Thursday, December 19, 2024

ಸಮುದ್ರಯಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಕಾರವಾರ: ಭಾರತೀಯ ನೌಕಾಪಡೆಗೆ ಅಗತ್ಯವಿರುವ 41 ಯುದ್ಧನೌಕೆ ಹಾಗೂ ಸಬ್‌ಮೆರೀನ್ ಪೈಕಿ 39 ಮೇಕ್ ಇನ್ ಇಂಡಿಯಾ ಅಡಿಯಲ್ಲಿ ದೇಶದಲ್ಲೇ ನಿರ್ಮಾಣವಾಗಲಿವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಬ್ ಮೇರಿಯನ್ ಮೂಲಕ ಯುದ್ದಭ್ಯಾಸ ವೀಕ್ಷಣೆ ಭಾರತ ನೌಕಾದಳದ ಮೇಲೆ ತನಗೆ ಹೆಮ್ಮೆ ಬಂದಿದೆ. ಭಾರತೀಯ ನೌಕಾದಳ ಮೊದಲಿಗಿಂತ ಈಗ ಬಲಶಾಲಿಯಾಗಿದೆ. ಬೇರೆ ದೇಶದ ಮೇಲೆ ಯುದ್ದ ಮಾಡುವುದಕ್ಕಿಂತ ದೇಶವಾಸಿಗಳಲ್ಲಿ ನಂಬಿಕೆ ಉಳಿಸಲು ಭಾರತೀಯ ನೌಕಾದಳ‌‌ ಸಿದ್ದವಾಗಿದೆ. ಪ್ರಾಜೆಕ್ಟ್ ಸೀಬರ್ಡ್ ಕಾಮಗಾರಿಯ ಪ್ರಗತಿ ಪರಿಶೀಲನೆ ಬಳಿಕ ತುಂಬಾ ಸಂತಸವಾಗಿದೆ ಎಂದರು.

ಅದಲ್ಲದೇ, ಸ್ವದೇಶಿ ನಿರ್ಮಿತ ಐಎನ್ಎಸ್ ಖಂಡೇರಿ ಸಬ್‌ಮೇರಿನ್‌ನಲ್ಲಿ ಸಮುದ್ರಯಾನ ಮಾಡಿದ್ದೇನೆ. ನೌಕಾಪಡೆಯ ಸಮುದ್ರದಾಳದ ಪ್ರಾಬಲ್ಯವನ್ನು ಹತ್ತಿರದಿಂದ ವೀಕ್ಷಿಸಿದ ಬಳಿಕ ಸಾಕಷ್ಟು ನಂಬಿಕೆ ಬಂದಿದೆ. ಎರಡು ದಿನಗಳ ನೌಕಾನೆಲೆ ಭೇಟಿಯ ಬಳಿಕ ಮಾದ್ಯಮಗಳಿಗೆ ಹೇಳಿಕೆ ನೀಡಿದ ಅವರು, ಭಾರತೀಯ ನೌಕಾಪಡೆ ಯಾವುದೇ ರೀತಿಯ ಪರಿಸ್ಥಿತಿಯಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಹೊಂದಿದೆ. ಭಾರತೀಯ ನೌಕಾಪಡೆಗೆ ಅಗತ್ಯವಿರುವ 41 ಯುದ್ಧನೌಕೆ ಹಾಗೂ ಸಬ್‌ಮೆರೀನ್ ಪೈಕಿ 39 ಮೇಕ್ ಇನ್ ಇಂಡಿಯಾ ಅಡಿಯಲ್ಲಿ ದೇಶದಲ್ಲೇ ನಿರ್ಮಾಣವಾಗಲಿವೆ ಎಂದು ಹೇಳಿದರು.

ಇನ್ನು, ಆಜಾದಿ ಕಾ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಐಎನ್ಎಸ್ ವಿಕ್ರಮಾದಿತ್ಯ, ಐಎನ್ಎಸ್ ವಿಕ್ರಾಂತ್ ಈ ಎರಡೂ ಯುದ್ಧನೌಕೆಗಳು ದೇಶದ ಕರಾವಳಿ ಭದ್ರತೆಗೆ ಹೊಸ ಶಕ್ತಿ ತುಂಬುವ ವಿಶ್ವಾಸವಿದೆ. ಭಾರತೀಯ ನೌಕಾಪಡೆ ಪ್ರಪಂಚದ ಪ್ರಮುಖ ನೌಕಾಪಡೆಗಳಲ್ಲಿ ಗುರುತಿಸಿಕೊಳ್ಳುತ್ತಿದೆ. ಪ್ರಪಂಚದ ದೊಡ್ಡ ದೊಡ್ಡ ದೇಶಗಳು ಭಾರತೀಯ ನೌಕಾಪಡೆಯೊಂದಿಗೆ ಸಹಯೋಗ ನೀಡಲು ಸಿದ್ಧವಾಗಿವೆ. ಭಾರತೀಯ ನೌಕಾಪಡೆ ಯಾವುದೇ ದೇಶವನ್ನ ಗುರಿಯಾಗಿಟ್ಟುಕೊಂಡು ಸಿದ್ಧತೆಗಳನ್ನ ಮಾಡುತ್ತಿಲ್ಲ. ಕರಾವಳಿ ತೀರದ ಎಲ್ಲ ನಿವಾಸಿಗಳ ಭದ್ರತೆ ಹಾಗೂ ಶಾಂತಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿಯ ತಯಾರಿಯಾಗಿದೆ. ಎಂದು ಕಾರವಾರದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ಸಿಂಗ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES