ಬೆಂಗಳೂರು: ಇಂದು ಮತ್ತು ನಾಳೆ ಸಿಎಂ ದೆಹಲಿ ಪ್ರವಾಸದ ನಂತರ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ಚರ್ಚೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಂದು ಮಧ್ಯಾನ್ಹ 1 ಗಂಟೆಗೆ ತೆರಳಿ ನಾಳೆ ಸಂಜೆ 4 ಗಂಟೆಗೆ ವಾಪಾಸ್ ಆಗಲಿದ್ದಾರೆ. ಸಿಎಂ ದೆಹಲಿ ಪ್ರವಾಸ ಬಹಳ ಕುತೂಹಲ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ತೆರಳಿದ ನಂತರ ಸಿಎಂ ದೆಹಲಿ ಪ್ರವಾಸ ಮಾಡಲಿದ್ದು, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ಚರ್ಚೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅದಲ್ಲದೇ, ಹೈಕಮಾಂಡ್ ನಾಯಕರ ಭೇಟಿಗೆ ತೆರಳುತ್ತಿರುವ ಸಿಎಂ. ರಾಷ್ಟ್ರಪತಿ ಆಯ್ಕೆಯಾಗಿರುವ ವಿಚಾರ ಕೂಡ ಚರ್ಚೆ ಮಾಡುವ ಸಾಧ್ಯತೆ ಇದೆ. ಸಿಎಂ ದೆಹಲಿಗೆ ತೆರಳುತ್ತಿದ್ದಾರೆ ಎಂದ ತಕ್ಷಣ ರಾತ್ರಿ ಸಿಎಂ ನಿವಾಸಕ್ಕೆ ಹಲವಾರು ಶಾಸಕರು ಭೇಟಿ ನೀಡಿದ್ದು, ಸಚಿವ ಸಂಪುಟ ವಿಸ್ತರಣೆಯಾದ್ರೆ ತಮ್ಮನ್ನ ಪರಿಗಣಿಸುವಂತೆ ಮನವಿಯನ್ನು ಮಾಡಿದ್ದಾರೆ.
ಇನ್ನು, ಶಾಸಕರಾದ ರಾಜ್ ಕುಮಾರ್ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ್, ಮಾಡಾಳ್ ವಿರೂಪಾಕ್ಷಪ್ಪ, ಎಂ ಕೃಷ್ಣಪ್ಪ, ವೀರಣ್ಣ ಚರಂತಿಮಠ್. ಹಲವಾರು ವಿಚಾರಗಳಲ್ಲಿ ಸಂಪುಟ ವಿಚಾರ ಮುಂದಕ್ಕೆ ಹಾಕಿಲಾಗುತ್ತಿತ್ತು. ಸಧ್ಯಕ್ಕೆ ಎಲ್ಲಾ ಚುನಾವಣೆಗಳು ಮುಗಿದಿದ್ದು ಸಾರ್ವತ್ರಿಕ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಸಂಪುಟ ವಿಸ್ತರಣೆ ಮಾಡುತ್ತಾರೆ ಎನ್ನಲಾಗಿದೆ.