Friday, September 20, 2024

ಸಿಡಿಮದ್ದು ಸ್ಪೋಟಗೊಂಡು ಹಸುಗಳು ಸಾವು

ದಾವಣಗೆರೆ : ಸಿಡಿಮದ್ದು ಸ್ಪೋಟಗೊಂಡಿದ್ದರಿಂದ ಹಸುವಿನ ಬಾಯಿ ಛಿದ್ರಗೊಂಡು ಎರಡು ದಿನ ಮೂಕ ರೋಧನೆ ಅನುಭವಿಸಿದ್ದ ಮನಕಲಕುವ ಘಟನೆ ಹರಪನಹಳ್ಳಿ ತಾಲ್ಲೂಕಿನ ಕೊಂಗನಹೊಸೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಗ್ರಾಮದ ರೈತ ಬ್ಯಾಲಾಳ ವೀರಪ್ಪ, ಮಠದ ಶಂಕ್ರಯ್ಯ ಅವರಿಗೆ ಸೇರಿದ ಎರಡು ಹಸುಗಳು. ಅರಣ್ಯ ಪ್ರದೇಶದಲ್ಲಿ ಮೇವು ತಿನ್ನಲು ಹೋಗಿದ್ದವು. ಈ ವೇಳೆ ಸ್ಪೋಟಕ ವಸ್ತು ಕಚ್ಚಿ ಎರಡು ಹಸುಗಳು ಮೃತಪಟ್ಟಿದೆ.

ಕಾಡು ಪ್ರಾಣಿಗಳ ಬೇಟೆಗೆ ಕಿಡಿಗೇಡಿಗಳು ಮಾವಿನ ತೊಗಟೆಯಲ್ಲಿ ಸ್ಪೋಟಕ ಸಿಡಿಮದ್ದು ಇಡುತ್ತಿದ್ದು, ಮೇಯಲು ಹೋದ ಸಂದರ್ಭದಲ್ಲಿ ಮಾವಿನ ಗೋಟುಗಳನ್ನು ಹಸುಗಳು ಸೇವಿಸಿದೆ. ಇದೇ ವೇಳೆ ಹಸುವಿನ ಬಾಯಿಯಲ್ಲಿ ಸಿಡಿಮದ್ದು ಸ್ಪೋಟಗೊಂಡ ಕಾರಣ ರಾಸು ಮೇವು ತಿನ್ನಲಾಗದೇ ಮೂಕರೋಧನೆ ಅನುಭವಿಸಿ ಕೊನೆಯುಸಿರು ಎಳೆದಿದೆ.

ಮೂಕ ಪ್ರಾಣಿಯ ರೋಧನೆ ಕಂಡು, ಸಿಡಿಮದ್ದು ಇರಿಸಿದ್ದವರಿಗೆ ಪ್ರಾಣಿಪ್ರಿಯರು ಹಿಡಿಶಾಪ ಹಾಕುತ್ತಿದ್ದಾರೆ. ಕಾಡಂಚಿನ ಜಮೀನಿನಲ್ಲಿ ಮೇಯಲು ಹೋಗಿದ್ದರಿಂದ ಹಸುವಿನ ಬಾಯಿಗೆ ಸಿಡಿಮದ್ದು ಸಿಕ್ಕಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ನಿರಂತರ ಗಸ್ತಿನಲ್ಲಿದ್ದಿದ್ದರೇ ಇಂತಹ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ

ಸದ್ಯ ಘಟನೆ ಹಿನ್ನಲೆ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ಯಾರು ಓಡಾಡದಂತೆ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

RELATED ARTICLES

Related Articles

TRENDING ARTICLES