ಬೆಂಗಳೂರು : ಸಿಲಿಕಾನ್ ಸಿಟಿ ನಗರದ 37ನೇ ಪೊಲೀಸ್ ಕಮೀಷನರ್ ಆಗಿ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕಾರ ಮಾಡಿದ್ರು. ನಿರ್ಗಮಿತ ಪೊಲೀಸ್ ಕಮೀಷನರ್ ಕಮಲ್ ಪಂಥ್ , ಪ್ರತಾಪ್ ರೆಡ್ಡಿಯವರನ್ನು ಬ್ಯಾಟಲ್ ಕೊಡುವುದರ ಮೂಲಕ ಅಧಿಕಾರ ಹಸ್ತಾಂತರಿಸಿದರು. ಕಾನೂನು ಸುವ್ಯವಸ್ಥೆ ಇಲಾಖೆಯಲ್ಲಿ ಎಡಿಜಿಪಿ ಆಗಿದ್ದ ಪ್ರತಾಪ್ ರೆಡ್ಡಿಗೆ ಪೊಲೀಸ್ ಇಲಾಖೆಯಲ್ಲಿ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿದ್ದ ಕೀರ್ತಿ ಇದೆ. ಮೂಲತಹ ಆಂಧ್ರದ ಗುಂಟೂರಿನವರಾಗಿರೋ ಪ್ರತಾಪ್ ರೆಡ್ಡಿ ರೌಡಿಗಳು ಹಾಗೂ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡ್ದೆ ಹೋದ್ರೆ ಕಠಿಣ ಕ್ರಮ ಆಗುತ್ತೆ ಎಂದು ಎಚ್ಚರಿಕೆ ಕೊಡುವ ಮೂಲಕ ಮೊದಲ ಬಾಲಲ್ಲೆ ಸಿಕ್ಸರ್ ಹೊಡೆದಿದ್ದಾರೆ.
ಲಾಕ್‌ಡೌನ್, ಕೊರೋನಾ ಹಿನ್ನೆಲೆ ನಗರದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಹಾಗು ಟೋಯಿಂಗ್ ಮಾಡೋದನ್ನ ಪೊಲೀಸರು ನಿಲ್ಲಿಸಿದ್ರು. ಆದರೆ, ಇನ್ನು ಮುಂದೆ ಹಾಗೆ ಇಲ್ಲ. ಹೊಸದಾಗಿ ಬಂದಿರೋ ಕಮೀಷನರ್ ಪ್ರತಾಪ್ ರೆಡ್ಡಿ, ಟೋಯಿಂಗ್ ಮಾಡಲು ಟ್ರಾಫಿಕ್ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ. ಜೊತೆಗೆ ನಗರದಲ್ಲಿ ಏನೇ ಅಕ್ರಮ ಚಟುವಟಿಕೆಗಳು ನಡೆದ್ರೂ ಆಯಾ ಠಾಣೆಯ ಇನ್ಸ್ ಪೆಕ್ಟರ್ ಗಳೇ ಕಾರಣ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಒಟ್ಟಾರೆ ನಗರ ಪೊಲೀಸ್ ಆಯುಕ್ತರ ಎಂಟ್ರಿ ಅಂತೂ ಚೆನ್ನಾಗಿಯೇ ಇದೆ. ಮುಂದಿನ ದಿನಗಳಲ್ಲಿ ಇವರು ಹೇಳಿರುವ ಮಾತುಗಳು ಎಷ್ಟರ ಮಟ್ಟಿಗೆ ಇಂಪ್ಲಿಮೆಂಟ್ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ.