ಎಲ್ಲಿ ಕಳೆದುಕೊಳ್ತೀವೋ ಅಲ್ಲೇ ಸಕ್ಸಸ್ನ ಹುಡುಕಿಕೊಳ್ಳೋದರಲ್ಲಿ ಸಿಗೋ ಮಜಾನೇ ಬೇರೆ. ಶ್ರೀಲೀಲಾ ಚೊಚ್ಚಲ ಸಿನಿಮಾ ಫ್ಲಾಪ್ ಆದ್ರೂ, ಟಾಲಿವುಡ್ನಲ್ಲಿ ತಮ್ಮ ಪ್ರಯತ್ನಗಳು ಮಾತ್ರ ನಿರಂತರವಾಗಿವೆ. ಮಾಸ್ ಮಹಾರಾಜ ರವಿತೇಜಾ ಜೊತೆ ಧಮಾಕ ಮಾಡ್ತಿರೋ ಈ ಕ್ಯೂಟ್ ಕ್ವೀನ್, ಬಾಲಯ್ಯನೊಟ್ಟಿಗೆ ಬಿಗ್ ನ್ಯೂಸ್ ಕೊಟ್ಟಿದ್ದಾರೆ.
ಹೈಲೆಟ್ಸ್ ಪಾಯಿಂಟ್ಸ್:
ಟಾಲಿವುಡ್ನಲ್ಲಿ ಕ್ಯೂಟ್ ಕ್ವೀನ್ ಶ್ರೀಲೀಲಾ ಹಂಗಾಮ..!
ಪೆಳ್ಳಿಸಂದಡಿ ಫ್ಲಾಪ್ ಆದ್ರೂ ಡಬಲ್ ಆಯ್ತು ಡಿಮ್ಯಾಂಡ್
ಬಾಲಯ್ಯನ ಮಗಳಾಗಿ ಕಿಸ್ ಪೋರಿ ಶ್ರೀಲೀಲಾ ಮಿಂಚು
F3 ಡೈರೆಕ್ಟರ್ ರವಿಪುಡಿ ಸಾರಥ್ಯದಲ್ಲಿ ತಂದೆ- ಮಗಳ ಕಥೆ
ಸ್ಯಾಂಡಲ್ವುಡ್ನ ಕ್ಯೂಟ್ ಕ್ವೀನ್ ಶ್ರೀಲೀಲಾ ಸೌತ್ ಕ್ವೀನ್ ಆಗಿ ಮಿಂಚ್ತಿದ್ದಾರೆ. ಹೌದು.. ಕಿಸ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಲಾಂಚ್ ಆದ ಈ ಚೆಲುವೆ, ಅಮೆರಿಕಾದಲ್ಲಿ ಜನಿಸಿ, ಬೆಂಗಳೂರಿನಲ್ಲಿ ಬೆಳೆದ ತೆಲುಗು ಕುಟುಂಬದವರು. ಇನ್ನೂ ಇಪ್ಪತ್ತು ವರ್ಷದ ಈಕೆ, ಕ್ಯೂಟ್ಗೆ ಕೇರ್ ಆಫ್ ಅಡ್ರೆಸ್ ಆಗಿ ಎಲ್ಲೆಡೆ ತನ್ನದೇ ಆದ ಚೆಡಗು ಬಿನ್ನಾಣ ತೋರಿಸ್ತಿದ್ದಾರೆ.
ಕಿಸ್, ಭರಾಟೆ, ಬೈಟು ಲವ್ ಹಾಗೂ ಜೇಮ್ಸ್ ಸಿನಿಮಾಗಳಲ್ಲಿ ನಟಿಸೋ ಮೂಲಕ ಕರುನಾಡಿಗೆ ಚಿರಪರಿಚಿತರಾದ ಈ ಗಿಣಿಮರಿ, ಪಕ್ಕದ ಟಾಲಿವುಡ್ಗೂ ಕಾಲಿಟ್ಟರು. ಮೇಕ ಶ್ರೀಕಾಂತ್ರ ಪುತ್ರ ರೋಷನ್ ಜೊತೆಗಿನ ಪೆಳ್ಳಿ ಸಂದಡಿ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ರು.
ಅಂದ, ಚೆಂದದ ಜೊತೆ ನಟನೆಯಲ್ಲೂ ಪಾರಂಗತೆ ಈ ಪೋರಿ. ಹೀಗಿದ್ದರೂ ಪೆಳ್ಳಿ ಸಂದಡಿ ಮೂವಿ ಪ್ರೇಕ್ಷಕರಿಗೆ ರುಚಿಸದೇ ಹೋಯ್ತು. ಆದ್ರೆ ಕಳೆದುಕೊಂಡಲ್ಲೇ ಸಕ್ಸಸ್ನ ಹುಡುಕಿಕೊಳ್ಳಬೇಕು ಅನ್ನೋ ತತ್ವವನ್ನು ನಂಬಿರೋ ಈ ಚೆಂದುಳ್ಳಿ ಚೆಲುವೆ, ಚೊಚ್ಚಲ ತೆಲುಗು ಸಿನಿಮಾ ಸೋತರೂ, ಮತ್ತೆ ಅಲ್ಲೇ ಬ್ಯುಸಿ ಆಗಿದ್ದಾರೆ. ಸದ್ಯ ಮಾಸ್ ಮಹಾರಾಜ ರವಿತೇಜಾ ಜೊತೆ ಧಮಾಕ ಚಿತ್ರದಲ್ಲಿ ನಟಿಸ್ತಿದ್ದಾರೆ.
