Friday, November 22, 2024

ಮೆಡಿಕಲ್‌ ಸೀಟು ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಉದ್ಯೋಗ, ಮೆಡಿಕಲ್ ಸೀಟ್, ಎಂಜಿನಿಯರ್ ಸೀಟ್ ಕೊಡಿಸ್ತೀನಿ ಅಂತ ಹೇಳಿ ಹಲವಾರು ಜನರಿಗೆ ಟೋಪಿ ಹಾಕಿರೋದನ್ನ ನಾವು ನೋಡಿದೀವಿ. ಅದೇ ರೀತಿ ಇಲ್ಲೋಂದು ಪ್ರಕರಣದಲ್ಲಿ ಮೆಡಿಕಲ್‌ ಸೀಟ್ ಕೊಡಿಸ್ತೀನಿ ಎಂದು ವಂಚನೆ ಮಾಡಿದ್ದಾರೆ. ‌ಆದರೆ ಅಷ್ಟಕ್ಕೆ ಆ ಖದೀಮರು ಸುಮ್ಮನೆ ಆಗಿಲ್ಲ. ಮೆಡಿಕಲ್ ಸೀಟ್ ಜೊತೆ ಹನಿಟ್ರಾಪ್ ಕೂಡ ಮಾಡಿದ್ದಾರೆ.

ವರ್ಷಕ್ಕೆ ಸಾವಿರಾರು ವಿದ್ಯಾರ್ಥಿಗಳು ವೈದ್ಯನಾಗಬೇಕೆಂಬ ಆಸೆಯಿಂದ ನೀಟ್ ಪರೀಕ್ಷೆ ಬರೆಯುತ್ತಾರೆ. ಆದರೆ ಅದರಲ್ಲಿ ಸೀಟ್ ಗಿಟ್ಟಿಸಿಕೊಳ್ಳುವವರು ಮಾತ್ರ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು. ಇನ್ನು ಖಾಸಗಿ ಸೀಟ್ ಬಗ್ಗೆ ಅಂತು ಕೇಳಲೇ ಬೇಡಿ ಲಕ್ಷಾಂತರ ರೂಪಾಯಿ ಇದ್ದ ಡೊನೇಷನ್, ಈಗ ಕೋಟಿಗೆ ಏರಿದೆ. ಮಕ್ಕಳ ಭವಿಷ್ಯಕ್ಕಾಗಿ ಸಾಲ-ಸೂಲ ಮಾಡಿ ಹಣ ಸಂಗ್ರಹಿಸಿ ಕೊಟ್ಟರೆ, ಈ ಕಡೆ ಸೀಟು ಇಲ್ಲ, ಆ ಕಡೆ ದುಡ್ಡು ಇಲ್ಲ. ಸೀಟು ಕೊಡಿಸುವುದಾಗಿ ಆಶ್ವಾಸನೆ ಕೊಟ್ಟ ಖದೀಮರ ಗ್ಯಾಂಗ್​ವೊಂದು ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ.

ಈ ಐದು ಜನ ಕಲಬುರ್ಗಿ ವೈದ್ಯನ ಮಗನಿಗೆ ಬೆಂಗಳೂರಿನ ಪ್ರತೀಷ್ಟಿತ ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ 66 ಲಕ್ಷ ಹಣವನ್ನು ಪಡೆದುಕೊಂಡಿದ್ರು. ನಂತರ ಸೀಟು ಕೊಡಿಸದೆ ಮೋಸ ಮಾಡಿದ್ರು..ವೈದ್ಯರು ಹಣ ವಾಪಸ್ಸು ಕೇಳಿದಾಗ ಬೆಂಗಳೂರಿಗೆ ಕರೆತಂದು, ಮೆಜೆಸ್ಟಿಕ್​ನ ಲಾಡ್ಜ್ ನಲ್ಲಿ ಇರಿಸಿ ಹನಿಟ್ರ್ಯಾಪ್‌ನಲ್ಲಿ ತಗ್ಲಾಕಿಸಿದ್ರು.

