ಬೈರಾಗಿ ರಿಲೀಸ್ಗೆ ಇನ್ನೊಂದೇ ದಿನ ಬಾಕಿ. ಅಪ್ಪು ಇಲ್ಲದೆ ರಿಲೀಸ್ ಆಗ್ತಿರೋ ಶಿವಣ್ಣನ ಮೊದಲ ಸಿನಿಮಾ. ಟಗರು ಜೋಡಿ ಮತ್ತೆ ಮೋಡಿ ಮಾಡೋಕೆ ಬರ್ತಿರೋ ಸಿನಿಮಾ. ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿರೋ ಈ ಮೋಸ್ಟ್ ಎಕ್ಸ್ಪೆಕ್ಟೆಡ್ ಮೆಗಾ ಮಲ್ಟಿ ಸ್ಟಾರರ್ ಬಗ್ಗೆ ಪ್ರೊಡ್ಯೂಸರ್ ಕೃಷ್ಣ ಸಾರ್ಥಕ್ ಒಂದಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅದೇನು ಅನ್ನೋದನ್ನ ಅವ್ರ ಬಾಯಿಂದಲೇ ಒಮ್ಮೆ ಕೇಳಿ.
‘ಬೈರಾಗಿ’ ದಾಖಲೆ ಕಟೌಟ್.. ಅಪ್ಪು ಬಗ್ಗೆ ಸಾರ್ಥಕ ಮಾತು
ಶಿವಪ್ಪನ ಕ್ಲಾಸು, ಮಾಸು ಎಂಟ್ರಿಗೆ ಇನ್ನೊಂದೇ ದಿನ ಬಾಕಿ..!
ರಿಧಮ್ ಆಫ್ ಶಿವಪ್ಪ ಹಾಡಿಗೆ ಅಪ್ಪು ನಡೆಸಿದ್ರು ತಯಾರಿ
ಗಾಜನೂರಿನ ಅವಿಸ್ಮರಣೀಯ ನೆನಪಿನ ಬುತ್ತಿ ಬಿಚ್ಚಿಟ್ಟ ಕೃಷ್ಣ
ಭಜರಂಗಿ 2 ಬಳಿಕ ರಿಲೀಸ್ ಆಗ್ತಿರೋ ಶಿವಣ್ಣನ ಮೊದಲ ಸಿನಿಮಾ ಇದು. ಅದ್ರಲ್ಲೂ ಅಪ್ಪು ಇಲ್ಲದೆ ಇದು ಕರುನಾಡ ಚಕ್ರವರ್ತಿಗೆ ಮೊದಲ ಚಿತ್ರ. ವಿಜಯ್ ಮಿಲ್ಟನ್ ನಿರ್ದೇಶನ, ಕೃಷ್ಣ ಸಾರ್ಥಕ್ ನಿರ್ಮಾಣದಲ್ಲಿ ಸಂಬಂಧಗಳ ಮೌಲ್ಯಗಳನ್ನು ಅರ್ಥೈಸೋಕೆ ಸಮಾಜದ ಮುಂದೆ ಬರ್ತಿದೆ ಬೈರಾಗಿ ಇದೇ ಜುಲೈ 1ಕ್ಕೆ. ಅರ್ಥಾತ್ ಚಿತ್ರ ತೆರೆಗಪ್ಪಳಿಸೋಕೆ ಇನ್ನೊಂದೇ ದಿನ ಬಾಕಿ ಇದೆ.
ಟಗರು ಬಳಿಕ ಶಿವಣ್ಣ- ಡಾಲಿ ಧನಂಜಯ ಜುಗಲ್ಬಂದಿ ಮುಂದುವರೆಯಲಿದ್ದು, ದಿಯಾ ಫೇಮ್ ಪೃಥ್ವಿ ಅಂಬರ್ ಕೂಡ ಮುಖ್ಯಭೂಮಿಕೆಯಲ್ಲಿ ಮಿಂಚಲಿದ್ದಾರೆ. ಸದ್ಯ ನಕರನಖ ಸಾಂಗ್ ಹಾಗೂ ರಿಧಮ್ ಆಫ್ ಶಿವಪ್ಪ ಸಾಂಗ್ಸ್ ಜೊತೆ ಟೀಸರ್ ಝಲಕ್ಗಳು ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿವೆ. ಅಂದಹಾಗೆ ನಿರ್ಮಾಪಕ ಕೃಷ್ಣ ಸಾರ್ಥಕ್ ಸಿನಿಮಾದ ಬಗ್ಗೆ ಸಾಕಷ್ಟು ವಿಷಯಗಳನ್ನು ಎಕ್ಸ್ಕ್ಲೂಸಿವ್ ಆಗಿ ಶೇರ್ ಮಾಡಿಕೊಂಡಿದ್ದಾರೆ.
