ಚಾಮರಾಜನಗರ: ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ, ಅವರೊಬ್ಬ ಸೀನಿಯರ್ ಲೀಡರ್ ಈ ರೀತಿ ಎಲ್ಲಾ ಮಾತನಾಡಬಾರದು ಎಂದು ಚಾಮರಾಜನಗರದಲ್ಲಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮಂತ್ರಿಯಾಗಿದ್ದವರು, ದೊಡ್ಡ ಸಮುದಾಯದ ನಾಯಕರು, ಈ ರೀತಿ ಎಲ್ಲಾ ಮಾತನಾಡುವುದು ಸರಿಯಲ್ಲ. ಇದನ್ನೂ ಮುಂದುವರೆಸಲೂ ಬಾರದು ಈಗಾಗಲೇ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆ ಬಗ್ಗೆ ಗಮನ ಹರಿಸಿದ್ದಾರೆ. ಸಿದ್ದರಾಮಯ್ಯ ನಿಮಿಷಕ್ಕೊಂದು ಮಾತನಾಡುತ್ತಾರೆ, ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ. ಪಿಎಸ್ಐ ಅಕ್ರಮ ನೇಮಕಾತಿ ಬಗ್ಗೆ ತನಿಖೆ ನಡೆಯುತ್ತಿದೆ, ಅವರ ಬಳಿ ಸೂಕ್ತ ದಾಖಲಾತಿ ಇದ್ದರೇ ಒದಗಿಸಲಿ ಎಂದರು.
ಅದುವಲ್ಲದೇ, ಸಿಎಂ ಬೊಮ್ಮಾಯಿ ಬದಲಾವಣೆ ಮಾತುಗಳು ಕಟ್ಟುಕಥೆ. ಸಿಎಂ ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ, ಓರ್ವ ಸರಳ ಮುಖ್ಯಮಂತ್ರಿ. ಜನಪರ ಆಗಿರುತ್ತಾರೆ ಎಂಬುದಕ್ಕೆ ಬೊಮ್ಮಾಯಿ ಉದಾಹರಣೆ. ಬೊಮ್ಮಾಯಿ ಅವರು ನಿರೀಕ್ಷೆಗೆ ಮೀರಿ ವೇಗವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ಪೀಡಿಗೆ ಕೆಲವರು ಶಾಕ್ ಆಗಿದ್ದಾರೆ, ಸಾಲು ಸಾಲು ಸಭೆ, ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿದೆ. ರಾಷ್ಟ್ರೀಯ ನಾಯಕರುಗಳೇ ಅವರ ಕೆಲಸ ಮೆಚ್ಚಿಕೊಂಡಿದ್ದು ಅವರ ಬದಲಾವಣೆ ಎಂಬುದು ಕೇವಲ ಮಾಧ್ಯಮಗಳ ಕಟ್ಟುಕಥೆ, ಸುಮ್ಮನೆ ಸೃಷ್ಟಿಸುತ್ತಾರೆ, ಹೊಡೆಯುತ್ತಾರೆ. ಇನ್ನಾದರೂ ಸಿಎಂ ಬದಲು ಎಂಬ ಸುದ್ದಿಯನ್ನು ನಿಲ್ಲಿಸಿ ಒಳ್ಳೆಯದನ್ನು ತೋರಿಸಿ ಎಂದು ಹೇಳಿದರು.
ಇನ್ನು, ಪಾಕ್ ಪರ ಘೋಷಣೆಯ ಬಗ್ಗೆ ಪ್ರತಿಕ್ರಿಯೆ. ಯಾರೋ ಕಿಡಿಗೇಡಿಗಳು ಮಾಡುವ ಕೃತ್ಯದಿಂದ ಸಮಾಜದ ಶಾಂತಿ ಕದಡುತ್ತಿದೆ. ತಿಳಿಗೇಡಿಗಳ ಮಾತಿನಿಂದ ಇಡೀ ಸಮಾಜವನ್ನು ದೂಷಿಸುವುದು ಸರಿಯಲ್ಲ. ಆಯಾ ಸಮಾಜದ ಮುಖಂಡರು ಕಿಡಿಗೇಡಿಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಅಜಾನ್ ಭಜಾನ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬದುಕಬೇಕೆಂದರೆ ಕಾನೂನು ಪಾಲನೆ ಅವಶ್ಯಕ ಕಾನೂನು ಉಲ್ಲಂಘಿಸಿದರೇ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಆತ ದೇಶದ್ರೋಹಿಯೇ. ಆದ್ದರಿಂದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದರು.