ಚಿಕ್ಕಬಳ್ಳಾಪುರ : ಈ ಜಿಲ್ಲೆಯ ರೈತರು ಭಿನ್ನ-ವಿಭಿನ್ನ. ಒಂದಲ್ಲ ಒಂದು ರೀತಿ ಬೆಳೆಗಳನ್ನು ಬೆಳೆಯೋದರಲ್ಲಿ ಪ್ರಖ್ಯಾತಿ. ದ್ರಾಕ್ಷಿ, ಹೂ, ತರಕಾರಿ, ಹಣ್ಣು ಹಂಪಲುಗಳನ್ನು ಬೆಳೆಯೋ ಆ ರೈತರು, ಈಗ ಒಂದು ಹೆಜ್ಜೆ ಮುಂದೆ ಹೋಗಿ ಮರುಭೂಮಿಯಲ್ಲಿ. ಆದ್ರಲ್ಲೂ ಅರಬ್ ದೇಶಗಳಲ್ಲಿ ಬೆಳೆಯೋ ಖರ್ಜೂರ ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದ ಪ್ರಗತಿಪರ ರೈತ ಲಕ್ಷ್ಮಿನಾರಾಯಣರ ಖರ್ಜೂರ ತೋಟ. ಇವರಿಗೆ ಹತ್ತು ಎಕರೆ ಜಮೀನು ಇದ್ದು, ಅದರಲ್ಲಿ ಟೊಮ್ಯಾಟೋ, ಬದನೆ ಸೇರಿ ವಿವಿಧ ತರಕಾರಿ ಬೆಳೆ ಬೆಳೆಯುತ್ತಿದ್ರು. ಜೊತೆಗೆ ಮಾವು ಸಪೋಟ ಬೆಳೆಯುತ್ತಿದ್ರು. ಆದ್ರೆ, ಹವಾಮಾನ, ಮಾರುಕಟ್ಟೆಯ ಏರುಪೇರು, ಕೂಲಿ ಹಾಳುಗಳ ಕೊರತೆಯಿಂದ ನಿರೀಕ್ಷೆಯಂತೆ ಲಾಭ ಬರದೆ ನಷ್ಟದ ಮೇಲೆ ನಷ್ಟವಾಗಿತ್ತು. ಇದ್ರಿಂದ ಬೇಸತ್ತ ರೈತ… ಸ್ನೇಹಿತರ ಮೂಲಕ ಮಾಹಿತಿ ಪಡೆದು, ಖರ್ಜೂರ ಬೆಳೆದು ಈಗ ಆದಾಯದ ಮೇಲೆ ಆದಾಯ ಗಳಿಸುತ್ತಿದ್ದಾನೆ……
ಇನ್ನೂ ರೈತ ಲಕ್ಷ್ಮೀನಾರಾಯಣ, ಸದ್ಯಕ್ಕೆ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಬರ್ಹಿ ಅನ್ನೋ ಖರ್ಜೂರ ತಳಿಯನ್ನು ಬೆಳೆದಿದ್ದು, ಮೂರು ವರ್ಷದ ಬೆಳೆಯಾಗಿದೆ. 260 ಖರ್ಜೂರ ಗಿಡಗಳಿದ್ದು, ಗ್ರಾಹಕರು ನೇರವಾಗಿ ತೋಟಟ್ಟೆ ಬಂದು ಕೆಜಿಗೆ 200ರೂ.ನಂತೆ ಖರೀದಿಸುತ್ತಿದ್ದಾರೆ.
ಒಟ್ನಲ್ಲಿ ಮರುಭೂಮಿಯಂತಹ ಅರಬ್ ರಾಷ್ಟ್ರಗಳಲ್ಲಿ ಮಾತ್ರ ಬೆಳೆಯಬಹುದು ಅಂದುಕೊಂಡಿದ್ದ ಖರ್ಜೂರವನ್ನು ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬೆಳೆಯಲು ಆರಂಭಿಸಿದ್ದು ಎಲ್ಲ ರೈತ ವರ್ಗಕ್ಕೆ ಮಾದರಿಯಾಗುತ್ತಿದ್ದಾರೆ.
ಮಲ್ಲಪ್ಪ.ಎಂ.ಶ್ರೀರಾಮ್.ಪವರ್ ಟಿವಿ ಚಿಕ್ಕಬಳ್ಳಾಪುರ.