ಅಪ್ಪು ತೀರಿಕೊಂಡ ದಿನ ಬೈರಾಗಿ ಪ್ರೊಡ್ಯೂಸರ್ ಕೃಷ್ಣ ಶಿವಣ್ಣ- ಗೀತಕ್ಕ ಜೊತೆಗಿದ್ದರಂತೆ. ಆ ಸಂದರ್ಭ ಹೇಗಿತ್ತು ಅನ್ನೋದ್ರ ಜೊತೆಗೆ ಬೈರಾಗಿ ಸಾಂಗ್ ಹಾಡೋಕೆ ಅಪ್ಪು ಹೇಗೆಲ್ಲಾ ತಯಾರಿ ನಡೆಸಿದ್ರು ಅನ್ನೋದ್ರ ಬಗ್ಗೆಯೂ ಮಾತನಾಡಿದ್ದಾರೆ.
ಅಂದಹಾಗೆ ಬಹಳ ವರ್ಷಗಳ ನಂತ್ರ ಡಾ. ಶಿವರಾಜ್ಕುಮಾರ್ ಅವ್ರಿಗೆ ಸುಮಾರು 60 ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸಲಾಗ್ತಿದೆ. ಈಗಾಗ್ಲೇ ಸಾಕಷ್ಟು ಕಡೆ ಕಟೌಟ್ಗಳು ತಲೆ ಎತ್ತಿದ್ದು, ಶಿವಣ್ಣನ ವ್ಯಕ್ತಿತ್ವಕ್ಕೆ ತಕ್ಕನಾಗಿ ಮುಗಿಲೆತ್ತರದ ಕಟೌಟ್ ತಲೆ ಎತ್ತಲಿದೆ. ಆ ಕುರಿತ ದಾಖಲೆಯ ಕಟೌಟ್ ಬಗ್ಗೆ ಕೃಷ್ಣ ಖುಷಿ ವ್ಯಕ್ತಪಡಿಸಿದ್ದಾರೆ.
ರೀಸೆಂಟ್ ಆಗಿ ಮೈಸೂರಿನಲ್ಲಿ ತಾಯಿ ಚಾಮುಂಡಿಯ ದರ್ಶನ ಪಡೆದು, ಚಾಮರಾಜನಗರಕ್ಕೆ ತೆರಳುವಾಗ ನಡೆದ ಒಂದಷ್ಟು ಮರೆಯಲಾಗದ ಅಪರೂಪದ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ ನಿರ್ಮಾಪಕ. ಅಣ್ಣಾವ್ರ ತವರೂರು ಗಾನಜೂರಿಗೂ ಭೇಟಿ ನೀಡಿದ್ದ ಟೀಂ, ಅಣ್ಣಾವ್ರ ಆ ಹಳೆಯ ಮನೆಯಲ್ಲಿ ಸಾಕಷ್ಟು ಸಮಯ ಕಳೆಯಿತು.
ಅಲ್ಲದೆ ಫ್ಯಾನ್ಸ್ ಬೈರಾಗಿಯನ್ನ ವೆಲ್ಕಮ್ ಮಾಡೋಕೆ ದೊಡ್ಡ ಮಟ್ಟಕ್ಕೆ ಯೋಜನೆಗಳನ್ನು ರೂಪಿಸ್ತಿದ್ದಾರೆ. ಫ್ಯಾನ್ಸ್ ಶೋಗಳು ಎಷ್ಟೊತ್ತಿಗೆ ಶುರುವಾಗಲಿವೆ ಅನ್ನೋದ್ರ ಜೊತೆ ಮೂರು ಮುಖ್ಯ ಸೀಕ್ರೆಟ್ಸ್ನ ಬಿಟ್ಟುಕೊಟ್ಟಿದ್ದಾರೆ ಕೃಷ್ಣ ಸಾರ್ಥಕ್.
ಒಟ್ಟಾರೆ ಬೈರಾಗಿ ಇದೇ ಶುಕ್ರವಾರ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗ್ತಿದೆ. ಭೀಮ ಚಿತ್ರದ ನಿರ್ಮಾಪಕ, ಕೃಷ್ಣ ಅವ್ರ ಪಾರ್ಟ್ನರ್ ಜಗದೀಶ್ ಅವ್ರೇ ಡಿಸ್ಟ್ರಿಬ್ಯೂಟ್ ಮಾಡ್ತಿರೋದು ಇಂಟರೆಸ್ಟಿಂಗ್. ಕಥೆ, ಕಾಸ್ಟ್ಯೂಮ್, ನಟನೆ, ಪಾತ್ರಗಳು ಹೀಗೆ ಎಲ್ಲದರಲ್ಲೂ ವಿಭಿನ್ನತೆ ಇರೋ ಬೈರಾಗಿ, ಶಿವಣ್ಣ ಕರಿಯರ್ನ ಬೆಸ್ಟ್ ಸಿನಿಮಾ ಆಗಲಿ ಅನ್ನೋದು ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