ಬೆಂಗಳೂರು : ಆರ್.ಆರ್.ನಗರದಲ್ಲಿರುವ ನ್ಯಾಷನಲ್ Lu ಪಬ್ಲಿಕ್ ಸ್ಕೂಲ್ಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಬಂದಿದೆ.
ಇ-ಮೇಲ್ ಮೂಲಕ ಬೆದರಿಕೆ ಹಾಕಿರೋ ಕಿಡಿಗೇಡಿಗಳು. ಆರ್.ಆರ್.ನಗರದಲ್ಲಿರುವ ನ್ಯಾಷನಲ್ Lu ಪಬ್ಲಿಕ್ ಸ್ಕೂಲ್ಗೆ ಬೆದರಿಕೆ ನೀಡಿದ್ದಾರೆ. ಸ್ಥಳಕ್ಕೆ ಆರ್.ಆರ್.ನಗರ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನ ಸ್ಥಳಾಂತರ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ಸ್ಕೂಲ್ ಇದಾಗಿದ್ದು, ಇ-ಮೇಲ್ ಮೂಲಕ ಬೆದರಿಕೆ ಹಾಕಿರೋ ದುಷ್ಕರ್ಮಿಗಳು ಪ್ರಕರಣ ಸಂಬಂಧ ಆರ್.ಆರ್.ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.