ಬೈರಾಗಿ ಸಿನಿಮಾ ಅಲ್ಲ. ಅದೊಂದು ಸಂಬಂಧಗಳ ಉತ್ಸವ. ಬಹುಕಲಾವಿದರ ಮಹಾಸಂಗಮದ ಮಹೋತ್ಸವ. ಯೆಸ್.. ಬೈರಾಗಿ ರಿಲೀಸ್ಗೆ ದಿನಗಣನೆ ಶುರುವಾಗಿದ್ದು, ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ತಮ್ಮ ಶ್ರೀಮುತ್ತು ನಿವಾಸದಲ್ಲಿ ಮುಕ್ತವಾಗಿ ಮಾತನಾಡಿದ್ರು.
‘ಶ್ರೀ ಮುತ್ತು’ ನಿವಾಸದಲ್ಲಿ ಬೈರಾಗಿ ಶಿವಪ್ಪನ ಮುಕ್ತ ಮಾತು
ಜುಲೈ 1ಕ್ಕೆ ಟೈಗರ್ ಶಿವಣ್ಣ ವರ್ಸಸ್ ನಟರಾಕ್ಷಸ ಡಾಲಿ ಕಿಚ್ಚು
ಅಪ್ಪು ಬಗ್ಗೆ ಭಾವುಕ ಮಾತು.. ಚಾಮರಾಜನಗರ ಇವೆಂಟ್
ರೋಡ್ ಶೋ ಮೂಲಕ ಬೆಂಗಳೂರು- ಚಾಮರಾಜನಗರ
ಭಜರಂಗಿ 2 ಸಿನಿಮಾ ರಿಲೀಸ್ ಆದ ದಿನವೇ ರಾಜರತ್ನ ಅಪ್ಪು ನಿಧನದ ವಾರ್ತೆ ಎಲ್ಲರನ್ನ ಇನ್ನಿಲ್ಲದೆ ಭಾದಿಸಿತು. ಪುನೀತ್ ಇನ್ನಿಲ್ಲ ಅನ್ನೋ ನೋವಲ್ಲಿ ಆ ಸಿನಿಮಾದ ಪ್ರಮೋಷನಲ್ ಌಕ್ಟಿವಿಟೀಸ್ ಕೂಡ ನಿಂತೋಯ್ತು. ಕನ್ನಡ ಕಲಾಭಿಮಾನಿಗಳು ಸಿನಿಮಾ ನೋಡಲು ಥಿಯೇಟರ್ಗೆ ಹೋಗೋದನ್ನ ನಿಲ್ಲಿಸಿದ್ರು. ಆದ್ರೆ ಅಪ್ಪು ನಿಧನದ ನಂತ್ರ ಇದೇ ಜುಲೈ 1ಕ್ಕೆ ರಿಲೀಸ್ ಆಗ್ತಿದೆ ಶಿವಣ್ಣನ ಮೊದಲ ಸಿನಿಮಾ ಬೈರಾಗಿ.
ವಿಜಯ್ ಮಿಲ್ಟನ್ ನಿರ್ದೇಶನ ಹಾಗೂ ಕೃಷ್ಣ ಸಾರ್ಥಕ್ ನಿರ್ಮಾಣದ ಬೈರಾಗಿ ಸಮಾಜಕ್ಕೆ ಬಹಳ ದೊಡ್ಡ ಮಟ್ಟಕ್ಕೆ ಕನೆಕ್ಟ್ ಆಗಲಿದೆಯಂತೆ. ಕಾರಣ ಇಲ್ಲಿ ಸಂಬಂಧಗಳ ಮೌಲ್ಯವನ್ನು ಎತ್ತಿ ಹಿಡಿಯೋ ಅಂತಹ ಕಥೆ ಇದೆಯಂತೆ. ಶಿವಣ್ಣ ಹಾಗೂ ಡಾಲಿಯ ಜುಗಲ್ಬಂದಿ ಟಗರು ನಂತ್ರ ಮತ್ತೊಮ್ಮೆ ದೊಡ್ಡ ಪರದೆಯನ್ನು ಆವರಿಸಿಕೊಳ್ಳಲಿದೆ. ಅಲ್ಲದೆ ಸುಪ್ರೀಂ ಹೀರೋ ಶಶಿಕುಮಾರ್, ಪೃಥ್ವಿ ಅಂಬರ್ ಸೇರಿದಂತೆ ದೊಡ್ಡ ತಾರಾಗಣವಿದೆ.
ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳಲು ನಾಗವಾರದ ತಮ್ಮ ಶ್ರೀಮುತ್ತು ನಿವಾಸಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿದ್ದ ಶಿವಣ್ಣ, ಅವ್ರಿಗೆ ಉಪಾಹಾರವನ್ನು ತನ್ನ ಕೈಯಿಂದಲೇ ಬಡಿಸಿ ಖುಷಿ ಪಟ್ಟರು. ಅಲ್ಲದೆ, ಚಿತ್ರದ ಬಗ್ಗೆ ಅಚ್ಚರಿಯ ವಿಷಯಗಳನ್ನು ಹಂಚಿಕೊಂಡ್ರು. ಇದೇ ಜೂನ್ 26ಕ್ಕೆ ಚಾಮರಾಜನಗರದಲ್ಲಿ ಬೈರಾಗಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದ್ದು, ಮಂಡ್ಯ, ಮೈಸೂರಿನಲ್ಲೂ ರಂಗೇರಲಿದೆ ಬೈರಾಗಿ ಬ್ಯಾಂಡ್ಸೆಟ್.
ಒಟ್ಟಾರೆ ಬೈರಾಗಿ ಶಿವಣ್ಣ ಕರಿಯರ್ನ ಡಿಫರೆಂಟ್ ಸಿನಿಮಾ ಆಗಿದ್ದು, ಕಾಸ್ಟ್ಯೂಮ್ ಹಾಗೂ ಮೇಕಿಂಗ್ನಂತೆ ಎಲ್ಲಾ ವಿಭಾಗಗಳಲ್ಲೂ ದಿ ಬೆಸ್ಟ್ ಅನಿಸಿಕೊಂಡಿದೆ. ಇನ್ನೂ ಸಿನಿರಸಿಕರಿಗೆ ಎಷ್ಟರ ಮಟ್ಟಿಗೆ ರುಚಿಸಲಿದೆ ಅನ್ನೋದನ್ನ ಜುಲೈ 1ರ ವರೆಗೂ ಕಾದುನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