ಬೆಂಗಳೂರು: ಸಿಲಿಕಾನ್ ಸಿಟಿ ಜಲಮಂಡಳಿ. ಇದು ಇಡೀ ಬೆಂಗಳೂರು ಜನರಿಗೆ ನೀರನ್ನು ಪೂರೈಸುವ ಜವಾಬ್ದಾರಿ ಹೊತ್ತುಕೊಂಡಿದೆ.ಆದ್ರೆ, ನಗರ ಮಂದಿಗೆ ಸಮರ್ಪಕವಾಗಿ ನೀರನ್ನ ಪೂರೈಕೆ ಮಾಡುವಲ್ಲಿ ವಿಫಲವಾಗಿರುವ ಅಧಿಕಾರಿಗಳ ದರ್ಬಾರ್ಗೆ ಬ್ರೇಕ್ ಹಾಕುವರೇ ಇಲ್ಲವಾಗಿದೆ. ಸಿಬ್ಬಂದಿ ಕೊರತೆ ಹೆಸರಿನಲ್ಲಿ ಸಿಕ್ಕಸಿಕ್ಕಿದವರಿಗೆ ಆಯಕಟ್ಟಿನ ಜಾಗ ನೀಡಿ ಕೋಟಿ ಕೋಟಿ ಲೂಟಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಇದೀಗ ಇಷ್ಟೂ ಸಾಲದು ಅಂತ ಹೆಚ್ಚುವರಿ ಎಂಜಿನಿಯರ್ ಹುದ್ದೆಗಳನ್ನ ಸೃಷ್ಟಿ ಮಾಡೋ ಮೂಲಕ ಮಂಡಳಿ ಬೊಕ್ಕಸಕ್ಕೆ ಕೋಟಿ ಕೋಟಿ ಹೊರೆ ಹಾಕಲು ಹೊರಟಿದ್ದಾರೆ.
ಬಿಬಿಎಂಪಿಯಷ್ಟೇ ಕಾರ್ಯವ್ಯಾಪ್ತಿಯನ್ನ ಹೊಂದಿರುವ ಜಲಮಂಡಳಿ ಜವಾಬ್ದಾರಿ ನಾಗರೀಕರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಲಿ ಇರುವ ಕಾರ್ಯವ್ಯವಸ್ಥೆಯನ್ನ ಪ್ರಸ್ತುತ ಸ್ಥಿತಿಗೆ ತಕ್ಕಂತೆ ಮಂಡಳಿಯ ಕಾರ್ಯವ್ಯಾಪ್ತಿಯನ್ನ ಪುನರ್ ವಿನ್ಯಾಸಗೊಳಿಸುತ್ತೇವೆ ಅಂತ ಹೊಸದಾಗಿ ಹೆಚ್ಚುವರಿ ಹುದ್ದೆ ಸೃಷ್ಟಿಸಲು ಮುಂದಾಗಿದೆ.ಸದ್ಯ ಮಂಡಳಿಯಲ್ಲಿ 6 ಚೀಫ್ ಎಂಜಿನಿಯರ್ 12 ಅಪರ ಅಭಿಯಂತರು ಇದ್ದಾರೆ.ಆದ್ರೆ, ಇಷ್ಟು ಸಾಲದು ಅಂತ ಮಂಡಳಿಯಲ್ಲಿ ಎಂಜಿನಿಯರ್ ಗಳು ಬಡ್ತಿ ಪಡೆಯಬೇಕು ಅಂತ ಹೆಚ್ಚುವರಿ ಹುದ್ದೆ ಸೃಷ್ಟಿಸಿ ಭಾರಿ ಗೋಲ್ಮಾಲ್ ನಡೆಸಿದ್ದಾರೆ ಅನ್ನೋ ಆರೋಪ ಇದೆ.ಈಗಾಗಲೇ ಬಡ್ತಿಗಾಗಿ ಹುದ್ದೆ ಸೃಷ್ಟಿಗೆ ಸರ್ಕಾರ ಫುಲ್ ಸ್ಟಾಪ್ ಇಟ್ಟಿದೆ. ಹೀಗಿರುವಾಗ ಅಗತ್ಯ ಇಲ್ಲದಿದ್ರೂ ನಿರ್ವಹಣೆ ವಿಭಾಗದಲ್ಲಿ 4 ಮುಖ್ಯ ಅಭಿಯಂತರ,9 ಅಪರ ಮುಖ್ಯ ಅಭಿಯಂತರ,17 ಕಾರ್ಯನಿರ್ವಹಕ ಅಭಿಯಂತರ,ತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ 2 ,ಚೀಫ್ ಎಂಜಿನಿಯರ್ 6, ಅಪರ ಮುಖ್ಯ ಅಭಿಯಂತರ ,12 ಕಾರ್ಯನಿರ್ವಾಹಕ ಅಭಿಯಂತರಗಳು,ಕಾವೇರಿ ವಲಯದಲ್ಲಿ 2 ಮುಖ್ಯ ಅಭಿಯಂತರ, 4 ಅಪರ ಮುಖ್ಯ ಅಭಿಯಂತರ, 8 ಕಾರ್ಯನಿರ್ವಾಹಕ ಅಭಿಯಂತರ ಹಾಗೂ ವಿನ್ಯಾಸ ಹಾಗೂ ಗುಣ ಆಶ್ವಾಸನೆ ವಲಯದಲ್ಲಿ 1 ಚೀಫ್ ಎಂಜಿನಿಯರ್ ಹುದ್ದೆ ಸೃಷ್ಟಿಸಿ ಮಂಡಳಿಗೆ ಹೊರೆ ಮಾಡಲು ಹೊರಟ್ಟಿದ್ದಾರೆ.
ಈಗಾಗಲೇ ಅನೇಕ ಹುದ್ದೆಗಳು ಸೃಷ್ಟಿಯಾಗಿದ್ದರೂ ಮಂಡಳಿಯಲ್ಲಿ ಅನೇಕರಿಗೆ ಯಾವುದೇ ಕಾರ್ಯಾಭಾರ ಇಲ್ಲ. ಕಾವೇರಿ 5ನೇ ಹಂತ ಕಾಮಗಾರಿ ಈ ವರ್ಷಾಂತ್ಯದಲ್ಲಿ ಮುಗಿದರೆ ಕೆಲಸದ ಒತ್ತಡ ಇರಲ್ಲ. ಅದೇ ರೀತಿ ಹಲವು ಮುಖ್ಯ ಅಭಿಯಂತರರು ಸಹ ಕಾರ್ಯಭಾರ ಇಲ್ಲದೆ ಪುಕ್ಕಟೆಯಾಗಿ ವೇತನ ನೀಡಲಾಗ್ತಿದೆ.ಹೀಗಿರುವಾಗ ಹೆಚ್ಚುವರಿ ಹುದ್ದೆಗಳ ಸೃಷ್ಟಿಯ ಹಿಂದೆ ಕೋಟ್ಯಂತರ ರೂ.ಅವ್ಯವಹಾರದ ಆರೋಪ ಇದೆ.
ಒಟ್ನಲ್ಲಿ ಈಗಾಗಲೇ ಅಕ್ರಮವಾಗಿ ಅಧಿಕಾರ ಅನುಭವಿಸ್ತಿರೋ ಪ್ರಭಾರ ಚೀಫ್ ಇಂಜಿನಿಯರ್ಗಳ ಕಳ್ಳಾಟಕ್ಕೆ ಬ್ರೇಕ್ ಹಾಕಬೇಕಿದೆ.