ಟೈಗರ್ ಟಾಕಿಸ್ನ ಚೊಚ್ಚಲ ಚಿತ್ರ ಲಂಕಾಸುರ ಟೀಸರ್ ಲಾಂಚ್ ಇವೆಂಟ್, ಕ್ರೇಜಿ ಸಿನಿಸಂಜೆಗೆ ಸಾಕ್ಷಿ ಆಯ್ತು. ಯೆಸ್.. ಹಿರಿಯ ಮತ್ತು ಕಿರಿಯ ಕಲಾವಿದರ ಸಮಾಗಮದಿಂದ ರಂಗೇರಿದ ವೇದಿಕೆಯಲ್ಲಿ ಯಂಗ್ ಟೈಗರ್ ಘರ್ಜನೆಯ ಜೊತೆ ಅವಿಸ್ಮರಣೀಯ ನೆನಪುಗಳ ಬುತ್ತಿ ಬಿಚ್ಚಿಕೊಳ್ತು. ಕ್ರೇಜಿಸ್ಟಾರ್ ಹೇಳಿದ್ದೇನು..? ವಿನೋದ್ ಪ್ರಭಾಕರ್ಗೆ ಕುಚಿಕುಗಳು ಸಾಥ್ ನೀಡಿದ್ಹೇಗೆ ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದೆ.
ಕ್ರೇಜಿ ವೇದಿಕೆಯ ಟೈಗರ್ ಟಾಕಿಸ್ನಲ್ಲಿ ಲಂಕಾಸುರ
ಹಿರಿಯ & ಕಿರಿಯ ಕಲಾವಿದರ ಮಹಾ ಸಂಗಮ..!
ಯಂಗ್ ಟೈಗರ್ಗೆ ಕ್ರೇಜಿ ದಿಲ್ ಕೊಟ್ಟ ಟಿಪ್ಸ್ ಏನು..?
ವಿನೋದ್ ಜೊತೆ ಅಭಿ, ಧರ್ಮ & ಯಶಸ್ ಸೂರ್ಯ
ಇದು ರೀಸೆಂಟ್ ಆಗಿ ಕ್ರೇಜಿಸ್ಟಾರ್ ರವಿಚಂದ್ರನ್ ಲಾಂಚ್ ಮಾಡಿದ ಲಂಕಾಸುರ ಚಿತ್ರದ ಟೀಸರ್ ಝಲಕ್. ಔಟ್ ಅಂಡ್ ಔಟ್ ಌಕ್ಷನ್ ಎಂಟರ್ಟೈನರ್ ಆಗಿರೋ ಈ ಚಿತ್ರ, ಅಂಡರ್ವರ್ಲ್ಡ್ನ ರಕ್ತಸಿಕ್ತ ಕಥೆಯನ್ನ ಹೇಳಲಿದೆ. ಯಂಗ್ ಟೈಗರ್ ವಿನೋದ್ ಪ್ರಭಾಕರ್ ನಾಯಕನಟನಾಗಿ ಘರ್ಜಿಸ್ತಿದ್ದು, ಲೂಸ್ಮಾದ ಯೋಗಿ ಕೂಡ ಪ್ರಧಾನ ಪಾತ್ರದಲ್ಲಿ ಕಾಣಸಿಗಲಿದ್ದಾರೆ.
