ತುಮಕೂರು : ತಿಪಟೂರು ತಾಲೂಕಿನ ಕುರುಬರಹಳ್ಳಿ ಗ್ರಾಮದ ಜೀವನ್ ಎಂಬ ವಿದ್ಯಾರ್ಥಿ ವಿದ್ಯುತ್ಚಾಲಿತ ವಾಹನವನ್ನು ತಯಾರಿಸಿದ್ದಾರೆ. ಅಪ್ಪಟ ಗ್ರಾಮೀಣ ಪ್ರತಿಭೆಯಾಗಿ ಎಲೆಕ್ಟ್ರಿಕಲ್ ವಾಹನ ತಯಾರಿ ಮಾಡಿದ್ದಾನೆ.
ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿ ಕುರುಬರಹಳ್ಳಿ ಗ್ರಾಮದ ರೈತ ದಂಪತಿಗಳಾದ ಶಿವಮೂರ್ತಿ ಶೋಭ ದಂಪತಿಗಳ ಕಿರಿಯ ಪುತ್ರ ತಿಪಟೂರಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ ಓದಿ ಫೇಲ್ ಆಗಿ, ಜೀವನದಲ್ಲಿ ತೇರ್ಗಡೆಯಾಗುವಂತಹ ವಿದ್ಯುತ್ ಚಾಲಿತ ದ್ವಿಚಕ್ರವಾಹನವನ್ನು ಪವರ್ ಟಿಲ್ಲರ್‌ಗಳನ್ನು ಮಾರ್ಪಡಿಸಿ ನಂತರ ಕೆಲಸಕ್ಕೆ ಬಾರದ ಜೀಪ್‌ವೊಂದನ್ನು ತೆಗೆದುಕೊಂಡು ಬಂದು ವಿದ್ಯುತ್ ಚಾಲಿತ ವಾಹನವನ್ನಾಗಿ ಮಾಡಿದ ಕೀರ್ತಿ ಜೀವನ್‌ಗೆ ಸಲ್ಲುತ್ತದೆ.
ಕೊರೊನಾ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಂತೆ ಮೊಬೈಲ್ ಹುಳುವಾಗಿದ್ದ. ಆದರೆ ಇಂತಹ ಮೊಬೈಲ್‌ನಿಂದ ಹೆಚ್ಚಾಗಿ ಎಲೆಕ್ಟ್ರಿಕಲ್ ವಾಹನಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ಹುಡುಕುತ್ತಿದ್ದ. ಕೊನೆಗೆ ತಾನೆ ಒಂದು ಎಲೆಕ್ಟ್ರಿಕಲ್ ವಾಹನವನ್ನು ಸಿದ್ದ ಪಡಿಸಿದ್ದಾನೆ. ಇನ್ನು ತಿಪಟೂರಿನಲ್ಲಿ ನಡೆದ 3ನೇ ದಕ್ಷಿಣ ಭಾರತ ವಸ್ತುಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆದ ಗ್ರಾಮೀಣ ಪ್ರತಿಭೆ ಜೀವನ್ ಇದೀಗ ಜೀಪ್ ತಯಾರಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.