ಬೆಂಗಳೂರು: ಬಿಬಿಎಂಪಿ ಯಲ್ಲಿ ದುಂದುವೆಚ್ಚಕ್ಕಿಲ್ವಾ ಕಡಿವಾಣ..? ಖಾಸಗೀ ಕಂಪನಿ ಜೊತೆ ಶಾಮೀಲಾಗಿ ಗಟ್ಟಿಮುಟ್ಟಾಗಿದ್ದ ಕಾಂಪೌಂಡ್, ಪಾರ್ಕ್ ನೆಲಸಮಗೊಳಿಸಿದ್ದಾರೆ.
ನಗರದಲ್ಲಿ ಗಟ್ಟಿಮುಟ್ಟಾದ ಪಾರ್ಕ್ ಗಳನ್ನೇ ಕೆಡವಿ ಹಾಕ್ತಿರೋದು ಯಾಕೆ..? ನಾಲ್ಕೇ ವರ್ಷದಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಉದ್ಯಾನವನ & ಕಾಂಪೌಂಡ್ ಧ್ವಂಸಗೊಳಿಸಿದ್ದು, ಅಧಿಕಾರಿಗಳು ಅನವಶ್ಯಕ ದುಂದುವೆಚ್ಚ ಮಾಡೋ ಉದ್ದೇಶ ಏನು..? ಖಾಸಗಿ ಕಂಪನಿ ಜೊತೆ ಶಾಮೀಲಾಗಿ ಗಟ್ಟಿಮುಟ್ಟಾಗಿದ್ದ ಕಾಂಪೌಂಡ್, ಪಾರ್ಕ್ ನೆಲಸಮಗೊಳಿಸಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಮೌರ್ಯ ಸರ್ಕಲ್ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ 2018ರಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಸುತ್ತಲೂ ಉದ್ಯಾನವನ & ಕಾಂಪೌಂಡ್ ಹೊಸದಾಗಿ ನಿರ್ಮಿಸಿ ಉದ್ಘಾಟನೆ ಮಾಡಲಾಗಿದೆ. 32 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಕಾಂಪೌಂಡ್ ಗಟ್ಟಿ ಮುಟ್ಟಾದ ಕಾಂಪೌಂಡ್ ಧ್ವಂಸ ಮಾಡಿ ಹೊಸ ಪ್ಲ್ಯಾನ್ ಮಾಡಲಾಗಿದೆ. 1997ರಲ್ಲಿ ಸ್ಥಾಪಿಸಲಾಗಿರುವ ಗಾಂಧಿ ಪ್ರತಿಮೆ & ಉದ್ಯಾನವನವನ್ನು 2016ರಲ್ಲಿ 32 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ.
ಇನ್ನು, 2016ರಲ್ಲಿ ಆರಂಭವಾದ ಕಾಮಗಾರಿ 2018 ರಲ್ಲಿ ಉದ್ಘಾಟನೆ ಮಾಡಲಾಗಿದ್ದು, ಗಾಂಧಿ ಪ್ರತಿಮೆ ಮುಂಭಾಗ, ಉದ್ಯಾನದಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳು ನಡೆಯಬಾರದೆಂಬ ಕಾರಣಕ್ಕೆ ನಿರ್ಮಿಸಲಾಗಿದ್ದ ಗಟ್ಟಿಮುಟ್ಟಾದ ಕಾಂಪೌಂಡ್ ಮೇಲೆ ಗ್ರಿಲ್ಸ್, ಗೇಟ್ ಕೂಡ ನಿರ್ಮಿಸಲಾಗಿತ್ತು. ಆದ್ರೆ ಏಕಾಏಕಿ ಬಿಬಿಎಂಪಿ ಗುಣಮಟ್ಟದ ಕಾಮಗಾರಿ ಧ್ವಂಸಗೊಳಿಸಿದ್ದಾರೆ.