ಕರುನಾಡ ಕನಸುಗಾರ ರವಿಮಾಮನ ಗರಡಿಯಲ್ಲಿ ಪಳಗಿರೋ ಪ್ರಮೋದ್ ಅನ್ನೋ ಪ್ರತಿಭೆ ಲಂಕಾಸುರನಿಗೆ ಌಕ್ಷನ್ ಕಟ್ ಹೇಳಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾ ಟೈಗರ್ ಟಾಕಿಸ್ ಬ್ಯಾನರ್ನಡಿ ತಯಾರಾಗ್ತಿರೋ ಮೊದಲ ಸಿನಿಮಾ. ನಟ ವಿನೋದ್ ಪ್ರಭಾಕರ್ ಹಾಗೂ ಅವ್ರ ಪತ್ನಿ ನಿಶಾ ವಿನೋದ್ ಪ್ರಭಾಕರ್ ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟಿದ್ದು, ತಂದೆ ಟೈಗರ್ ಪ್ರಭಾಕರ್ ಹೆಸರಲ್ಲೇ ಟೈಗರ್ ಟಾಕಿಸ್ ಬ್ಯಾನರ್ನ ತೆರೆದಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ನಡೆದ ಟೀಸರ್ ಲಾಂಚ್ ಇವೆಂಟ್ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬಂದು ಟೀಸರ್ ಲಾಂಚ್ ಮಾಡಿ, ಯಂಗ್ ಟೈಗರ್ಗೆ ಶುಭ ಹಾರೈಸಿದ್ರು. ವಿನೋದ್ ಮೊದಲ ಸಿನಿಮಾ ದಿಲ್ಗೆ ಕ್ಲಾಪ್ ಮಾಡಿದ್ದ ರವಿಚಂದ್ರನ್, ಈ ದಿಲ್ ಮಾಡದೆ ಬೇರಾರು ಮಾಡಬೇಕು ಎಂದ್ರು. ಅಲ್ಲದೆ, ನಿರ್ಮಾಪಕರಾಗ್ತಿರೋ ದಂಪತಿಗೆ ಒಂದಷ್ಟು ಟಿಪ್ಸ್ ಕೂಡ ಕೊಟ್ರು.
ಹಿರಿಯ ನಟ ಉಮೇಶ್, ದೇವರಾಜ್, ರವಿಶಂಕರ್, ರವಿಚಂದ್ರನ್, ಧರ್ಮ ಕೀರ್ತಿರಾಜ್, ಯಶಸ್ ಸೂರ್ಯ, ಅಭಿಷೇಕ್ ಅಂಬರೀಶ್, ಯತೀಶ್ ರಾಕ್ಲೈನ್ ಹೀಗೆ ಹಿರಿಯ ಹಾಗೂ ಕಿರಿಯ ಕಲಾವಿದರ ಸಮಾಗಮಕ್ಕೆ ಸಾಕ್ಷಿ ಆಯ್ತು ಲಂಕಾಸುರ ವೇದಿಕೆ. ಅಲ್ಲದೆ ನಾಯಕಿಯರಾದ ಪಾರ್ವತಿ ಅರುಣ್ ಹಾಗೂ ಆದ್ಯಪ್ರಿಯಾ ವೇದಿಕೆಯಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆದ್ರು.
ಸಿನಿಮಾ ಡೈಲಾಗ್ನಿಂದ ಉಮೇಶ್ ಅವ್ರು ಹಾಸ್ಯದ ರಸದೌತಣ ಉಣಬಿಡಿಸಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವ್ರ ಮೊಗದಲ್ಲಿ ನಗು ತಂದಿತು.
ವೇದಿಕೆಯಲ್ಲಿ ಲಂಕಾಸುರ ಮಾಸ್ ಟೀಸರ್ನ ಗುಣಗಾನದ ಜೊತೆ ಟೈಗರ್ ಪ್ರಭಾಕರ್ನ ಎಲ್ಲರೂ ನೆನೆದರು. ಟೆಕ್ನಿಕಲಿ ಸಖತ್ ಸೌಂಡ್ ಮಾಡ್ತಿರೋ ಲಂಕಾಸುರ, ಯಂಗ್ ಟೈಗರ್ ಸಿನಿಕರಿಯರ್ಗೆ ಬಿಗ್ ಟ್ವಿಸ್ಟ್ ಕೊಡೋ ಮನ್ಸೂಚನೆ ನೀಡಿದೆ. ತಂದೆಯಂತೆ ಸಿಕ್ಕಾಪಟ್ಟೆ ಅವಮಾನ, ಅಪಮಾನಗಳನ್ನು ಎದುರಿಸಿ ದೊಡ್ಡ ಮಟ್ಟಕ್ಕೆ ಬೆಳೆದಿರೋ ವಿನೋದ್ರ ಟೈಗರ್ ಟಾಕಿಸ್ ಕನ್ನಡ ಚಿತ್ರರಂಗದ ಪ್ರತಿಷ್ಠಿತ ಬ್ಯಾನರ್ ಆಗಿ ಬೆಳೆಯಲಿ ಅನ್ನೋದು ನಮ್ಮೆಲ್ಲರ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