ತೆಲುಗಿನ ಮತ್ತೊಂದು ಮೆಗಾ ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ನೀಡಿದ್ದು, ಲಿವಿಂಗ್ ಲೆಜೆಂಡ್ ನಂದಮೂರಿ ಬಾಲಕೃಷ್ಣ ಜೊತೆ ಬಣ್ಣ ಹಚ್ಚೋದು ಪಕ್ಕಾ ಆಗಿದೆ. ಅರೇ ಬಾಲಯ್ಯ ಜೊತೆ ಶ್ರೀಲೀಲಾನಾ ಅಂತ ಹುಬ್ಬೇರಿಸ್ಬೇಡಿ. ಯಾಕಂದ್ರೆ ನಟಸಿಂಹನ ಜೊತೆ ನಮ್ಮ ಕ್ಯೂಟ್ ಕ್ವೀನ್ ಹೀರೋಯಿನ್ ಆಗಿ ನಟಿಸ್ತಿಲ್ಲ. ನೀವೆಲ್ರೂ ತಂದೆ- ಮಗಳ ತರಹ ಇರ್ತಾರೆ ಅಂದುಕೊಂಡಂತೆ, ಸಿನಿಮಾದಲ್ಲಿ ಇವ್ರ ಕಾಂಬೋ ತಂದೆ- ಮಗಳು.
ಎಫ್3 ಸಿನಿಮಾದ ಡೈರೆಕ್ಟರ್ ಅನಿಲ್ ರವಿಪುಡಿ ನಿರ್ದೇಶನದಲ್ಲಿ ಬಾಲಯ್ಯನ 108ನೇ ಚಿತ್ರ ಸೆಟ್ಟೇರಲಿದ್ದು, ಇಲ್ಲಿ ಬಾಲಯ್ಯ 50 ವರ್ಷದ ತಂದೆಯ ಪಾತ್ರದಲ್ಲಿ ಕಾಣಸಿಗಲಿದ್ದಾರಂತೆ. ಇದು ತಂದೆ- ಮಗಳ ಬಾಂಧವ್ಯಕ್ಕೆ ಹೊಸ ಆಯಾಮ ಕೊಡಲಿದ್ದು, ಇಲ್ಲಿಯವರೆಗೆ ಯಾರೂ ಟ್ರೈ ಮಾಡದೇ ಇರೋ ಅಂತಹ ಕಥೆಯನ್ನ ಟಚ್ ಮಾಡಲಿದ್ದಾರಂತೆ. ವಿಶೇಷ ಅಂದ್ರೆ ಬಾಲಯ್ಯಗೆ ಸರಿಹೊಂದುವಂಹ ವಯಸ್ಸಾದ ನಟೀಮಣಿಯ ಹುಡುಕಾಟದಲ್ಲಿದೆ ಚಿತ್ರತಂಡ.
ಸದ್ಯ ಬಾಲಯ್ಯ ತಮ್ಮ 107ನೇ ಚಿತ್ರವನ್ನ ಗೋಪಿಚಂದ್ ಮಾಲಿನೇನಿ ಡೈರೆಕ್ಷನ್ನಲ್ಲಿ ಮಾಡ್ತಿದ್ದು, ನಮ್ಮ ಸ್ಯಾಂಡಲ್ವುಡ್ ಸಲಗ ಅದ್ರಲ್ಲಿ ಖಡಕ್ ಖಳನಾಯಕನಾಗಿ ಕಮಾಲ್ ಮಾಡ್ತಿದ್ದಾರೆ. ಇನ್ನು ಬಾಲಯ್ಯ- ಶ್ರೀಲೀಲಾ ಕಾಂಬೋ ನಮ್ಮ ಕನ್ನಡದಲ್ಲಿ ಅಪ್ಪ ಐ ಲವ್ ಯೂ ಸಾಂಗ್ನ ಮಾನ್ವಿತಾ ಹಾಗೂ ಕಾಶಿನಾಥ್ ಜೋಡಿಯನ್ನ ನೆನಪಿಸಿದ್ರೂ ಅಚ್ಚರಿಯಿಲ್ಲ.
ಒಟ್ಟಾರೆ ಶ್ರೀಲೀಲಾ ಅನ್ನೋ ಈ ಮುದ್ದು ಬಂಗಾರಿ, ರಾಕಿಭಾಯ್ ಯಶ್ ಹೇಳಿದಂತೆ ಇಂಡಿಯಾ ಒಂದು ರೌಂಡ್ ಬರಲಿದ್ದಾರೆ. ಸದ್ಯ ಈಕೆಯಲ್ಲಿ ಅಂತಹ ಚಾರ್ಮ್ ಎದ್ದು ಕಾಣ್ತಿದ್ದು, ಬಹುಬೇಗ ಬಿಗ್ ಸ್ಟಾರ್ಸ್ ಜೊತೆ ಚಾನ್ಸ್ ಗಿಟ್ಟಿಸಿಕೊಳ್ತಿದ್ದಾರೆ. ಅದು ಆಕೆಯ ಅಂದ & ಅದೃಷ್ಟವೂ ಹೌದು. ಜೊತೆಗೆ ಸಾಮರ್ಥ್ಯವೂ ಹೌದು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