ತುಮಕೂರು : ಡೈರಿಯಲ್ಲಿ ಹಾಲಿನ ಡಿಗ್ರಿ ಬರುತ್ತಿಲ್ಲವೆಂದು ಹಾಲನ್ನ ಡೈರಿ ಬಾಗಿಲಿಗೆ ಸುರಿದು ರೈತರು ಪ್ರತಿಭಟನೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆಲದಿನಗಳಿಂದ ಹಾಲಿನ ಡಿಗ್ರಿ ಸರಿಯಾಗಿ ಬರುತ್ತಿಲ್ಲ ಎಂಬ ಕಾರಣ ನೀಡಿ ಕೆ.ಟಿ.ಹಳ್ಳಿ ಹಾಲು ಉತ್ಪಾದಕರ ಸಂಘ ರೈತರ ಹಾಲನ್ನು ನಿರಾಕರಿಸಿದೆ. ಈ ವಿಚಾರಕ್ಕೆ ಸಂಭಂಧಿಸಿದಂತೆ ಸ್ಥಳದಲ್ಲಿ ಸೇರಿದ್ದ ಸುಮಾರು ೨೦ಕ್ಕೂ ಹೆಚ್ಚು ಮಂದಿ ರೈತರು ಡೈರಿ ಬಾಗಿಲಿಗೆ ಹಾಲು ಸುರಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಇನ್ನು, ಮಳೆಗಾಲವಾಗಿರುವುದರಿಂದ ಹಸುಗಳು ಹೆಚ್ಚಾಗಿ ನೀರಿನಾಂಶ ಇರುವ ಹಸಿಹುಲ್ಲನ್ನು ತಿನ್ನುವ ಕಾರಣ ಹಾಲಿನಲ್ಲಿ ನೀರಿನಾಂಶ ಹೆಚ್ಚಾಗಿರುತ್ತದೆ. ಅದಕ್ಕೆ ಏಕಾಏಕಿ ರೈತರ ಹಾಲನ್ನು ನೀರಾಕರಿಸಿದರೆ ಜನರು ಏನು ಮಾಡಬೇಕು ಎಂದು ರೈತರು ಆಕ್ರೋಶಗೊಂಡು ಹಾಲನ್ನ ಡೈರಿ ಬಾಗಿಲಿಗೆ ಹಾಗೂ ಡೈರಿಯ ಒಳಗೆ ಸುರಿದು ಪ್ರತಿಭಟಿಸಿದ್ರು. ಇನ್ನೂ ಸ್ಥಳಕ್ಕೆ ಕೆ.ಎಂ.ಎಫ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ರೈತರಿಗೆ ನ್ಯಾಯ ಸಿಗಲಿದ್ಯಾ ಕಾದು ನೋಡಬೇಕಿದೆ.