Saturday, November 23, 2024

ಬಿಡಿಎ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ವಾ..?

ಬೆಂಗಳೂರು: ಬಿಡಿಎ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ವಾ..? ಬಿಡಿಎ ಅಧಿಕಾರಿಗಳ ಕರ್ಮಕಾಂಡ ಬಗೆದಷ್ಟು ಬಯಲಾಗ್ತಿದೆ .

ಬಿಡಿಎನಲ್ಲಿ ಕೋಟ್ಯಾಂತರ ರೂ ಮೌಲ್ಯದ ಕಡತಗಳು ಎಷ್ಟು ಸೇಫ್..? ಅಕ್ರಮಗಳನ್ನ ಮುಚ್ಚಿಹಾಕೋಕೆ ಅಧಿಕಾರಿಗಳು ಮಾಡ್ತಿದ್ದಾರೆ. ಬಿಡಿಎ ನಲ್ಲಿ ಕೋಟಿ ಕೋಟಿ ಮೌಲ್ಯದ ಡಾಕ್ಯುಮೆಂಟ್ ಗಳೇ ಕಣ್ಮರೆಯಾಗಿದೆ. ಬಿಡಿಎನಲ್ಲಿ ಜನಪ್ರತಿನಿಧಿಗಳ ಕಡತಕ್ಕಿಲ್ವಾ ಬೆಲೆ ..? ಕಡತಗಳನ್ನ ನಾಪತ್ತೆ ಮಾಡಿ ಅಕ್ರಮ ಗಳನ್ನ ಮುಚ್ಚಿಹಾಕುವ ಯತ್ನವನ್ನು ಮಾಡದ್ದಾರೆ.

ಬಿಡಿಎನಲ್ಲಿ G ಕೆಟಗರಿ ಸೈಟ್ ಗಳ ಕಡತಗಳೇ ಕಣ್ಮರೆಯಾಗಿದ್ದು, ಜಿ ಕೆಟಗಿರಿ ಅಕ್ರಮದ ತನಿಖೆ ಮಾಡ್ತಿರೋ ನ್ಯಾ ಡಿವಿ ಶೈಲೇಂದ್ರ ಕುಮಾರ್ ನೇತೃತ್ವದ ಸಮಿತಿ ಸಮಿತಿಗೆ ತನಿಖೆ ನಡೆಸಲು ನೀಡುತ್ತಿಲ್ಲ ಜಿ ಕೆಟಗಿರಿ ಸೈಟ್​ಗಳ ದಾಖಲೆಗಳು ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ 1985 ರಿಂದ 1620 ಸೈಟ್ ಹಂಚಿಕೆಯಾಗಿದೆ.

ಅದಲ್ಲದೇ, ಜಿ – ಕೆಟಗರಿ ನಿವೇಶನ ಹಂಚಿಕೆಯಲ್ಲಿ ಭಾರಿ ಗೋಲ್ಮಾಲ್ ಆರೋಪವಾಗಿದ್ದು, ಸೈಟ್ ಪಡೆದ ಶಾಸಕರೇ ಎರಡೆರಡು ಭಾರಿ ನಿವೇಶನ ಪಡೆದಿದ್ದಾರೆ. ಸಂಸದರು, ಶಾಸಕರು ,ಸಚಿವರ ಸಂಬಂಧಿಗಳು ಚಾಲಕರು ಹಾಗೂ ಪರಿಚಾರಕರೂ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ್ದಾರೆ. ಹೀಗಾಗಿ ಅಕ್ರಮ ಪತ್ತೆ ಹಂಚಲು ಶೈಲೇಂದ್ರ ಕುಮಾರ್ ಕಮಿಟಿ ನೇಮಕಗೊಂಡಿದೆ.

ಇನ್ನು, ಶೈಲೇಂದ್ರ ಕುಮಾರ್ ಕಮಿಟಿಗೆ ತನಿಖೆ ನಡೆಸಲು ಜಿ ಕೆಟಗರಿ ಸಂಬಂಧ ದಾಖಲೆಗಳು ಸಿಗ್ತಿಲ್ಲ. ಹಾಗಾದ್ರೆ ಜಿ ಗೆಟಗರಿ ಸೈಟ್ ಅಕ್ರಮ ತನಿಖೆ ಹಳ್ಳ ಹಿಡಿಯುತ್ತಾ .? ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ ನೇತೃತ್ವದ ಸಮಿತಿ ಅಕ್ರಮದ ಪರಿಶೀಲನೆ ಕಾರ್ಯ 313 ಅನರ್ಹರಿಗೆ ಇದ್ರಲ್ಲಿ 140 ಶಾಸಕರು, 4 ಸಂಸದರು, 12 ಗೃಹಿಣಿಯರು, ಸಚಿವರ ಸಂಬಂಧಿಗಳು, ಚಾಲಕರು ಅಕ್ರಮವಾಗಿ ನಿವೇಶನ ನೀಡಿರೋ ಆರೋಪ ಕೇಳಿಬರುತ್ತಿದೆ. ಆದರೆ ತನಿಖೆ ನಡೆಸಲು ನ್ಯಾ ಶೈಲೇಂದ್ರ ಕುಮಾರ್ ಕಮಿಟಿ ಗೆ ದಾಖಲೆಗಳೇ ನೀಡ್ತಿಲ್ಲ. ದಾಖಲೆಗಳು ನೀಡದೆ ಅಧಿಕಾರಿ ಗಳ ಮಹಾಕಳ್ಳಾಟದಿಂದ ತನಿಖೆ ಹಳ್ಳ ಹಿಡಿಯೋ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES