ಬೆಂಗಳೂರು : ದೇಶಾದ್ಯಂತ ಮೊದಲ ದಿನ 2500 ಸ್ಕ್ರೀನ್ನಲ್ಲಿ ಸುದೀಪ್ ದರ್ಶನ ನೀಡುತ್ತಿದ್ದು, ವಿಶ್ವಾದ್ಯಂತ ಮೊದಲ ದಿನ 9000ಕ್ಕೂ ಅಧಿಕ ಪ್ರದರ್ಶನಗೊಳ್ಳಲಿದೆ.
ಅನೂಪ್ ಭಂಡಾರಿ ನಿರ್ದೇಶನ.. ಜಾಕ್ ಮಂಜು ನಿರ್ಮಾಣದ ಚಿತ್ರ ಕನ್ನಡದ ಜೊತೆ 6 ಭಾಷೆಯಲ್ಲಿ 2D & 3D ರಿಲೀಸ್ ಆಗಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ & ಇಂಗ್ಲಿಷ್ ನಲ್ಲಿ ತೆರೆಗೆ ಬರಲಿದ್ದು, ಗಡಾಂಗ್ ರಕ್ಕಮ್ಮನ ಕಿಕ್ ನಿಂದ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.
ಕರುನಾಡಿನಲ್ಲಿ 325 ಸಿಂಗಲ್ ಸ್ಕ್ರೀನ್, 65 ಮಲ್ಟಿಪ್ಲೆಕ್ಸ್ನಲ್ಲಿ ಚಿತ್ರ ಬಿಡುಗಡೆಗೊಳ್ಳಲಿದ್ದು, ಮೊದಲ ದಿನ ರಾಜ್ಯದಲ್ಲಿ ಬರೋಬ್ಬರಿ 2500 ಶೋಸ್ ನಡೆಯೋ ಸಾಧ್ಯತೆ ಇದೆ. ಸುಮಾರು 900 ಸ್ಕ್ರೀನ್ 3ಡಿ ಹಾಗೂ 1600 ಸ್ಕ್ರೀನ್ನಲ್ಲಿ 2ಡಿ ವರ್ಷನ್ ರಿಲೀಸ್ ಆಗಲಿದೆ.
ಇನ್ನು, ಬೆಂಗಳೂರಿನ 40 ಮಲ್ಟಿಪ್ಲೆಕ್ಸ್ ಗಳಲ್ಲಿ 800 ಶೋಸ್ ತೆರೆಗೆ ಬರಲಿದ್ದು, ಒಟ್ಟು 70 ಸಿಂಗಲ್ ಸ್ಕ್ರೀನ್ನಲ್ಲಿ 400 ಶೋ ಆಗಲಿದೆ. ಶಂಕರ್ ನಾಗ್ ಚಿತ್ರಮಂದಿರದಲ್ಲಿ ಮುಂಜಾನೆ 5.30ಕ್ಕೆ ಮೊದಲ ಶೋ ತೆರೆ ಕಾಣಲಿದೆ. ವೀರೇಶ್ ಥಿಯೇಟರ್ ನಲ್ಲಿ ಸಹ ದೊಡ್ಡ ಮಟ್ಟದ ಸೆಲೆಬ್ರೇಷನ್ ಗೆ ಫ್ಯಾನ್ಸ್ ಸಜ್ಜಾಗಿದ್ದು, ಊರ್ವಶಿ, ಪ್ರಸನ್ನ, ವೀರೇಶ್, ಶ್ರೀನಿವಾಸ ಸೇರಿದಂತೆ ಬಹುತೇಕ ಚಿತ್ರಮಂದಿರದಲ್ಲಿ ಬೆಳಗ್ಗೆ 6ಕ್ಕೆ ಶೋ ತೆರೆ ಕಾಣಲಿದೆ.