Tuesday, May 7, 2024

ಪವರ್ ಟಿವಿ ಸ್ಟ್ರಿಂಗ್ ಆಪರೇಷ್​’ನಲ್ಲಿ ಕೆಂಪಣ್ಣ ಮನದಾಳದ ಮಾತು

ಬೆಂಗಳೂರು: ರಾಜ್ಯ ಸರ್ಕಾರ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಆರೋಪ ಮಾಡಿದ ಸ್ಟ್ರಿಂಗ್ ಆಪರೇಷನ್ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

ಪವರ್ ಟಿವಿ ಸ್ಟಿಂಗ್ ಆಪರೇಷನ್ ನಲ್ಲಿ ಮಾತನಾಡಿದ ಕೆಂಪಣ್ಣ, ಪರ್ಸಂಟೇಜ್ ವ್ಯವಹಾರ ಈ ಮೊದಲೂ ಇತ್ತು. ಮೊದಲೆಲ್ಲಾ3%, 5% ಕಮಿಷನ್ ಕೇಳ್ತಾ ಇದ್ರು, ಎಲೆಕ್ಷನ್ ಟೈಮ್ ನಲ್ಲಿ ಪಾರ್ಟಿ ಫಂಡ್ ಪಡೆಯುತ್ತಿದ್ದರು. ಡಿ.ಕೆ.ಶಿವಕುಮಾರ್ ಸಚಿವರಾದ ಮೇಲೆ 10% ಆಯಿತು.

ಬಿಜೆಪಿ ಸರ್ಕಾರ ಬಂದ ಮೇಲೆ ಕಮಿಷನ್ ದಿಢೀರ್ ಹೆಚ್ಚಳವಾಗಿದೆ. ಕಮಿಷನ್ ಪ್ರಮಾಣ ಹೆಚ್ಚಾದಾಗ ಬಿಎಸ್ ವೈ ಗೆ ದೂರು ನೀಡಲಾಯಿತು. ಕೊಟ್ಟ ದೂರಿನ ಬಗ್ಗೆ ಯಡಿಯೂರಪ್ಪ ನಿರ್ಲಕ್ಷವಹಿಸಿದರು. ಪ್ರಧಾನಿ ನರೇಂದ್ರ ಮೋದಿಗೆ ದೂರು ಕೊಡಲು ನಿರ್ಧಾರ ಮಾಡಲಾಯಿತು. ಆದರೆ, ಪ್ರಧಾನಿ ಅಲಭ್ಯರಾದ ಕಾರಣ ಬಿ.ಎಲ್.ಸಂತೋಷ್ ಗೆ ದೂರು ನೀಡಲಾಯಿತು ಎಂದರು.

ಪ್ರದಾನಿ ಕಾರ್ಯಾಲಯದಿಂದಲೇ ತನಿಖೆಗೆ ಸೂಚನೆ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದ ಪಿಎಂ, ಮುಖ್ಯಕಾರ್ಯದರ್ಶಿಯವರಿಗೂ ವಿವರಣೆ ಕೊಡಲಾಗಿದೆ. ದೆಹಲಿಯಿಂದ ಬಂದ ಅಧಿಕಾರಿಗಳಿಗೂ ದಾಖಲೆ ಸಲ್ಲಿಕೆಯಾಗಿದೆ.

ಎಲ್ಲ ಸಚಿವರಿಗಿಂತ ಅತಿ ಹೆಚ್ಚು ಭ್ರಷ್ಟ ಮುನಿರತ್ನ. 10 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ಆಸ್ತಿ ಇದೆ. ಬೇರೆ ಸಚಿವರ ಮೇಲೂ ಮುನಿರತ್ನ ಪ್ರಭಾವ ಬೀರಿದ್ದಾರೆ. ಬೈರತಿ ಬಸವರಾಜು ಕೂಡ ಮುನಿರತ್ನ ನೋಡಿ ಕಲಿತಿದ್ದಾರೆ. ಸಚಿವರಾದ ಹೊಸದರಲ್ಲಿ ಬೈರತಿ ಬಸವರಾಜು ಕಮೀಷನ್ ಮುಟ್ಟುತ್ತಿರಲಿಲ್ಲ ಎಂದಿದ್ದಾರೆ.

ಅಧಿಕಾರಿಗಳು ಈಗ ಶಾಸಕರ ಮನೆ ಬಾಗಿಲಿಗೆ ಹೋಗಬೇಕು. ಎಲ್ಲ ಟೆಂಡರ್ ನ್ನೂ ಪ್ಯಾಕೇಜ್ ಮಾಡಲು ಒತ್ತಾಯಿಸುತ್ತಾರೆ. ಕಮಿಷನ್ ಕೊಡದೇ ಇದ್ರೆ ಕಾಮಗಾರಿಗೆ ಅವಕಾಶವೇ ಇಲ್ಲ. ಹೈ.ಕ. ಭಾಗದ ಶಾಸಕರಂತೂ ಮುಂಗಡಕ್ಕೆ ಒತ್ತಾಯಿಸುತ್ತಾರೆ. ಕಮೀಷನ್ ವಸೂಲಿಯಲ್ಲಿ ರಾಯಚೂರು ಶಾಸಕ ಅಗ್ರಗಣ್ಯ ಎಂದು ಕೆಂಪಣ್ಣ ಆರೋಪ ಮಾಡಿದರು.

ಸ್ಥಳೀಯ ಗುತ್ತಿಗೆದಾರರಿಗೆ ಟೆಂಡರ್ ಕೊಡುತ್ತಿಲ್ಲ. ಹೊರಗಿನವರಿಗೆ ಟೆಂಡರ್ ಕೊಟ್ರೆ ಕಮಿಷನ್ ಜಾಸ್ತಿ. ಕಮಿಷನ್ ನಿಂದ ಸಾಲಗಾರರಾದ ಸ್ಥಳೀಯ ಗುತ್ತಿಗೆದಾರರ.ಹಂತ ಹಂತವಾಗಿ ಕಮಿಷನ್ ಹಂಚಿಕೆಯಾಗುತ್ತದೆ. ಟೆಂಡರ್ ನಲ್ಲಿ ಶೇ.60 ರವರೆಗೂ ಕಮೀಷನ್ ಹಂಚಿಕೆಯಾಗುತ್ತದೆ. ಉಳಿದ ಶೇ.38-40 ರಲ್ಲಿ ಗುತ್ತಿಗೆ ಕಾಮಗಾರಿಯನ್ನು ಮುಗಿಸಬೇಕು. IASಅಧಿಕಾರಿಗಳೂ ಸಹ ಕಮಿಷನ್ ಹಗರಣದಲ್ಲಿ ಭಾಗಿ ಯಾಗಿದ್ದಾರೆ. ಮೊದಲು ಅಧಿಕಾರಿಗಳ ಕಮಿಷನ್ ಶೇ.8 ಇತ್ತು ಈಗ ಶೇ.3 ಮಾತ್ರ ಇದೆ.

ಬಸವರಾಜ ಬೊಮ್ಮಾಯಿಗೆ ಬದಲಾವಣೆ ಮಾಡುವ ಮನಸ್ಸಿದೆ. ದೂರು ಕೊಟ್ಟಾಗ ಬೊಮ್ಮಾಯಿ ತಕ್ಷಣ ಸ್ಪಂದಿಸುತ್ತಾರೆ. ಯಾವಾಗ ಬೇಕಾದರೂ ಬನ್ನಿ ಭೇಟಿ ಮಾಡಿ ಎನ್ನುತ್ತಾರೆ. ಆದರೆ, ಮುಖ್ಯಮಂತ್ರಿಯನ್ನು ಭೇಟಿ ಮಾಡುವುದೇ ಕಷ್ಟ. ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಪ್ರಭಾವದಲ್ಲಿದ್ದಾರೆ ಎಂದರು.

ಬೆಂಗಳೂರು ರಸ್ತೆ ದುರಸ್ತಿ ವಿಷಯದಲ್ಲೂ ಭಾರಿ ಅಕ್ರಮ. ಪ್ರಧಾನಿ ಕಾರ್ಯಕ್ರಮ ಮೂರು ತಿಂಗಳ ಮೊದಲೇ ತಿಳಿದಿತ್ತು. ಉದ್ದೇಶಪೂರ್ವಕವಾಗಿ ಮಳೆಗಾಲದಲ್ಲೇ ಕಾಮಗಾರಿ ಮಾಡಿದ್ರು.. ಪ್ರಧಾನಿ ಸಂಚರಿಸಿದ ರಸ್ತೆಗಳ ದುರಸ್ಥಿ ಬೇಕಾಬಿಟ್ಟಿ ಮಾಡಲಾಗಿದೆ.

ಹೆಚ್.ಡಿ.ಕುಮಾರಸ್ವಾಮಿ ಕಾಲದಲ್ಲಿ ಒಳ್ಳೆ ಕೆಲಸ ಆಗಿದೆ. ಹೆಚ್.ಡಿ.ಕೆ ಸಿಎಂ ಆಗಿದ್ದಾಗ ಗುತ್ತಿಗೆದಾರರಿಗೆ ಪೇಮೆಂಟ್ ಆಗ್ತಿತ್ತು. ಹೆಚ್.ಡಿ.ರೇವಣ್ಣ ನಿಜವಾಗಲೂ ಒಳ್ಳೆ ಕೆಲಸಗಾರ. ಗುತ್ತಿಗೆದಾರರ ಬಾಕಿ ತೀರಿಸಿದ್ದೇ ಹೆಚ್.ಡಿ.ರೇವಣ್ಣ ಕಾಲದಲ್ಲಿ
ದೇವೇಗೌಡರು ಎಂದೂ ಸಹ ನಯಾಪೈಸೆ ಕಮೀಷನ್ ಕೇಳಿಲ್ಲ. ಎಲೆಕ್ಷನ್ ಸಮಯದಲ್ಲಿ ಪಾರ್ಟಿ ಫಂಡ್ ತೆಗೆದುಕೊಂಡಿದ್ದಾರೆ ಎಂದು ಹೀಗೆ ಸಾಲು ಸಾಲು ಕೆಂಪಣ್ಣ ಅವರು ಆರೋಪ ಮಾಡಿದರು.

RELATED ARTICLES

Related Articles

TRENDING ARTICLES