ಅದು ಹೇಗಪ್ಪ ಅಂದ್ರೆ ತಮಗೆ ಪರಿಚಯವಿದ್ದ ಇಬ್ಬರು ಮಹಾರಾಷ್ಟ್ರ ಮೂಲದ ಮಹಿಳೆಯರನ್ನು ವೈದ್ಯರ ಬಳಿ ಕಳುಹಿಸಿದ್ದ ಖತರ್ನಾಕ್‌ ಖದೀಮರು. ತಾವೇ ನಿಯೋಜಿಸಿದ ನಕಲಿ ಪೊಲೀಸರಿಂದ ಆ ಲಾಡ್ಜ್ ಮೇಲೆ ದಾಳಿ ಮಾಡಿಸುತ್ತಾರೆ. ಲಾಡ್ಜ್ ರೈಡ್ ಆಗಿದೆಯೆಂದು ಹೆದರಿಸಿ, ಮಹಿಳೆಯರ ಜೊತೆ ಇರುವಂತೆ ಫೋಟೋ ಕ್ಲಿಕ್ಕಿಸಿ. ವೈದ್ಯರ ಬಳಿ ಇದ್ದ ಒಂದು ಚೈನ್, ಒಂದು ಚಿನ್ನದ ಉಂಗುರ, ಒಂದು ಹಿತ್ತಾಳೆ ಉಂಗುರ ಮತ್ತು 30,000 ಸಾವಿರ ನಗದು ಪಡೆದು ನಕಲಿ ಪೊಲೀಸರು ಪರಾರಿಯಾಗುತ್ತಾರೆ. ಜೊತೆಗೆ 50 ಲಕ್ಷ ಕೊಟ್ಟರೆ ನಿಮ್ಮ ಮೇಲೆ ಯಾವುದೇ ಕೇಸ್ ಹಾಕುವುದಿಲ್ಲ ಎಂದು ಆಶ್ವಾಸನೆ ನೀಡುತ್ತಾರೆ. ತದನಂತರ ವೈದ್ಯರ ಅಸ್ತಿ ಪತ್ರವನ್ನು ಛತ್ರಪತಿ ಶಿವಾಜಿ ಮಹಾರಾಜ್ ಕೊ ಆಪರೇಟಿವ್ ಸೊಸೈಟಿಯಲ್ಲಿ ಒತ್ತೆ ಇಡಿಸಿ 50 ಲಕ್ಷ ಪಡೆದುಕೊಳ್ಳುತ್ತಾರೆ.ಇಷ್ಟೆಲ್ಲ ತಿಂದರು ಇವರ ದಾಹ ತಿರಲಿಲ್ಲ. ಪುನ್ಹ 20 ಲಕ್ಷ ಬೇಡಿಕೆ ಇಡುತ್ತಾರೆ. ಇನ್ನೇನು ದಾರಿ ಕಾಣದೆ, ಕಡೆಗೆ ವೈದ್ಯರು ಪೊಲೀಸ್ ಸ್ಟೇಷನ್ ಮೆಟ್ಟಿಲೇರುತ್ತಾರೆ.

ಘಟನೆ ಬಗ್ಗೆ ಎಚ್ಚೆತ್ತ CCB ಪೊಲೀಸರು, 5 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಬಂಧಿತರಿಂದ 24 ಲಕ್ಷ ಹಣ, 25 ಗ್ರಾಂ ತೂಕದ ಚಿನ್ನ, ಐದು ಮೊಬೈಲ್ ಫೋನ್, 2 ನಕಲಿ ವಾಕಿಟಾಕಿಗಳನ್ನು ವಶಕ್ಕೆ ಪಡೆದಿದ್ದಾರೆ.

ಅಶ್ವಥ್ ಎಸ್.ಎನ್‌ ಜೊತೆ ಸಿದ್ದಾರ್ಥ್ ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES