ಆಂಧ್ರಪ್ರದೇಶ : ತಿರುಪತಿ ವೆಂಕಟೇಶ್ವರನಿಗೆ ಭಕ್ತರು ಹಣ, ಚಿನ್ನ, ವಜ್ರ ವೈಡೂರ್ಯಗಳನ್ನು ದೇಣಿಗೆ ರೂಪದಲ್ಲಿ ನೀಡುವುದು ಸಾಮಾನ್ಯ. ಭಕ್ತರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೇ ಕಾಣಿಕೆಗಳನ್ನು ನೀಡುತ್ತಾರೆ. ಹೀಗೆ ತಮಿಳುನಾಡಿನ ಕುಟುಂಬ ಹಾಗೂ ಕಂಪನಿಗಳು ಒಟ್ಟು 10 ಕೋಟಿ ರೂಪಾಯಿ ದೇಣಿಗೆ ನೀಡಿ ದಾಖಲೆ ಬರೆದಿದೆ.
ವಿಶೇಷ ಅಂದರೆ 10 ಕೋಟಿ ರೂಪಾಯಿ ದೇಣಿಗೆ ಸಂಪೂರ್ಣ ನಗದು ಹಣವಾಗಿದೆ..10 ಕೋಟಿ ರೂ. ದೇಣಿಗೆಯಿಂದ ಒಂದು ದಿನದ ದೇಣಿಗೆ ಸಂಗ್ರಹದಲ್ಲಿ ತಿರುಪತಿಯಲ್ಲಿ ದಾಖಲೆ ನಿರ್ಮಾಣವಾಗಿದೆ. ಇದು ಒಂದು ದಿನದಲ್ಲಿ ಸಂಗ್ರಹವಾದ ಗರಿಷ್ಠ ದೇಣಿಗೆಯಾಗಿದೆ ಎಂದು ತಿರುಮಲ ಟ್ರಸ್ಟ್ ಹೇಳಿದೆ.
10 ಕೋಟಿ ರೂ. ದೇಣಿಗೆ ನೀಡಿದ ದಿನದ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆಯನ್ನು ಇನ್ನೂ ಲೆಕ್ಕ ಹಾಕಿಲ್ಲ. ಇವೆಲ್ಲ ಒಟ್ಟುಗೂಡಿಸಿದರೆ ಮತ್ತೊಂದು ದಾಖಲೆ ನಿರ್ಮಾಣವಾಗೋದರಲ್ಲಿ ಯಾವುದೇ ಅನುಮಾನವಿಲ್ಲ. ತಮಿಳುನಾಡಿನ ಉದ್ಯಮಿ ಕುಟುಂಬ 10 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಟ್ರಸ್ಟ್ ಹೇಳಿದೆ.