ಹಾಸನ : ದೇಶದ ಬಹಳಷ್ಟು ಕಡೆಯೂ ಇಂತಹವರಿಗೆ ಟ್ರೆನ್ ಮಾಡುತ್ತಾರೆ ಎಂದು ಹಾಸನದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಸ್ಥಾನದಲ್ಲಿ ನಡೆದಿರುವ ಘಟನೆಯನ್ನು ಖಂಡಿಸುತ್ತೇನೆ. ಎಕ್ಸ್ಟ್ರೀಮ್ ಕೋಮುವಾದದ ಪ್ರತಿಫಲ ಇದು. ಇದು ಐಎಸ್ ಐ ಚಟುವಟಿಕೆಗಳ ಇನ್ನೊಂದು ರೀತಿ ಇದು ಒಂದು ದಿನದ ಕೆಲಸವಲ್ಲ, ಬಹಳ ಟ್ರೇನ್ ಮಾಡಿದ್ದಾರೆ. ಆರೋಪಿಗಳನ್ನು ಬಹಳ ವರ್ಷಗಳ ಕಾಲ ಟ್ರೇನ್ ಮಾಡಿದ್ದಾರೆ. ಹತ್ಯೆ ಮಾಡಿ ಪ್ರಧಾನ ಮಂತ್ರಿಗೇ ಸವಾಲು ಹಾಕಿದ್ದಾರೆ. ದೇಶದ ಬಹಳಷ್ಟು ಕಡೆಯೂ ಇಂತಹವರಿಗೆ ಟ್ರೆನ್ ಮಾಡುತ್ತಾರೆ. ಮತಾಂಧತೆಯ ಹಿನ್ನೆಯಲ್ಲಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದವರನ್ನ ಸರ್ಕಾರದ ಬಂಧಿಸಿದೆ ಎಂದರು.
ಅದಲ್ಲದೇ, ಕೇಂದ್ರ ಸರ್ಕಾರ ಕೂಡಾ ನಿಗಾ ಇಟ್ಟಿದೆ. ಅದೇ ರೀತಿ ಉತ್ತರ ಕೊಡುಬೇಕಾಗಿದೆ. ಮುಂದೆ ಮಾಡುವವರಿಗೆ ಎಚ್ಚರಿಕೆ ಪಾಠವಾಗಬೇಕು. ರಾಜಸ್ಥಾನ ಸರ್ಕಾರ ಮಾಡುತ್ತದೆ ಅನ್ನೋ ವಿಶ್ವಾಸ ಇದೆ. ಸರಿಯಾದ ಕ್ರಮ ಮಾಡದೇ ಹೋದರೆ ಜನರ ವಿಶ್ವಾಸ ಕಳೆದುಕೊಳ್ಳುತ್ತಾರೆ. ರಾಜ್ಯ ಸರ್ಕಾರ ಮಾಡದೇ ಹೋದರೆ ಕೇಂದ್ರ ಮಾಡುತ್ತದೆ. ಮಡಿಕೇರಿಯಲ್ಲಿ ದೊಡ್ಡ ಅನಾಹುತದ ಹಾಗೆ ಬಿಂಬಿಸಿದ್ದರು. ಈಗ ಎಲ್ಲಾ ಬಾಯಿ ಮುಚ್ಚುಕೊಂಡಿದ್ದಾರೆ. ಸಿದ್ದರಾಮಯ್ಯ ಟ್ವೀಟ್ ಮಾಡಿ ಸುಮ್ಮನಾಗಿದ್ದಾರೆ ಎಂದು ಹೇಳಿದರು.
ಇನ್ನು, ಬೇರೆಯದ್ದಾಗಿದ್ರೆ ಇಷ್ಟರೊಳಗೆ ಹೇಗೆ ಮಾತಾಡ್ತಾ ಇದ್ರು, ಟಿಪ್ಪು ವಿಚಾರ ಆದ್ರೆ ಸೀಯಿಯಲ್ ರೀತಿ ಸ್ಟೇಟ್ ಮೆಂಟ್ ಕೊಡ್ತಾ ಇದ್ರು. ಆದರೆ ಈಗ ಯಾಕೆ ಸುಮ್ಮನಿದ್ದಾರೆ. ರಾಜಸ್ಥಾನದಲ್ಲಿ ಹೇಡಿಗಳು ಮಾಡುವಂತಹ ಕೆಲಸ ಮಾಡಿದ್ದಾರೆ. ಧಮ್ ಇಲ್ಲದೇ ಬೆನ್ನಿಗೆ ಚೂರಿ ಹಾಕಿದ್ದಾರೆ. ಮುಸ್ಲಿಂ ಸಂಘಟನೆಗಳ ಹೇಡಿಗಳ ಮಾಡಿರುವ ಕೃತ್ಯ ಇದು. ತಾಕತ್ ಇಲ್ಲದ, ಧಮ್ ಇಲ್ಲದವರು ಹೀಗೆ ಮಾಡಿದ್ದಾರೆ. ಭಯೋತ್ಪಾದಕ ಮುಸ್ಲಿಂ ಸಂಘಟನೆಯಿಂದ ಇಂತಹ ಕೃತ್ಯ ಎಸಗಿದ್ದಾರೆ ಎಂದರು.
ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ. ರಾಜ್ಯ ಸರ್ಕಾರ ಕೂಡಾ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜನರೇ ಪಾಠ ಕಲಿಸುತ್ತಾರೆ. ಈ ಘಟನೆಯನ್ನ ದೇಶವೇ ನೋಡುತ್ತಿದೆ. ಸರಿಯಾದ ಕ್ರಮ ಕೈಗೊಳ್ಳದೇ ಹೋದರೆ ರಾಜಸ್ಥಾನ ಸರ್ಕಾರವೇ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.