Sunday, November 10, 2024

ಇಂದಿನಿಂದ ಸಂಸತ್​​​​ ಮುಂಗಾರು ಅಧಿವೇಶನ ಆರಂಭ

ಬೆಂಗಳೂರು : ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಶುರುವಾಗಲಿದೆ. ಮುಂಗಾರು ಅಧಿವೇಶನದ ಎರಡು ಸದನಗಳಲ್ಲಿ ಮಂಡಿಸಲು ವಿವಿಧ ಇಲಾಖೆಗಳು ಈಗಾಗಲೇ 32 ಮಸೂದೆಗಳನ್ನು ಸೂಚಿಸಿವೆ.

ಆ 32 ಮಸೂದೆಗಳಲ್ಲಿ 14 ಮಂಡನೆಗೆ ಸಿದ್ಧವಾಗಿವೆ. ಆಗಸ್ಟ್ 12ರವರೆಗೆ ಅಧಿವೇಶನ ನಡೆಯಲಿದೆ. ಈಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರ ಚುನಾವಣೆ ನಡೆಯಲಿದೆ. ಹಾಗಾಗಿ, ಈಮುಂಗಾರು ಅಧಿವೇಶನ ಹೆಚ್ಚಿನ ಮಹತ್ವ ಹೊಂದಿದೆ.

2022ರ ಮುಂಗಾರು ಅಧಿವೇಶನದಲ್ಲಿ 108 ಗಂಟೆಗಳಲ್ಲಿ ಸುಮಾರು 62 ಗಂಟೆಗಳು ಸರ್ಕಾರಿ ವ್ಯವಹಾರಕ್ಕಾಗಿ ಮೀಸಲಿರುತ್ತದೆ. ಉಳಿದ ಸಮಯವನ್ನು ಪ್ರಶ್ನೋತ್ತರ ಸಮಯ, ಶೂನ್ಯ ವೇಳೆ ಮತ್ತು ಖಾಸಗಿ ಸದಸ್ಯರ ವ್ಯವಹಾರಕ್ಕೆ ನಿಗದಿಪಡಿಸಲಾಗಿದೆ. ಸಂಸತ್ತಿನ ಹಿಂದಿನ ಅಧಿವೇಶನಗಳಂತೆ ಈ ಅಧಿವೇಶನದಲ್ಲಿಯೂ ಸರಿಯಾದ ಕೋವಿಡ್ ಪ್ರೋಟೋಕಾಲ್ ಅನುಸರಿಸಲಾಗುವುದು. ಈ ನಿಟ್ಟಿನಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆ.

RELATED ARTICLES

Related Articles

TRENDING ARTICLES