ಮೈಸೂರು: 10ನೇ ಚಾಮರಾಜೇಂದ್ರ ಒಡೆಯರ್ ಮೈಸೂರಿನಲ್ಲಿ ಕಟ್ಟಿಸಿದ ಮಾರುಟ್ಟೆಗೆ ಸುಮಾರು 130 ವರ್ಷಗಳಷ್ಟು ಇತಿಹಾಸ ಇದೆ. ಮಾರುಕಟ್ಟೆ ಶಿಥಿಲವಾದ ಹಿನ್ನೆಲೆ ಹೊಸದಾಗಿ ನಿರ್ಮಿಸಲು ಮುಂದಾಗಿರುವ ಸರ್ಕಾರ, ದೇವರಾಜ ಮಾರುಕಟ್ಟೆ ಪುನರ್ನಿರ್ಮಾಣಕ್ಕೆ ಸುಮಾರು 140 ಕೋಟಿ ಹಣ ಮೀಸಲಿಟ್ಟಿದೆ. ಕಳೆದ ವರ್ಷದ ಮಳೆಗಾಲದಲ್ಲಿ ದೇವರಾಜ ಮಾರುಕಟ್ಟೆಯ ಹಲವು ಮಳಿಗೆಗಳು ನೆಲಸಮ ಆಗಿವೆ. ತಜ್ಞರ ಸಮಿತಿ ದೇವರಾಜ ಮಾರುಕಟ್ಟೆ ನೆಲಮ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹೀಗಾಗಿ ನೂತನ ಮಾರುಕಟ್ಟೆ ನಿರ್ಮಿಸಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಮೈಸೂರು ರಾಜಮನೆತನ ವಿರೋಧ ವ್ಯಕ್ತಪಡಿಸಿದೆ. ಈ ಮಾರುಕಟ್ಟೆ ಮುಂದಿನ ತಲೆಮಾರಿಗೆ ಪರಂಪರೆ, ನಮ್ಮ ಸಂಸ್ಕೃತಿಯ ಪ್ರತೀಕ. ನೆಲಸಮ ಬೇಡ,ಮತ್ತೆ ನವೀಕರಣ ಮಾಡಿದ್ರೆ ಒಳ್ಳೆಯದು ಅಂತಾ ತಿಳಿಸಿದೆ. ಈ ಕಾರಣಕ್ಕಾಗಿ ಶಾಸಕರು, ತಜ್ಞರು,ಪಾಲಿಕೆ ಅಧಿಕಾರಿಗಳ ನಿಯೋಗ ಪ್ರಮೋದಾ ದೇವಿ ಒಡೆಯರ್ ಭೇಟಿ ಮಾಡಿ ಸದ್ಯದ ಪರಿಸ್ಥಿತಿಯನ್ನ ಮನವರಿಕೆ ಮಾಡಿಕೊಟ್ಟಿದೆ.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಭೇಟಿಯಾದ ಶಾಸಕ ಎಲ್.ನಾಗೇಂದ್ರ, ಟಾಸ್ಕ್ ಫೋರ್ಸ್ ಸಮಿತಿ, ಪಾರಂಪರಿಕ ತಜ್ಞರ ಸಮಿತಿ, ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ನಿರ್ಣಯಗಳು, ಆಗಬಹುದಾದ ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ. ಮುಂದಿನ 10-15 ದಿನಗಳಲ್ಲಿ ನಿರ್ಧಾರ ತಿಳಸಲಾಗುತ್ತದೆ ಅಂತಾ ಪ್ರಮೋದಾ ದೇವಿ ಒಡೆಯರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಪರಂಪರೆಯ ಪ್ರತೀಕವಾಗಿರುವ ದೇವರಾಜ ಮಾರುಕಟ್ಟೆ ಉಳಿಯಬೇಕು ಅನ್ನೋದು ರಾಜವಂಶಸ್ಥರ ವಾದ. ಆದ್ರೆ, ಸರ್ಕಾರ ಹಾಗೂ ತಜ್ಞರ ಸಮಿತಿ ಮಾತ್ರ ಕಟ್ಟಡ ನೆಲಸಮವೇ ಸೂಕ್ತ ಎನ್ನುತ್ತಿದೆ. ಹೀಗಿರುವಾಗ ಮಾರುಕಟ್ಟೆ ಕಟ್ಟಡ ಉಳಿಯುತ್ತ , ಉರುಳುತ್ತ ಅನ್ನೋದೆ ಸದ್ಯದ ಪ್ರಶ್ನೆ.