿಕೊಂಡು ಓಡಾಟ ನಡೆಸಿದ್ದಳು. ಕೊನೆಗೆ ಮಹಾರಾಷ್ಟ್ರ-ಕರ್ನಾಟಕ ಗಡಿ ಹಿರೋಳ್ಳಿ ಚೆಕ್ಪೋಸ್ಟ್ ಬಳಿ ರಚನಾ ಬಲೆಗೆ ಬಿದ್ದಿದ್ದಾಳೆ.
ಒಂದುವರೆ ತಿಂಗಳಿಂದ ಕಲಬುರಗಿ ಸಿಐಡಿ ಅಧಿಕಾರಿಗಳು ಬೆನ್ನು ಹತ್ತಿದ್ದರು. ನಿನ್ನೆ ಸಂಜೆ ಬಂಧಿಸಿ ಕಲಬುರಗಿಗೆ ಸಿಐಡಿ ಅಧಿಕಾರಿಗಳು ಕರೆತಂದಿದ್ದಾರೆ. ಇಂದು ಕಲಬುರಗಿ 5 ನೇ ಜೆಎಮ್ಎಫ್ಸಿ ಕೋರ್ಟ್ ನ್ಯಾಯಾಧೀಶರ ಮುಂದೆ ರಚನಾ ಅವ್ರನ್ನ ಹಾಜರು ಮಾಡಲಾಯಿತು. ರಚನಾ ಕರೆದ್ಯೊಯಲು ಕಲಬುರಗಿಗೆ ಆಗಮಿಸಿರೋ ಬೆಂಗಳೂರು ಸಿಐಡಿ ಟಿಮ್, ಇಂದು ರಾತ್ರಿ ಕಲಬುರಗಿಯಿಂದ ಬೆಂಗಳೂರಿಗೆ ಸಿಐಡಿ ಅಧಿಕಾರಿಗಳು ಕರೆದ್ಯೊಯಲಿದ್ದಾರೆ.