Saturday, November 2, 2024

ರಾಮ ಬೇಕು ಆದ್ರೆ ರಾಮಾಯಣ ಬರೆದ ವಾಲ್ಮೀಕಿ ಬೇಡ : ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಾಂಗ್ರೆಸ್ ಕಛೇರಿಗೆ ಚಡ್ಡಿ ಕಳುಹಿಸುವ ಬಿಜೆಪಿ ಅಭಿಯಾನಕ್ಕೆ ಕೈ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಡ್ಡಿ ಕಲೆಕ್ಟ್ ಮಾಡುವ ಕೆಲಸ ಬಿಜೆಪಿ ತನ್ನ ಎಸ್ಸಿ ಎಸ್ಟಿ ಮೋರ್ಚಾಗೆ ವಹಿಸಿದೆ. ಯಾಕೆ ? ಸಿಎಂ ಬೊಮ್ಮಾಯಿ ಅವರೇ ಚಡ್ಡಿ ಕಲೆಕ್ಟ್ ಮಾಡುವ ಅಭಿಯಾನಕ್ಕೆ ಚಾಲನೆ ನೀಡಬಹುದಿತ್ತಲ್ವಾ ? ನಳೀನ್ ಕುಮಾರ್ ಕಟೀಲ್, ಮುರುಗೇಶ ನಿರಾಣಿ, ಸೋಮಣ್ಣ, ಅಶೋಕ ಇತರ ನಾಯಕರು ಈ ಕೆಲಸ ಮಾಡಬಹುದಿತ್ತಲ್ವಾ ? ಎಸ್ಸಿ ಎಸ್ಟಿ ಮೋರ್ಚಾಗೆ ಯಾಕೆ ಚಡ್ಡಿ ಸಂಗ್ರಹ ಕೆಲಸ ಕೊಟ್ರಿ ? ಅಲ್ಲದೇ ಇದು ಬಿಜೆಪಿಯ ಮನು ಸೃತಿ ಸಿದ್ದಾಂತದ ಪ್ರತೀಕವಾಗಿದೆ ಎಂದು ಬಿಜೆಪಿ ನಾಯಕರುಗಳ ವಿರುದ್ಧ ಕಿಡಿಕಾರಿದ್ದಾರೆ.

ಇದೇ ವೇಳೆ ಪಠ್ಯಪುಸ್ತಕ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಂದೂ ಧರ್ಮದ ತಮ್ಮ ಆಲೋಚನೆಗಳನ್ನ ಪಠ್ಯಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಇವರಿಗೆ ರಾಮ ಬೇಕು ಆದರೆ ರಾಮಾಯಣ ಬರೆದ ವಾಲ್ಮೀಕಿ ಬೇಡ. ಆರ್‌ಎಸ್‌ಎಸ್ ಸಂಸ್ಥೆಯವರು ರಾಮಲೀಲ ಮೈದಾನದಲ್ಲಿ ಸಂವಿಧಾನ ಇರಬಾರದು. ಸಂವಿಧಾನವನ್ನ ಸುಟ್ಟು ಮನುಸ್ಮೃತಿನೇ ನಮ್ಮ ಸಂವಿಧಾನ ಅಂತಾ ಆರ್‌ಎಸ್‌ಎಸ್ ಪ್ರತಿಪಾದನೆ ಮಾಡುತ್ತಿದೆ ಎಂದು ಗುಡುಗಿದರು.

ಇನ್ನು ಮಕ್ಕಳ ಪುಸ್ತಕದಲ್ಲಿ ಸಮಾಜವು ಹೇಗೆ ಸಾಗಬೇಕು ಅಂತಾ ಬರೆಯಲಾಗಿದೆ. ಆದರೆ, ನಾವು ಮನುಸ್ಮೃತಿ ಒಪ್ಪಲ್ಲ. ಶಂಕರಚಾರ್ಯ, ವಾಲ್ಮೀಕಿ, ಬಸವಣ್ಣ, ಕುವೆಂಪು ಸೇರಿದಂತೆ ಎಲ್ಲರನ್ನ ಅವಮಾನ ಮಾಡಿದ್ದಾರೆ. ಸಮಿತಿ ಅಧ್ಯಕ್ಷರು ವಜಾ ಆಗಿದ್ದಾರೆ, ಇದಕ್ಕೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಉತ್ತರ ಕೊಡಬೇಕು ? ಸಿದ್ದಗಂಗಾ ಹಾಗೂ ಆದಿಚುಂಚನಗಿರಿ ಶ್ರೀಗಳನ್ನ ಸಹ ಅಪಮಾನ ಮಾಡಲಾಗಿದೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES